ಆ್ಯಪ್ನಗರ

'ರಾಮ ಅಂದರೆ ಪ್ರೇಮ, ರಾಮ ಅಂದರೆ ನ್ಯಾಯ': ಭೂಮಿ ಪೂಜೆ ಬೆನ್ನಲ್ಲಿಯೇ ಶ್ರೀರಾಮನ ಸ್ಮರಿಸಿದ ರಾಹುಲ್

ಇಷ್ಟು ದಿನ ಜಾತ್ಯತೀತ ಎಂದೇ ಬಿಂಬಿಸಿಕೊಳ್ಳುತ್ತಿದ್ದ ಕಾಂಗ್ರೆಸ್‌ ನಾಯಕರು ಈಗ ನಿಧಾನವಾಗಿ ಹಿಂದೂ ಧರ್ಮದ ಕಡೇ ವಾಲುತ್ತಿದ್ದಾರೆ. ಐತಿಹಾಸಿಕ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮೂಲಕ ಶ್ರೀರಾಮನ ಗುಣಗಳನ್ನು ಸ್ಮರಿಸಿರುವುದು ಸಾಕ್ಷಿಯಾಗಿದೆ.

Agencies 5 Aug 2020, 2:47 pm
ಅಯೋಧ್ಯೆ: ಐತಿಹಾಸಿಕ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮೂಲಕ ಶ್ರೀರಾಮನ ಗುಣಗಳನ್ನು ಸ್ಮರಿಸಿದ್ದು, ರಾಮ ಅತ್ಯುತ್ತಮ ಮಾನವ ಗುಣಗಳ ವ್ಯಕ್ತಿ ಎಂದು ಹೇಳಿದ್ದಾರೆ.
Vijaya Karnataka Web rahul gandhi tweet ram love ram compassion ram justice after ayodhya bhoomi pujan
'ರಾಮ ಅಂದರೆ ಪ್ರೇಮ, ರಾಮ ಅಂದರೆ ನ್ಯಾಯ': ಭೂಮಿ ಪೂಜೆ ಬೆನ್ನಲ್ಲಿಯೇ ಶ್ರೀರಾಮನ ಸ್ಮರಿಸಿದ ರಾಹುಲ್


ತಮ್ಮ ಹಿಂದಿ ಟ್ವೀಟ್‌ನಲ್ಲಿ ರಾಹುಲ್‌ ಗಾಂಧಿ, ಭಗವಾನ್‌ ರಾಮ ಅತ್ಯುತ್ತಮ ಮಾನವ ಗುಣಗಳ ಪ್ರತೀಕವಾಗಿದ್ದಾರೆ. ಅವು ನಮ್ಮ ಮನಸ್ಸಿನ ಆಳದಲ್ಲಿ ಮಾನವೀಯತೆಯ ತಿರುಳನ್ನು ಬೆಳೆಸುತ್ತವೆ ಎಂದು ವಯನಾಡು ಸಂಸದ ಹೇಳಿದ್ದಾರೆ.

ಇನ್ನು, ರಾಮ ಅಂದರೆ ಪ್ರೀತಿ ಅದು ಎಂದಿಗೂ ಅಸಹ್ಯವಾಗಿ ಕಾಣಿಸುವುದಿಲ್ಲ. ರಾಮ ಅಂದರೆ ಸಹಾನುಭೂತಿ ಅದು ಎಂದಿಗೂ ಕ್ರೂರವಾಗಿ ಕಾಣಿಸುವುದಿಲ್ಲ. ರಾಮ ಅಂದರೆ ನ್ಯಾಯ ಅಲ್ಲಿ ಎಂದಿಗೂ ಅನ್ಯಾಯಕ್ಕೆ ಜಾಗವಿಲ್ಲ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಗಮನ ಸೆಳೆದಿದ್ದಾರೆ.

ರಾಮ ಮಂದಿರದ ಆವರಣದಲ್ಲಿ ಪವಿತ್ರ ಪಾರಿಜಾತ ನೆಟ್ಟ ಮೋದಿ..! ಶಿಲಾನ್ಯಾಸ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ


ಕಾಂಗ್ರೆಸ್‌ ಪಕ್ಷ ಇಲ್ಲಿಯವರೆಗೂ ತನ್ನನ್ನು ಜಾತ್ಯತೀತ ಪಕ್ಷವೆಂದು ಬಿಂಬಿಸಿಕೊಂಡಿದ್ದು, ಹಿಂದೂ ಧರ್ಮವನ್ನು ಬಹಿರಂಗವಾಗಿ ಸ್ವೀಕರಿಸಿದ್ದಿಲ್ಲ. ರಾಮ ಮಂದಿರ ಕಾಂಗ್ರೆಸ್‌ನಲ್ಲಿಯೂ ಬದಲಾವಣೆಯನ್ನು ತಂದಿದ್ದು, ಬಹುಶಃ ಮೊದಲ ಬಾರಿಗೆ ಗಾಂಧಿ ಮನೆತನದ ಸದಸ್ಯರು ಶ್ರೀರಾಮನ ಬಗ್ಗೆ ಹೇಳಿಕೆಯನ್ನು ಮಂಗಳವಾರ ನೀಡಿದ್ದರು. ಮಂಗಳವಾರ ಪ್ರಿಯಾಂಕಾ ಗಾಂಧಿ ರಾಮ ಎಲ್ಲರಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಹೇಳಿದ್ದರು.

ಮೋದಿಯೇ ರಾಮ ಜನ್ಮಭೂಮಿಗೆ ಭೇಟಿ ನೀಡಿದ ಮೊದಲ ಪ್ರಧಾನಿ..! 29 ವರ್ಷದ ಶಪಥಕ್ಕೆ ಸಿಗಲಿದೆ ಅಂತ್ಯ

ಬುಧವಾರ ಸರಿಯಾಗಿ 12 ಗಂಟೆ 42 ನಿಮಿಷಕ್ಕೆ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರು. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌ ಸೇರಿ ಹಲವು ಗಣ್ಯರು ಅದ್ಧೂರಿ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದರು.

'ಮಂದಿರಕ್ಕಾಗಿ ಬಹಳಷ್ಟು ಜನ ತ್ಯಾಗ ಮಾಡಿದ್ದಾರೆ, ಈ ದಿನ ನವ ಭಾರತಕ್ಕೆ ಹೊಸ ಆರಂಭ': ಮೋಹನ್‌ ಭಾಗವತ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ