ಆ್ಯಪ್ನಗರ

ಪಂಜಾಬ್‌ ಮತ್ತು ಗೋವಾಗಳಲ್ಲಿ ಮತದಾನ ಆರಂಭ

ಪಂಜಾಬ್‌ ಮತ್ತು ಗೋವಾದಲ್ಲಿ ವಿಧಾನಸಭೆ ಸ್ಥಾನಗಳಿಗೆ ಮತದಾನ ಆರಂಭಗೊಂಡಿದೆ.

ಏಜೆನ್ಸೀಸ್ 4 Feb 2017, 10:34 am
ಪಣಜಿ/ ಚಂಡೀಗಢ: ಪಂಜಾಬ್‌ ಮತ್ತು ಗೋವಾದಲ್ಲಿ ವಿಧಾನಸಭೆ ಸ್ಥಾನಗಳಿಗೆ ಮತದಾನ ಆರಂಭಗೊಂಡಿದೆ. ಪಂಜಾಬ್‌ ವಿಧಾನಸಭೆಯ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 1145 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಾರ್ಟಿ ಮಧ್ಯೆ ಭಾರಿ ಸ್ಪರ್ಧೆ ಇದೆ.
Vijaya Karnataka Web punjab goa voting begins
ಪಂಜಾಬ್‌ ಮತ್ತು ಗೋವಾಗಳಲ್ಲಿ ಮತದಾನ ಆರಂಭ


89ರ ಹರೆಯದ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್‌, ಕಾಂಗ್ರೆಸ್‌ನ ಕ್ಯಾ. ಅಮರಿಂದರ್‌ ಸಿಂಗ್‌, ವಿವಾದಾತ್ಮಕ ಆಪ್‌ ಸಂಸದ ಭಗವಂತ್‌ ಮಾನ್‌, ನವಜೋತ್‌ ಸಿಂಗ್‌ ಸಿಧು ಕಣದಲ್ಲಿರುವ ಪ್ರಮುಖರು.

ಗೋವಾದಲ್ಲಿ ಹಾಲಿ ಸಿಎಂ ಲಕ್ಷ್ಮೇಕಾಂತ್‌ ಪರ್ಸೇಕರ್‌, ಮಾಜಿ ಸಿಎಂಗಳಾದ ರವಿ ನಾಯ್ಕ್‌, ದಿಗಂಬರ ಕಾಮತ್‌, ಪ್ರತಾಪ್‌ ಸಿಂಹ ರಾಣೆ, ಲುಯಿಝಿನೋ ಫೆಲಿರೋ(ಕಾಂಗ್ರೆಸ್‌) ಕಣದಲ್ಲಿದ್ದಾರೆ. ಇಲ್ಲಿ ಒಟ್ಟು 40 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 250 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ