Please enable javascript.ಪ್ರತಿ ಬಾರಿಯೂ ವಾಶ್‌ ಆಗಲಿದೆ ರೈಲ್ವೆ ಬ್ಲ್ಯಾಂಕೆಟ್‌ - Railways to wash blankets after every use - Vijay Karnataka

ಪ್ರತಿ ಬಾರಿಯೂ ವಾಶ್‌ ಆಗಲಿದೆ ರೈಲ್ವೆ ಬ್ಲ್ಯಾಂಕೆಟ್‌

ಏಜೆನ್ಸೀಸ್ 13 Mar 2016, 3:02 pm
Subscribe

ಪ್ರತಿ ಬಳಕೆ ನಂತರ ಬ್ಲ್ಯಾಂಕೆಟ್‌ ಒಗೆಯಲು ರೈಲ್ವೆ ಇಲಾಖೆ ನಿರ್ಧರಿಸಿದೆ.

railways to wash blankets after every use
ಪ್ರತಿ ಬಾರಿಯೂ ವಾಶ್‌ ಆಗಲಿದೆ ರೈಲ್ವೆ ಬ್ಲ್ಯಾಂಕೆಟ್‌
ಹೊಸದಿಲ್ಲಿ: ರೈಲು ಪ್ರಯಾಣದ ವೇಳೆ ಮೂಗು ಮುಚ್ಚಿ ಬ್ಲ್ಯಾಂಕೆಟ್ ಹೊದ್ದುಕೊಳ್ಳಬೇಕಾದ ಪರಿಸ್ಥಿತಿ ಇನ್ನಿರದು. ಪ್ರತಿ ಬಳಕೆ ನಂತರ ಬ್ಲ್ಯಾಂಕೆಟ್‌ ಒಗೆಯಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಯೋಜನೆಯಂತೆ, ಈಗಿನ ದಪ್ಪ ಬ್ಲ್ಯಾಂಕೆಟ್‌ ಬದಲಿಗೆ ಹಗುರವಾದ ಬ್ಲ್ಯಾಂಕೆಟ್‌ಗಳನ್ನು ಪ್ರಯಾಣಿಕರ ಬಳಕೆಗೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಸದ್ಯ ಬ್ಲ್ಯಾಂಕೆಟ್‌ಗಳನ್ನು 2 ತಿಂಗಳಿಗೊಮ್ಮೆ ಮಾತ್ರ ಒಗೆಯಲಾಗುತ್ತಿದೆ.
'ಸಾಕಷ್ಟು ಬಾರಿ ಒಗೆದರೂ, ದೀರ್ಘಕಾಲ ಬಾಳಿಕೆ ಬರುವಂಥ ಎನ್‌ಐಎಫ್‌ಟಿ ವಿನ್ಯಾಸ ಪಡಿಸಿರುವ ಬ್ಲ್ಯಾಂಕೆಟ್‌ಗಳನ್ನು ಖರಿದೀಸಲಿದ್ದೇವೆ,'ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದರು.

'ಬ್ಲ್ಯಾಂಕೆಟ್‌ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ನಂತರ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಆಯ್ದ ಪ್ರಮುಖ ರೈಲುಗಳಲ್ಲಿ ಹೊಸ ಬ್ಲ್ಯಾಂಕೆಟ್‌ಗಳನ್ನು ಒದಗಿಸಲಾಗುವುದು. ನಂತರದ ದಿನಗಳಲ್ಲಿ ಉಳಿದ ರೈಲುಗಳಲ್ಲೂ ಹೊಸ ಬ್ಲ್ಯಾಂಕೆಟ್‌ಗಳನ್ನು ನೀಡಲಾಗುವುದು,'ಎಂದು ಅಧಿಕಾರಿಗಳು ಹೇಳಿದ್ದಾರೆ.

'ಬ್ಲ್ಯಾಂಕೆಟ್‌ ಅಷ್ಟೇ ಅಲ್ಲ, ಬೆಡ್‌ ರೋಲ್‌ಗೂ ಎನ್‌ಐಎಫ್‌ಟಿ ಹೊಸ ಬಣ್ಣ ನೀಡಲಿದೆ. ಬೋಗಿಯ ಒಳಾಂಗಣ ವಿನ್ಯಾಸವೂ ಬದಲಾಗಲಿದ್ದು, ಬೆಡ್‌ಶೀಟ್‌ ಹಾಗೂ ಪರದೆ ಬಣ್ಣವನ್ನು ಮ್ಯಾಚ್‌ ಮಾಡಲಾಗುವುದು,' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೇ, ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ಸಂದರ್ಭದಲ್ಲೇ 250ರೂ. ಪಾವತಿಸಿ ಬೆಡ್‌ ರೋಲ್‌ ಸೌಲಭ್ಯ ಪಡೆಯಬಹುದು. ಪ್ರಯಾಣ ಮುಗಿದ ನಂತರ ಅದನ್ನು ಮನೆಗೊ ಒಯ್ಯಬಹುದು. ಸದ್ಯ, ಎಸಿ ಬೋಗಿಯ ಪ್ರಯಾಣಿಕರಿಗಷ್ಟೇ ಉಚಿತ ಬೆಡ್‌ರೋಲ್‌ ಸೌಲಭ್ಯವಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ