ಆ್ಯಪ್ನಗರ

ಅಮಿತ್‌ ಶಾಗೆ 'ಕೊಲೆ ಆರೋಪಿ' ಎಂದು ಬೈದಿದ್ದ ಪ್ರಕರಣ: ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ಗೆ ಜಾಮೀನು

ಕೇಂದ್ರ ಗೃಹ ಸಚಿವರಿಗೆ ಕೊಲೆ ಆರೋಪಿ ಎಂದು ಹೇಳಿದ್ದ ರಾಹುಲ್ ಗಾಂಧಿ, ಮಾನನಷ್ಟ ಮೊಕದ್ದಮೆಯ ಬಿಸಿ ಎದುರಿಸುತ್ತಿದ್ದಾರೆ. ಇದೀಗ ಈ ಪ್ರಕರಣದಲ್ಲಿ ರಾಹುಲ್ ಜಾಮೀನು ಗಿಟ್ಟಿಸಿದ್ದಾರೆ. 10 ಸಾವಿರ ರೂ. ಬಾಂಡ್ ಮೇಲೆ ಜಾಮೀನು ಸಿಕ್ಕಿದೆ.

Vijaya Karnataka 11 Oct 2019, 8:49 pm
ಅಹಮದಾಬಾದ್‌: ಕಳೆದ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು 'ಕೊಲೆ ಆರೋಪಿ' ಎಂದು ಜರಿದಿದ್ದ ಪ್ರಕರಣದಲ್ಲಿಅಹಮದಾಬಾದ್‌ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಕೋರ್ಟ್‌, ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
Vijaya Karnataka Web amit shah rahul gandhi


ಶಾ ಅವರನ್ನು ಕೊಲೆ ಆರೋಪಿ ಎಂದಿದ್ದಕ್ಕೆ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ರಾಹುಲ್‌ ಕೋರ್ಟ್‌ಗೆ ಹಾಜರಾಗಿ ತಾವು ಯಾವುದೇ ಅಪರಾಧ ಎಸಗಿಲ್ಲ ಎಂದು ವಾದಿಸಿದರು. ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯವು 10 ಸಾವಿರ ರೂ. ಬಾಂಡ್‌ ಮೇಲೆ ರಾಹುಲ್‌ಗೆ ಜಾಮೀನು ನೀಡಿ, ವಿಚಾರಣೆಯನ್ನು ಡಿಸೆಂಬರ್‌ 7ಕ್ಕೆ ಮುಂದೂಡಿತು.

ಕಳೆದ ವರ್ಷದ ಏಪ್ರಿಲ್‌ 23ರಂದು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್‌ ಅವರು ಅಮಿತ್‌ ಶಾ ವಿರುದ್ಧ ಈ ರೀತಿ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಕಾರ್ಪೊರೇಟರ್‌ ಕೃಷ್ಣವಂಧನ್‌.ಬಿ ಎಂಬುವರು ಮಾನನಷ್ಟ ಖಟ್ಲೆ ದಾಖಲಿಸಿದ್ದರು. ಇದೇ ವೇಳೆ ರಾಹುಲ್‌, 'ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಸಹಕಾರ ಬ್ಯಾಂಕ್‌ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಭಾರಿ ಮೊತ್ತದ ನೋಟು ಬದಲಾವಣೆಯಲ್ಲಿಅಕ್ರಮ ಎಸಗಿದೆ' ಎಂದು ಆರೋಪಿಸಿದ್ದ ಹೇಳಿಕೆ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲೂ ಕೋರ್ಟ್‌ ವಿಚಾರಣೆ ಎದುರಿಸಿದರು.

ಟ್ರೋಲ್‌ ಮಗಾ ಆಡ್ಮಿನ್‌ ವಿರುದ್ಧದ ಕೇಸ್‌ ರದ್ದು: ಸರಕಾರಕ್ಕೇ 1 ಲಕ್ಷ ರೂ. ದಂಡ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ