ಆ್ಯಪ್ನಗರ

ರಾಹುಲ್‌ಗೆ ಮುಳುವಾಯ್ತು ರಫೆಲ್ ಡೀಲ್ ಹೇಳಿಕೆ

ಲೋಕಸಭೆಯಲ್ಲಿ ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಂದರ್ಭ ಪ್ರಧಾನಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಫ್ರಾನ್ಸ್ ಸರಕಾರದ ಜತೆ ಭಾರತ ಮಾಡಿಕೊಂಡಿದ್ದ ರಫೆಲ್ ಜೆಟ್‌ ಖರೀದಿ ಒಪ್ಪಂದದ ಬಗ್ಗೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

Vijaya Karnataka Web 20 Jul 2018, 9:07 pm
ಹೊಸದಿಲ್ಲಿ: ಲೋಕಸಭೆಯಲ್ಲಿ ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಂದರ್ಭ ಪ್ರಧಾನಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಫ್ರಾನ್ಸ್ ಸರಕಾರದ ಜತೆ ಭಾರತ ಮಾಡಿಕೊಂಡಿದ್ದ ರಫೆಲ್ ಜೆಟ್‌ ಖರೀದಿ ಒಪ್ಪಂದದ ಬಗ್ಗೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.
Vijaya Karnataka Web rahul gandhi 2


2008ರಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಭದ್ರತಾ ಒಪ್ಪಂದ ಏರ್ಪಟ್ಟಿದ್ದು, ಅದರ ಅನ್ವಯ ರಫೇಲ್ ಖರೀದಿಯ ಕುರಿತಾದ ಎಲ್ಲ ದಾಖಲೆಗಳು ರಹಸ್ಯ ಒಪ್ಪಂದವಾಗಿದ್ದು, ಅದನ್ನು ಬಹಿರಂಗಪಡಿಸುವಂತಿಲ್ಲ.

ರಾಹುಲ್ ವಿವಾದದ ಬೆನ್ನಲ್ಲೇ, ಫ್ರಾನ್ಸ್ ಪ್ರತಿಕ್ರಿಯೆ ನೀಡಿದ್ದು, ಭದ್ರತಾ ಮತ್ತು ಮಿಲಿಟರಿ ಖರೀದಿ ಕುರಿತ ದಾಖಲೆಗಳನ್ನು ಬಹಿರಂಗಪಡಿಸುವುದು ಒಪ್ಪಂದವನ್ನು ಮುರಿದಂತೆ ಎಂದಿದೆ.


ರಫೆಲ್ ಯುದ್ಧವಿಮಾನ ಖರೀದಿ ಕುರಿತು ಪ್ರಧಾನಿ ಒತ್ತಡದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ. ಅವರು ಖರೀದಿ ಕುರಿತ ದಾಖಲೆ ಬಹಿರಂಗಪಡಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರು. ಹೀಗಾಗಿ ಫ್ರಾನ್ಸ್‌ನ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.


ಯುದ್ಧವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ರಾಹುಲ್ ಆರೋಪವಾಗಿದೆ. ಆದರೆ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಖರೀದಿ ಒಪ್ಪಂದವಾಗಿರುವುದರಿಂದ ರಾಹುಲ್‌ಗೆ ತನ್ನ ಹೇಳಿಕೆಯೇ ತಿರುಗುಬಾಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ