ಆ್ಯಪ್ನಗರ

ಕಾಂಗ್ರೆಸ್‌ ನಾಯಕತ್ವ ತಳಮಳ ತಾತ್ಕಾಲಿಕ ಶಮನ

ಪಕ್ಷದ ಸೋಲಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕರ ಮನವೊಲಿಕೆ ಬಳಿಕ ಇನ್ನೂ 3-4 ತಿಂಗಳು ಪಕ್ಷದ ಸಾರಥ್ಯ ಮುಂದುವರಿಸಲು ಒಪ್ಪಿದ್ದಾರೆ.

Vijaya Karnataka Web 29 May 2019, 7:17 am
ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಬಳಿಕ ಪಕ್ಷದಲ್ಲಿ ಭುಗಿಲೆದ್ದಿದ್ದ ತಲ್ಲಣ ಮಂಗಳವಾರ ತಾತ್ಕಾಲಿಕವಾಗಿ ಶಮನವಾಗಿದೆ.
Vijaya Karnataka Web Rahul Gandhi


ಪಕ್ಷದ ಸೋಲಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕರ ಮನವೊಲಿಕೆ ಬಳಿಕ ಇನ್ನೂ 3-4 ತಿಂಗಳು ಪಕ್ಷದ ಸಾರಥ್ಯ ಮುಂದುವರಿಸಲು ಒಪ್ಪಿದ್ದಾರೆ.

''ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್‌ ರಾಜೀನಾಮೆ ಪ್ರಸ್ತಾಪವನ್ನು ಸರ್ವಾನುಮತದಿಂದ ತಿರಸ್ಕರಿಸಿದರೂ ಪದತ್ಯಾಗದ ವಿಷಯದಲ್ಲಿ ಪಕ್ಷದ ಅಧ್ಯಕ್ಷರ ನಿರ್ಧಾರ ಬದಲಾಗಿಲ್ಲ. ಪರ್ಯಾಯ ನಾಯಕರ ನೇಮಕವಾಗುವವರೆಗೂ ಮಾತ್ರ ಅಧಿಕಾರದಲ್ಲಿ ಮುಂದುವರಿಯಲು ಸಮ್ಮತಿಸಿದ್ದಾರೆ. ಇದೊಂದು ತಾತ್ಕಾಲಿಕ ಬಿಕ್ಕಟ್ಟು ಶಮನ ಸೂತ್ರವಷ್ಟೇ,'' ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಹಿರಿಯ ಮುಖಂಡರು ರಾಹುಲ್‌ ನಿವಾಸಕ್ಕೆ ಭೇಟಿ ನೀಡಿ, ಮನವೊಲಿಕೆ ಪ್ರಯತ್ನ ಮಾಡಿದರು.

ಈ ಮಧ್ಯೆ ಶೀಲಾ ದೀಕ್ಷಿತ್‌, ಶಶಿ ತರೂರ್‌ ಸೇರಿದಂತೆ ಪಕ್ಷದ ಬಹುತೇಕ ನಾಯಕರು ರಾಹುಲ್‌ ಸಾರಥ್ಯ ಮುಂದುವರಿಸಬೇಕೆಂದು ಮನವಿ ಮಾಡಿದ್ದಾರೆ. ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ಯಾದವ್‌ ಮುಂತಾದ ಮೈತ್ರಿ ಪಕ್ಷದ ನಯಕರೂ ರಾಹುಲ್‌ ನಡೆಯನ್ನು ಖಂಡಿಸಿದ್ದು, ಇದೊಂದು 'ಆತ್ಮಹತ್ಯೆಕಾರಕ ನಿರ್ಧಾರ' ಎಂದು ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ