ಆ್ಯಪ್ನಗರ

ಸೋನಿಯಾ ಸಾರಥ್ಯದಲ್ಲಿ ‘ರಫೇಲ್‌’ ಪ್ರತಿಭಟನೆ

ರಫೇಲ್‌ ಒಪ್ಪಂದವನ್ನು ದೇಶದಲ್ಲೇ ಅತಿದೊಡ್ಡ ರಕ್ಷಣಾ ಹಗರಣ ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್‌ ಪ್ರಕರಣದ ತನಿಖೆಗೆ ಆಗ್ರಹಿಸಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿತು...

Vijaya Karnataka 11 Aug 2018, 10:03 am
ಹೊಸದಿಲ್ಲಿ: ರಫೇಲ್‌ ಒಪ್ಪಂದವನ್ನು ದೇಶದಲ್ಲೇ ಅತಿದೊಡ್ಡ ರಕ್ಷಣಾ ಹಗರಣ ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್‌ ಪ್ರಕರಣದ ತನಿಖೆಗೆ ಆಗ್ರಹಿಸಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿತು.
Vijaya Karnataka Web sonia


ಸಂಸತ್‌ ಮುಂಗಾರು ಅಧಿವೇಶನದ ಕೊನೆಯದಿನವಾದ ಶುಕ್ರವಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.

ರಾಜ್‌ ಬಾಬ್ಬರ್‌, ಗುಲಾಂ ನಬಿ ಆಜಾದ್‌,ಆನಂದ್‌ ಶರ್ಮಾ, ಅಂಬಿಕಾ ಸೋಣಿ, ಸಿಪಿಐನ ಡಿ. ರಾಜಾ, ಆಪ್‌ ಸಂಸದ ಸುಶೀಲ್‌ ಗುಪ್ತಾ ಸೇರಿದಂತೆ ಹಲವು ಪ್ರತಿಪಕ್ಷ ಮುಖಂಡರು ''ಜಂಟಿ ಸದನ ಸಮಿತಿಯಿಂದ ತನಿಖೆಯಾಗಬೇಕು'', ''ಮೋದಿ ಭ್ರಷ್ಟಾಚಾರ ಬಯಲಾಗಿದೆ'' ಇತ್ಯಾದಿಯಾಗಿ ಬರೆಯಲಾದ ಪ್ರತಿಭಟನಾ ಫಲಕಗಳನ್ನು ಹಿಡಿದು ಘೋಷಣೆ ಮೊಳಗಿಸಿದರು.

''ಒಂದು ರಫೇಲ್‌ ಯುದ್ಧ ವಿಮಾನದ ಬೆಲೆ 540 ಕೋಟಿಯಿಂದ 1,600 ಕೋಟಿ ರೂ.ಗೆ ಏರಿಕೆಯಾದ ವಿಸ್ಮಯ ಏನೆಂಬುದನ್ನು ಸರಕಾರ ವಿವರಿಸಬೇಕು,'' ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಆಗ್ರಹಿಸಿದರು.

ದಾಖಲೆ ತೋರಿಸಿ: ಪ್ರತಿಪಕ್ಷಗಳ ಆರೋಪ ಮತ್ತು ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿಜಯ್‌ ಗೋಯೆಲ್‌ ಅವರು, ಪ್ರಧಾನಿ ಅವರಿಂದ ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ದಾಖಲೆ ಇದ್ದರೆ ತೋರಿಸಲಿ,'' ಎಂದು ತಿರುಗೇಟು ನೀಡಿದರು.

ವೆಂಕಯ್ಯ ಆಹ್ವಾನಕ್ಕೆ ಸಡ್ಡು: ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಶುಕ್ರವಾರ ಆಯೋಜಿಸಿದ್ದ ಉಪಾಹಾರ ಕೂಟದ ಆಹ್ವಾನವನು ಪ್ರತಿಪಕ್ಷ ನಾಯಕರು ತಿರಸ್ಕರಿಸಿದರು. ರಫೇಲ್‌ ಪ್ರಕರಣದ ತನಿಖೆಗೆ ಆದೇಶಿಸಲು ವೆಂಕಯ್ಯ ನಾಯ್ಡು ಅನುಮತಿಸದಿರುವುದನ್ನು ಖಂಡಿಸಿ, ಪ್ರತಿಪಕ್ಷ ಮುಖಂಡರು ಉಪಾಹಾರ ಕೂಟಕ್ಕೆ ಗೈರಾದರು. ಅಲ್ಲದೆ, ಸದನದೊಳಗೆ ಪ್ರತಿಭಟನೆಯ ಭಾಗವಾಗಿ ಮೈಕ್ರೋಫೋನ್‌ ಆಫ್‌ ಮಾಡಿ, ಎರಡು ವಿಧೇಯಕಗಳನ್ನು ತರಾತುರಿಯಲ್ಲಿ ಅನುಮೋದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ