ಆ್ಯಪ್ನಗರ

ಮೇ.1 ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ದೇಶದ ಎರಡನೇ ರಾಜ್ಯವಾಗಿ ಹೊರಹೊಮ್ಮಿದ ಪಂಜಾಬ್!

ಇದೇ ಏ.14ರಂದು ಕೊನೆಗೊಳ್ಳಲಿರುವ ಲಾಕ್‌ಡೌನ್ ಆದೇಶವನ್ನು ಮೇ.1ರವರೆಗೂ ವಿಸ್ತರಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಒಡಿಶಾ ಬಳಿಕ ಏ.30ರವೆರೆಗೆ ಲಾಕ್‌ಡೌನ್ ವಿಸ್ತರಿಸಿದ ದೇಶದ ಎರಡನೇ ರಾಜ್ಯವಾಗಿ ಪಂಜಾಬ್ ಹೊರಹೊಮ್ಮಿದೆ.

Vijaya Karnataka Web 10 Apr 2020, 5:58 pm
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಸರ್ಕಾರ ಲಾಕ್‌ಡೌನ್ ಅವಧಿಯನ್ನು ಮೇ.1 ರವೆರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದು, ಒಡಿಶಾ ಬಳಿಕ ಈ ನಿರ್ಧಾರ ಕೈಗೊಂಡ ಎರಡನೇ ರಾಜ್ಯವಾಗಿ ಹೊರಹೊಮ್ಮಿದೆ.
Vijaya Karnataka Web punjab (1)
ಸಂಗ್ರಹ ಚಿತ್ರ


ರೈತರಿಗಾಗಿ ಜಿಲ್ಲಾವಾರು ಲಾಕ್‌ಡೌನ್ ಸಡಿಲಿಕೆಯ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ, ಇದೀಗ ಸಾರ್ವಜನಿಕರಿಗಾಗಿ ಹೇರಲಾಗಿರುವ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವ ನಿರ್ಣಯ ಕೈಗೊಂಡಿದೆ.

ಏ.30ರವರೆಗೆ ಲಾಕ್‌ಡೌನ್‌ ಮುಂದುವರಿಸಿದ ಒಡಿಶಾ: ಈ ನಿರ್ಧಾರ ಕೈಗೊಂಡ ಮೊದಲ ರಾಜ್ಯ

ಪಂಜಾಬ್‌ನಲ್ಲಿ ಕೊರೊನಾ ವೈರಸ್ ಹರಡುತ್ತಿರುವ ವೇಗ ಮತ್ತು ಸೋಂಕಿತರ ಸಂಖ್ಯೆ ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕ್ಯಾ.ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.


ಅಲ್ಲದೇ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಹರಿಯಾಣದಲ್ಲಿ ಆಗುವ ಬದಲಾವಣೆಗಳೂ ಕೂಡ ರಾಜ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಅವಧಿಯನ್ನು ಮೇ.1 ರವೆರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕ್ಯಾ.ಸಿಂಗ್ ಮಾಹಿತಿ ನೀಡಿದರು.


ಬಿಗ್ ಬ್ರೇಕಿಂಗ್: ಒಂದು ಷರತ್ತಿನ ಮೇಲೆ ಲಾಕ್‌ಡೌನ್ ಸಡಿಲಿಸಿದ ಪಂಜಾಬ್ ಸರ್ಕಾರ!

ಪಂಜಾಬ್‌ನಲ್ಲಿ ಇದುವರೆಗೂ ಒಟ್ಟು 132 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಇದುವರೆಗೂ 11 ಜನ ಈ ಮಾರಕ ವೈರಾಣುವಿಗೆ ಬಲಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ