ಆ್ಯಪ್ನಗರ

ಪುಣೆ: ಮರಳು ಬಿಸಿ ಮಾಡಿದರೆ ಚಿನ್ನ ಬರುತ್ತದೆ ಎಂದು ನಂಬಿಸಿ ಜುವೆಲ್ಲರಿ ಮಾಲೀಕನಿಗೆ 50 ಲಕ್ಷ ವಂಚನೆ!

ಅಲ್ಲದೆ ಹಾಲು-ಪೇಪರ್‌ಗಳನ್ನು ನಮ್ಮ ಅಂಗಡಿಗೆ ತಂದು ಹಾಕುತ್ತಿದ್ದ. ಹೀಗಾಗಿ ಆತ ಇನ್ನಷ್ಟು ಪರಿಚಯಸ್ಥ ಆಗಿ ಬಿಟ್ಟ. ಮನೆಯವರನ್ನು ಆತ ಪರಿಚಯ ಮಾಡಿಕೊಂಡಿದ್ದ. ಒಂದು ದಿನ ಬ್ಯಾಗ್‌ನಲ್ಲಿ ಮರಳು ತಂದು, ಇದು ಬೆಂಗಾಲದ ಮರಳು, ಈ ಮರಳಿನಿಂದ ಚಿನ್ನದ ಗಟ್ಟಿ ತಯಾರಾಗುತ್ತದೆ ಎಂದು ಹೇಳಿದ್ದ. ಇದನ್ನು ನಂಬಿ ನಾನು ಮೂವತ್ತು ಲಕ್ಷ ನಗದು ಹಾಗೂ ಇಬ್ಬತ್ತು ಲಕ್ಷ ಮೌಲ್ಯದ ಚಿನ್ನ ನೀಡಿದ್ದೆ.

Vijaya Karnataka Web 23 Jan 2021, 11:03 am
ಪುಣೆ: ಟೋಪಿ ಹಾಕಿಸಿಕೊಳ್ಳುವವರು ಇರುವರೆಗೆ, ಟೋಪಿ ಹಾಕುವವರು ಇದ್ದೇ ಇರುತ್ತಾರೆ. ಇಲ್ಲೊಬ್ಬ ಚಿನ್ನದ ವ್ಯಾಪಾರಿಗೆ ಸಾಮಾನ್ಯ ಟೋಪಿಯಲ್ಲ, ಮಕ್ಮಲ್‌ ಟೋಪಿಯನ್ನೇ ವಂಚಕೊನೊಬ್ಬ ಹಾಕಿದ್ದಾನೆ. ಹೌದು, ಪುಣೆಯ ಹದಸ್ಪುರ್‌ನಲ್ಲಿ ಜ್ಯುವೆಲ್ಲರಿ ಅಂಗಡಿ ಹೊಂದಿರುವ ಮಾಲೀಕನಿಗೆ ಪರಿಚಯಸ್ಥ ವ್ಯಕ್ತಿಯೊಬ್ಬ ಪಶ್ಚಿಮ ಬಂಗಾಳದ ಮ್ಯಾಜಿಕ್‌ ಮರಳು ಎಂದು ಹೇಳಿ, ನಾಲ್ಕು ಕೆಜಿ ಮರಳು ತಂದುಕೊಟ್ಟಿದ್ದಾನೆ.
Vijaya Karnataka Web Gold

ಈ ಮರಳನ್ನು ಬಿಸಿ ಮಾಡಿದರೆ ಚಿನ್ನ ಸೃಷ್ಟಿಯಾಗುತ್ತದೆ ಎಂದು ಪುಂಗಿ ಊದಿದ್ದಾನೆ. ಈತನ ಮಾತನ್ನು ನಂಬಿ ಮಾಲೀಕ, ವಂಚಕನಿಗೆ ಬರೋಬ್ಬರಿ ಐವತ್ತು ಲಕ್ಷ ನೀಡಿದ್ದಾನೆ. ಆದರೆ ನಂತರ ಮರಳು ಬಿಸಿ ಮಾಡಿದರೆ ಚಿನ್ನ ಬಂದಿಲ್ಲ, ಹಣವೂ ಹೋದಂತೆ ಆಗಿದೆ. ಹೌದು, ಈ ಸಂಬಂಧ ಪುಣೆ ಪೊಲೀಸ್‌ ಠಾಣೆಯಲ್ಲಿ ಜುವೆಲ್ಲರಿ ಮಾಲೀಕ ದೂರು ದಾಖಲಿಸಿದ್ದು, ವ್ಯಕ್ತಿಯೊಬ್ಬ ಒಂದು ವರ್ಷದ ಹಿಂದೆ ಅಂಗಡಿಗೆ ಬಂದು ಪರಿಚಯ ಮಾಡಿಕೊಂಡಿದ್ದ.

ಅಲ್ಲದೆ ಹಾಲು-ಪೇಪರ್‌ಗಳನ್ನು ನಮ್ಮ ಅಂಗಡಿಗೆ ತಂದು ಹಾಕುತ್ತಿದ್ದ. ಹೀಗಾಗಿ ಆತ ಇನ್ನಷ್ಟು ಪರಿಚಯಸ್ಥ ಆಗಿ ಬಿಟ್ಟ. ಮನೆಯವರನ್ನು ಆತ ಪರಿಚಯ ಮಾಡಿಕೊಂಡಿದ್ದ. ಒಂದು ದಿನ ಬ್ಯಾಗ್‌ನಲ್ಲಿ ಮರಳು ತಂದು, ಇದು ಬೆಂಗಾಲದ ಮರಳು, ಈ ಮರಳಿನಿಂದ ಚಿನ್ನದ ಗಟ್ಟಿ ತಯಾರಾಗುತ್ತದೆ ಎಂದು ಹೇಳಿದ್ದ. ಇದನ್ನು ನಂಬಿ ನಾನು ಮೂವತ್ತು ಲಕ್ಷ ನಗದು ಹಾಗೂ ಇಬ್ಬತ್ತು ಲಕ್ಷ ಮೌಲ್ಯದ ಚಿನ್ನ ನೀಡಿದ್ದೆ.

ಭಾರತಕ್ಕೆ ವಿಭಿನ್ನ ಧನ್ಯವಾದ: ಸಂಜೀವಿನ ಹೊತ್ತು ತರುವ ಹನುಮಂತನಿಗೆ ಹೋಲಿಸಿದ ಬ್ರೆಜಿಲ್‌ ಅಧ್ಯಕ್ಷ ಟ್ವೀಟ್‌!

ನಂತರ ಮನೆಗೆ ಹೋಗಿ ಬಿಸಿ ಮಾಡಿದೆ. ಆದರೆ ತಾನು ಮೋಸ ಹೋಗಿರುವುದು ಅರಿವಾಯ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪೊಲೀಸರು ಆತನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ