ಆ್ಯಪ್ನಗರ

ಪಂಜಾಬ್‌ಬಲ್ಲಿ ಐಎಸ್‌ಐ ಮಾಹಿತಿದಾರನ ಬಂಧನ

ಭಾರತದ ಮಿಲಿಟರಿ ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಿ ವಾಟ್ಸ್‌ಆ್ಯಪ್‌ ಮೂಲಕ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ರವಾನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

PTI 1 Jul 2019, 5:00 am
ಫರೀದ್‌ಕೋಟ್‌: ಭಾರತದ ಮಿಲಿಟರಿ ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಿ ವಾಟ್ಸ್‌ಆ್ಯಪ್‌ ಮೂಲಕ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ರವಾನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
Vijaya Karnataka Web punjab man arrested for spying passing info to paks isi via whatsapp
ಪಂಜಾಬ್‌ಬಲ್ಲಿ ಐಎಸ್‌ಐ ಮಾಹಿತಿದಾರನ ಬಂಧನ

ಪಂಜಾಬ್‌ನ ಮೋಗಾ ಜಿಲ್ಲೆಯ ನಿವಾಸಿ ಸುಖವಿಂದರ್‌ ಸಿಂಗ್‌ ಸಿಧು ಬಂಧಿತ ಆರೋಪಿ. ಹಲವು ವರ್ಷಗಳಿಂದ ಫರೀದ್‌ಕೋಟ್‌ನಲ್ಲಿ ವಾಸವಾಗಿದ್ದ ಈತ, 2015ರಲ್ಲಿ ಗುರುನಾನಕ್‌ ಜಯಂತಿ ಅಂಗವಾಗಿ ಪಾಕಿಸ್ತಾನಕ್ಕೆ ಯಾತ್ರೆ ಹೋಗಿದ್ದ. ಆ ವೇಳೆ ಅಲ್ಲಿನ ಐಎಸ್‌ಐ ಏಜೆಂಟರ ಜತೆ ಈತನಿಗೆ ಸಂಪರ್ಕ ಬೆಳೆದಿತ್ತು. ಅದಾಗಿ ದೇಶಕ್ಕೆ ವಾಪಸ್‌ ಆದ ಮೇಲೆ ಇಲ್ಲಿನ ಸೇನಾ ಪಡೆಗಳ ಚಲನವಲನ ಹಾಗೂ ಇತರೆ ರಹಸ್ಯ ಮಾಹಿತಿಗಳನ್ನು ಅಲ್ಲಿನ ಏಜೆಂಟರಿಗೆ ರವಾನಿಸುತ್ತಿದ್ದ ಎಂದು ಪೊಲೀಸ್‌ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಇಂತಹದ್ದೇ ದೇಶ ವಿರೋಧಿ ಚಟುವಟಿಕೆ ಆರೋಪದ ಮೇಲೆ ದಿಲ್ಲಿಯ 42 ವರ್ಷದ ವ್ಯಕ್ತಿಯೊಬ್ಬನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಅದಾಗಿ ಕೆಲವು ದಿನಗಳ ಬಳಿಕ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಮತ್ತೊಬ್ಬ ಶತ್ರು ದೇಶದ ಶಂಕಿತ ಮಾಹಿತಿದಾರರನ್ನು ಬಂಧಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ