ಆ್ಯಪ್ನಗರ

ಲೋಕಸಭೆ ಸರ್ಕಾರದ 'ಲೌಡ್ ಸ್ಪೀಕರ್': ರಾಹುಲ್ ಗಾಂಧಿ ವ್ಯಂಗ್ಯ!

ಸದನದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಲು ತಮಿಳು ಸಂಸದರಿಗೆ ಸ್ಪೀಕರ್ ಓಂ ಬಿರ್ಲಾ ಅನುವು ಮಾಡಿಕೊಡದಿರುವುದು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಸ್ಪೀಕರ್ ತಮಿಳು ಭಾಷೆಗೆ ಹಾಗೂ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ಪೀಕರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 17 Mar 2020, 6:27 pm
ನವದೆಹಲಿ: ಲೋಕಸಭೆ ಎನ್ನುವುದು ಸರ್ಕಾರದ ಲೌಡ್ ಸ್ಪೀಕರ್ ಆಗಿದ್ದು, ಖುದ್ದು ಸ್ಪೀಕರ್ ಸರ್ಕಾರದ ಪ್ರತಿನಿಧಿಯಂತೆ ವರ್ತಿಸುತ್ತಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗಂಭಿರ ಆರೋಪ ಮಾಡಿದ್ದಾರೆ.
Vijaya Karnataka Web Speaker LS speaker
ಸದನದಲ್ಲಿ ತಮಿಳು ಮಾತನಾಡಲು ಅವಕಾಶ ನೀಡದ ಸ್ಪೀಕರ್ ನಡೆಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.


ತಮಿಳಿನಲ್ಲಿ ಪ್ರಶ್ನೆ ಕೇಳ ಬಯಸಿದ ತಮಿಳುನಾಡು ಸಂಸದರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಡೆದು, ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೆಳಿ ಎಂದು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಪಕ್ಷಗಳು, ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಸದನದಲ್ಲಿ ಮಾತನಾಡುವ ಹಕ್ಕಿದೆ ಎಂದು ಹೇಳಿದರು.

ಸ್ಪೀಕರ್ ವಿಪಕ್ಷಗಳ ಹಕ್ಕುಗಳನ್ನು ಮೊಟಕುಗೊಳಿಸಲು ಯತ್ನಿಸುತ್ತಿದ್ದು, ಅವರೇ ಖುದ್ದು ಸರ್ಕಾರದ ಲೌಡ್ ಸ್ಪೀಕರ್ ಅಂತೆ ವರ್ತಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.


ತಮಿಳು ಸಂಸದರಿಗೆ ತಮಿಳು ಭಾಷೆಯಲ್ಲಿ ಮಾತನಾಡಲು ಅವಕಾಶ ಕೊಡದಿರುವುದು ತಮಿಳು ಅಸ್ಮಿತೆಗೆ ಮಾಡಿದ ಅಪಮಾನ ಎಂದು ರಾಹುಲ್ ಗಾಂದಿ ಸ್ಪೀಕರ್ ಕಿಡಿಕಾರಿದರು.

'ಲೋಕ'ದಲ್ಲಿ ದೆಹಲಿ ದಂಗೆ ಚರ್ಚೆ: ಪ್ರಧಾನಿ ಏಕಿಲ್ಲ ಎಂದು ಪ್ರಶ್ನಿಸಿದ ಪ್ರತಿಪಕ್ಷಗಳು!

ಇನ್ನು ಸ್ಪೀಕರ್ ನಿರ್ಣಯಕ್ಕೆ ಡಿಎಂಕೆ, ಎನ್ ಸಿಪಿ ಸೇರಿದಂತೆ ಪ್ರಮುಖ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಸರ್ಕಾರದ ಪ್ರಯತ್ನದಂತೆ ಭಾಸವಾಗುತ್ತಿದ್ದಂತೆ ಎಂದು ಹರಿಹಾಯ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ