ಆ್ಯಪ್ನಗರ

ಮಸೂದ್‌ ಅಜರ್‌ಗೆ ಜೀ ಎಂದ ರಾಹುಲ್‌ !

ರಾಹುಲ್‌ ಎಡವಟ್ಟಿನ ಆರು ಸೆಕೆಂಡುಗಳ ಈ ವಿಡಿಯೊ ಕ್ಲಿಪ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿ, ಕಾಂಗ್ರೆಸ್‌ ಅಧ್ಯಕ್ಷರನ್ನು ಟೀಕಿಸಿದೆ.

Vijaya Karnataka 12 Mar 2019, 5:00 am
ಹೊಸದಿಲ್ಲಿ: ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು 'ಮಸೂದ್‌ ಅಜರ್‌ ಜೀ' ಎಂದು ಸಂಬೋಧಿಸಿ ಟೀಕೆಗೆ ಗುರಿಯಾಗಿದ್ದಾರೆ. ರಾಹುಲ್‌ ಎಡವಟ್ಟಿನ ಆರು ಸೆಕೆಂಡುಗಳ ಈ ವಿಡಿಯೊ ಕ್ಲಿಪ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿ, ಕಾಂಗ್ರೆಸ್‌ ಅಧ್ಯಕ್ಷರ ಹಿಗ್ಗಾಮುಗ್ಗಾ ಟೀಕಿಸಿದೆ.
Vijaya Karnataka Web rahul


ದಿಲ್ಲಿಯಲ್ಲಿ ನಡೆದ ಪಕ್ಷದ ರಾರ‍ಯಲಿಯೊಂದರಲ್ಲಿ ರಾಹುಲ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರನ್ನು ಟೀಕಿಸುವ ಭರದಲ್ಲಿ 'ಅಜರ್‌ ಮಸೂದ್‌ ಜೀ' ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದರು. ಕಂದಹಾರ್‌ ವಿಮಾನ ಅಪಹರಣ ಪ್ರಸ್ತಾಪಿಸಿ, ''ಈ ಹಿಂದಿನ ಎನ್‌ಡಿಎ ಸರಕಾರದ ಅವಧಿಯಲ್ಲಿ ಅಜಿತ್‌ ಧೋವಲ್‌ ಅವರು 'ಮಸೂದ್‌ ಅಜರ್‌ ಜೀ' ಜತೆ ವಿಮಾನದಲ್ಲಿ ಅಫಘಾನಿಸ್ತಾನದ ರಾಜಧಾನಿ ಕಂದಹಾರ್‌ಗೆ ತೆರಳಿ ಆತನನ್ನು ಬಿಟ್ಟು ಬಂದರು,'' ಎಂದು ಹೇಳಿದ್ದರು.

ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ''ಪಾಕಿಸ್ತಾನ ಮತ್ತು ರಾಹುಲ್‌ ಅವರ ಮಧ್ಯೆ ಒಂದು ಸಾಮ್ಯತೆ ಇದೆ. ಅದೇನೆಂದರೆ ಇಬ್ಬರು ಭಯೋತ್ಪಾದಕರನ್ನು ಪ್ರೀತಿಸುತ್ತಾರೆ,'' ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಬಿಜೆಪಿಯ ಅನೇಕ ನಾಯಕರು ಇದು ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ ಮತ್ತು ಹಫೀಜ್‌ ಸಯೀದ್‌ನನ್ನು 'ಒಸಾಮಾಜೀ' ಮತ್ತು 'ಹಫೀಜ್‌ ಸಯೀದ್‌ ಸಾಹೇಬ್‌' ಎಂದು ಕರೆದು ವಿವಾದಕ್ಕೆ ಈಡಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ