ಆ್ಯಪ್ನಗರ

ಸದನದ ಗಾಂಭೀರ್ಯಕ್ಕೆ ಚ್ಯುತಿ ತಂದ ರಾಹುಲ್‌

ಅವರ ಈ ನಡತೆ ನೆಟ್ಟಿಗರ ಕಟು ವ್ಯಂಗ್ಯಕ್ಕೆ ಗುರಿಯಾಗಿದೆ. 'ಸಂಸತ್ತಿನಲ್ಲಿ ವರ್ತಿಸುವುದು ಹೇಗೆ ಎನ್ನುವ ಕುರಿತು ಅವರು ಮೊಬೈಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದರು ಅನಿಸುತ್ತೆ,'' ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

PTI 21 Jun 2019, 5:00 am
ಸೋತರೂ ಸುಧಾರಿಸದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಮ್ಮೆ ತಪ್ಪು ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಗುರುವಾರ ಜಂಟಿ ಅಧಿವೇಶನದ ವೇಳೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭಾಷಣ ಮಾಡುತ್ತಿದ್ದಾಗ ರಾಹುಲ್‌ ಅವರು ಮೊಬೈಲ್‌ ನೋಡುವುದರಲ್ಲಿ ತಲ್ಲೀನರಾಗುವ ಮೂಲಕ ಸದನದ ಗಾಂಭೀರ್ಯಕ್ಕೆ ಚ್ಯುತಿ ತಂದಿದ್ದಾರೆ.
Vijaya Karnataka Web ls tv rahul

ಕೋವಿಂದ್‌ ಅವರು ಒಂದು ತಾಸು ಭಾಷಣ ಮಾಡಿದರು. ಈ ಅವಧಿಯುದ್ದಕ್ಕೂ ರಾಹುಲ್‌ ಗಾಂಧಿ, ಭಾಷಣದ ಕಡೆ ಗಮನ ಕೊಡದೇ ಮೊಬೈಲ್‌ನಲ್ಲಿ ಮೈಮರೆತರು. ಸುದ್ದಿ ಶೋಧ, ಟೆಕ್ಸ್ಟ್‌ ಟೈಪ್‌, ಫೋಟೊ ನೋಡುವುದು... ಇಂತಹದ್ದರಲ್ಲೇ ಕಾಲಹರಣ ಮಾಡಿದರು.

ಮೋದಿ ಸರಕಾರದ ಮೊದಲ ಅವಧಿಯ ಸಾಧನೆಗಳ ಬಗ್ಗೆ ಕೋವಿಂದ್‌ ಮಾತಾಡುವಾಗ ಆ ಅವಧಿಯ 20 ನಿಮಿಷಗಳ ಕಾಲ ರಾಹುಲ್‌ ತಮ್ಮ ತಾಯಿ ಸೋನಿಯಾ ಗಾಂಧಿ ಜತೆ ಮಾತಾಡಿ ಕಳೆದರು. ಈ ನಡುವೆಯೂ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಭಾಷಣವನ್ನು ಗಂಭೀರವಾಗಿಯೇ ಆಲಿಸಿ, ಆಗಾಗ ಚಪ್ಪಾಳ ತಟ್ಟಿ ಸ್ವಾಗತಿಸಿದರು. ಆದರೆ ರಾಹುಲ್‌ ಮಾತ್ರ ಇಡೀ ಅವಧಿ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು. ಉದಾಸೀನದ ಅವರ ವರ್ತನೆ ಕಂಡು ಸೋನಿಯಾ ಕೂಡ ಕಸಿವಿಸಿಗೊಂಡರು. ಕೆಲವು ಬಾರಿ ದುರುಗುಟ್ಟಿ ನೋಡಿ ಅವರ ವರ್ತನೆ ತಿದ್ದಲು ಯತ್ನಿಸಿದರು. ಆದರೆ, ಅದರಿಂದ ಏನೂ ಪ್ರಯೋಜನವಾಗಿಲಿಲ್ಲ.

ಅವರ ಈ ನಡತೆ ನೆಟ್ಟಿಗರ ಕಟು ವ್ಯಂಗ್ಯಕ್ಕೆ ಗುರಿಯಾಗಿದೆ. 'ಸಂಸತ್ತಿನಲ್ಲಿ ವರ್ತಿಸುವುದು ಹೇಗೆ ಎನ್ನುವ ಕುರಿತು ಅವರು ಮೊಬೈಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದರು ಅನಿಸುತ್ತೆ,'' ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ