ಆ್ಯಪ್ನಗರ

ಮತ್ತೆ ಪಾಕ್ ಪರ ಬ್ಯಾಟ್‌ ಬೀಸಿದ ನವಜೋತ್ ಸಿಂಗ್ ಸಿಧು: ಶಾಂತಿ ಮಾತುಕತೆಗೆ ಒಲವು

ಮಾಜಿ ಬ್ಯಾಟ್ಸ್‌ಮನ್ ಹಾಗೂ ಪಂಜಾಬ್ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಮತ್ತೆ ಪಾಕಿಸ್ತಾನದ ಪರ ಬ್ಯಾಟ್ ಬೀಸಿದ್ದಾರೆ. ಪಾಕಿಸ್ತಾನದ ಜತೆಗೆ ಭಾರತ ಸರಕಾರ ಮಾತುಕತೆ ನಡೆಸಬೇಕು ಎಂದಿದ್ದಾರೆ.

Vijaya Karnataka Web 28 Feb 2019, 3:46 pm
ಹೊಸದಿಲ್ಲಿ: ಪಂಜಾಬ್‌ನ ಕಾಂಗ್ರೆಸ್ ಸರಕಾರದ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಮತ್ತೆ ಪಾಕ್‌ ಪರ ಬ್ಯಾಟ್‌ ಬೀಸಿದ್ದಾರೆ. ಪಾಕಿಸ್ತಾನದ ಜತೆಗೆ ಭಾರತ ಮಾತುಕತೆ ನಡೆಸಲಿ ಎಂದು ನವಜೋತ್ ಸಿಂಗ್ ಸಿಧು ಪತ್ರದ ಮೂಲಕ ಮೋದಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಭಾರತದ ಜತೆ ಮಾತುಕತೆಗೆ ಸಿದ್ಧ ಎಂದ ಪಾಕಿಸ್ತಾನದ ನಿಲುವಿಗೆ ಕ್ಯಾಬಿನೆಟ್ ಸಚಿವ ಸಿಧು ಬೆಂಬಲ ನೀಡಿದ್ದಾರೆ.
Vijaya Karnataka Web navjot_singh_sidhu


ಟ್ವೀಟ್‌ನಲ್ಲಿ ತನ್ನ ಲೆಟರ್‌ಹೆಡ್‌ ವುಳ್ಳ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದೂ ಈ ಪತ್ರದ ಪ್ರತಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಇತ್ತೀಚಿನ ದಿನಗಳಲ್ಲಿ ಭಯ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ನಾನು ಈ ಹಿಂದೆ ಹೇಳಿದಂತೆ ಮಾತುಕತೆ ಹಾಗೂ ರಾಜತಾಂತ್ರಿಕ ಒತ್ತಡಗಳ ಮೂಲಕವೇ ಎರಡೂ ರಾಷ್ಟ್ರಗಳ ನಡುವೆ ಸಮಸ್ಯೆಗೆ ಪರಿಹಾರ ಸಿಗಲಿದೆ. ನಮಗೆ ಈ ಆಯ್ಕೆಯಿದೆ'' ಎಂದು ಮತ್ತೆ ಪುನರುಚ್ಚರಿಸಿದ್ದಾರೆ.

ಜತೆಗೆ, ಭಯೋತ್ಪಾದನೆಗೆ ಉತ್ತರ ಎಂದರೆ ಶಾಂತಿ, ಅಭಿವೃದ್ಧಿ ಹಾಗೂ ಪ್ರಗತಿ. ಅಭಿನಂದನ್‌ ನಮ್ಮ ದೇಶವನ್ನು ಹಾಗೂ ತನ್ ಪ್ರೀತಿಪಾತ್ರರನ್ನು ಬಿಟ್ಟು ಹೋಗುವಂತೆ ದೇಶದ ಯಾವ ಮಣ್ಣಿನ ಮಗನೂ ಬಿಟ್ಟುಹೋಗಬಾರದು. ಈ ರೀತಿಯ ಘಟನೆಗಳು ಉಲ್ಭಣಿಸಿದರೆ ಇಂತಹ ಘಟನೆಗಳು ಹೆಚ್ಚಾಗುತ್ತದೆ. ಎರಡೂ ದೇಶಗಳಿಗೆ ತುಂಬಲಾರದ ನಷ್ಟವಾಗಲಿದೆ'' ಎಂದೂ ಪಂಜಾಬ್ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಪತ್ರದಲ್ಲಿ ಬರೆದಿದ್ದಾರೆ.


ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿದ್ದ ಪಂಜಾಬ್‌ನ ಕಾಂಗ್ರೆಸ್ ಸಚಿವ ನವಜೋತ್ ಸಿಂಗ್ ಸಿಧು, ''ಕೆಲವು ಭಯೋತ್ಪಾದಕ ಸಂಘಟನೆಗಳು ಎಸಗುವ ಕೃತ್ಯಕ್ಕೆ ಇಡೀ ಪಾಕಿಸ್ತಾನವನ್ನೇ ದ್ವೇಷಿಸುವುದೇಕೆ'' ಎಂದು ಪ್ರಶ್ನಿಸಿದ್ದರು. ಅಲ್ಲದೆ,'' ಉಗ್ರರ ದಾಳಿ ಹೇಡಿಗಳ ಕೃತ್ಯ. ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹಿಂಸಾಚಾರ ಎಂದಿಗೂ ಖಂಡನೀಯ. ಹಾಗೂ ಅದನ್ನು ಮಾಡಿದವರಿಗೆ ಶಿಕ್ಷೆಯಾಗಲೇಬೇಕು'' ಎಂದು ಹೇಳಿದ್ದರು.

ಜತೆಗೆ, ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಇಡೀ ದೇಶ ಆಕ್ರೋಶದಿಂದ ಕುದಿಯುತ್ತಿದ್ದರೆ, ಸಚಿವ ನವಜೋತ್‌ ಸಿಂಗ್ ಸಿಧು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ ಎಂದು ಸಲಹೆ ನೀಡಿ ಮತ್ತಷ್ಟು ಆಕ್ರೋಶಕ್ಕೆ ಗುರಿಯಾಗಿದ್ದರು. ಈಗ ಮತ್ತ ಪಾಕ್ ಪರ ಸಿದ್ದು ಬ್ಯಾಟ್ ಬೀಸಿದ್ದು ಮತ್ತಷ್ಟು ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ