ಆ್ಯಪ್ನಗರ

ಸತ್ಯ ಒಪ್ಪಿಕೊಂಡ ಭಾಗವತ್: ಆರ್‌ಎಸ್‌ಎಸ್‌ ಮುಖ್ಯಸ್ಥರ ವಿಜಯದಶಮಿ ಭಾಷಣ ಟೀಕಿಸಿದ ರಾಹುಲ್!

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿಜಯದಶಮಿ ಭಾಷಣವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಡಾಖ್ ಗಡಿ ಘರ್ಷಣೆ ಕುರಿತು ಭಾಗವತ್ ಅವರು ಆಡಿರುವ ಮಾತುಗಳು ಮೋದಿ ಸರ್ಕಾರ ಮುಚ್ಚಿಡುತ್ತಿರುವ ಸತ್ಯವನ್ನು ಅನಾವರಣಗೊಳಿಸಿದೆ ಎಂದು ಹರಿಹಾಯ್ದಿದ್ದಾರೆ.

Vijaya Karnataka Web 25 Oct 2020, 4:30 pm
ಹೊಸದಲ್ಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿಜಯದಶಮಿ ಭಾಷಣವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಡಾಖ್ ಗಡಿ ಘರ್ಷಣೆ ಕುರಿತು ಭಾಗವತ್ ಅವರು ಆಡಿರುವ ಮಾತುಗಳು ಮೋದಿ ಸರ್ಕಾರ ಮುಚ್ಚಿಡುತ್ತಿರುವ ಸತ್ಯವನ್ನು ಅನಾವರಣಗೊಳಿಸಿದೆ ಎಂದು ಹರಿಹಾಯ್ದಿದ್ದಾರೆ.
Vijaya Karnataka Web Mohan Bhagwat1
ಸಂಗ್ರಹ ಚಿತ್ರ


ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾಗವತ್ ತಮ್ಮ ಮಾತುಗಳಲ್ಲೇ ಭಾರತದ ನೆಲವನ್ನು ಚೀನಾ ನುಂಗಿ ಹಾಕಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿಎಎ, ಕೊರೊನಾ, ಚೀನಾ: ಮೋಹನ್ ಭಾಗವತ್ ಭಾಷಣದಲ್ಲಿ ಇಣುಕಿದ ಜ್ವಲಂತ ವಿದ್ಯಮಾನಗಳು!

ಚೀನಾ ನಮ್ಮ ನೆಲವನ್ನು ನುಂಗಿರುವುದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಚೆನ್ನಾಗಿ ಗೊತ್ತು. ಭಾಗವತ್ ಅವರ ಭಾಷಣದಲ್ಲೇ ಸರ್ಕಾರದ ದೌರ್ಬಲ್ಯ ಗೋಚರವಾಗುತ್ತಿದೆ ಎಂದು ರಾಹುಲ್ ತೀವ್ರ ವಾಗ್ದಾಳಿ ನಡೆಸಿದರು.


ಚೀನಾ ನಮ್ಮ ನೆಲದ ಮೇಲೆ ದಾಳಿ ಮಾಡಿ ಕಬಳಿಸಿದೆ ಎಂಬ ಸತ್ಯವನ್ನು ಮೋಹನ್ ಭಾಗವತ್ ಚೆನ್ನಾಗಿ ಬಲ್ಲರು. ಆದರೆ ಅದನ್ನು ನೇರವಾಗಿ ಹೇಳಲು ಭಾಗವತ್ ಅವರಿಗೆ ಧೈರ್ಯವಲ್ಲಿ ಎಂದು ಆಹುಲ್ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಆಗಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಾಗಲಿ, ಲಡಾಖ್ ಗಡಿಯಿಂದ ಚೀನಾವನ್ನು ಯಾವಾಗ ಹೊರದಬ್ಬಲಾಗುವುದು ಎಂಬುದನ್ನು ಹೇಳುತ್ತಿಲ್ಲ. ಆದರೆ ಕೇವಲ ವಿರಾವೇಶದ ಮಾತುಗಳನ್ನಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೊರೊನಾದಿಂದಾಗಿ ಕೆಲವರಿಗೆ ಕೋಮು ದ್ವೇಷ ಸಾಧಿಸಲಾಗಲಿಲ್ಲ: ಮೋಹನ್ ಭಾಗವತ್!

ವಿಜಯದಶಮಿ ಅಂಗವಾಗಿ ನಾಗ್ಪುರ್‌ದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಬಾಷಣ ಮಾಡಿದ್ದ ಮೋಹನ್ ಭಾಗವತ್, ಚೀನಾ ತನ್ನ ಸೇನಾ ಶಕ್ತಿಯಿಂದ ನಮ್ಮನ್ನು ವಿಘಟನೆ ಮಾಡುವ ಹುನ್ನಾರ ಸರಿಯಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ