ಆ್ಯಪ್ನಗರ

ತಮಿಳುನಾಡು ಸರಕಾರದ ವಿರುದ್ಧ ರಜನಿ ಗರಂ

ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಕರಗಿಸುವ ಸ್ಥಾವರ ವಿಸ್ತರಿಸುವ ಕ್ರಮದ ವಿರುದ್ಧ ಸ್ಥಳೀಯರ ಪ್ರತಿಭಟನೆಗೆ ಸೂಕ್ತವಾಗಿ ಸ್ಪಂದಿಸದ ಅಡಳಿತಾರೂಢ ಎಐಎಡಿಎಂಕೆ ಸರಕಾರವನ್ನು ಸೂಪರ್‌ ಸ್ಟಾರ್‌ ರಜನಿಕಾಂತ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka 1 Apr 2018, 9:13 am
ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಕರಗಿಸುವ ಸ್ಥಾವರ ವಿಸ್ತರಿಸುವ ಕ್ರಮದ ವಿರುದ್ಧ ಸ್ಥಳೀಯರ ಪ್ರತಿಭಟನೆಗೆ ಸೂಕ್ತವಾಗಿ ಸ್ಪಂದಿಸದ ಅಡಳಿತಾರೂಢ ಎಐಎಡಿಎಂಕೆ ಸರಕಾರವನ್ನು ಸೂಪರ್‌ ಸ್ಟಾರ್‌ ರಜನಿಕಾಂತ್‌ ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web rajani angry on tamil nadu govt
ತಮಿಳುನಾಡು ಸರಕಾರದ ವಿರುದ್ಧ ರಜನಿ ಗರಂ


ಈ ಕುರಿತು ಟ್ವೀಟ್‌ ಮಾಡಿರುವ ಅವರು, ''ಕಳೆದ 47 ದಿನಗಳಿಂದ ತಮ್ಮ ಆರೋಗ್ಯವನ್ನು ಲಕ್ಷಿಸದೇ ಪ್ರತಿಭಟನಾಕಾರರು ತಾಮ್ರ ಕರಗಿಸುವ ಸ್ಥಾವರ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಯೋಜನೆಗೆ ಅಸ್ತು ಎಂದಿರುವ ಸರಕಾರ, ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಸುಮ್ಮನೇ ಗಮನಿಸುತ್ತಿದೆ,'' ಎಂದು ಕಿಡಿಕಾರಿದ್ದಾರೆ.

ವೇದಾಂತ ಲಿಮಿಟೆಡ್‌ ಎಂಬ ದೈತ್ಯ ಸಂಸ್ಥೆಯ ಭಾಗವಾಗಿರುವ ಸ್ಟರ್ಲೈಟ್‌ ಕಾಪರ್‌ ಈ ಸ್ಥಾವರನ್ನು ನಿರ್ವಹಿಸುತ್ತಿದೆ. ಈ ಸಂಸ್ಥೆ ವಾರ್ಷಿಕವಾಗಿ 4 ಲಕ್ಷ ಟನ್‌ ತಾಮ್ರ ಉತ್ಪಾದನೆ ಮಾಡುತ್ತದೆ.

ಮಾ.29ರಿಂದ ನಿರ್ವಣೆಯ ಕಾರಣಕ್ಕಾಗಿ ಈ ಸ್ಥಾವರವನ್ನು ಮುಚ್ಚಲಾಗಿದ್ದು, ವಿಸ್ತರಣೆ ಕಾರ್ಯ ಸೇರಿದಂತೆ ಸ್ಥಾವರ ವಿರೋಸಿ ಕುಮಾರರೆಡ್ಡಿಯಾಪುರಂ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ಕಮಲ್‌ ಭೇಟಿ

ಮಕ್ಕಳ್‌ ನೀದಿ ಮಯ್ಯಂ ಪಕ್ಷದ ಸಂಸ್ಥಪಕ, ನಟ ಕಮಲ್‌ ಹಾಸನ್‌ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಭಾನುವಾರ ವಿವಾದಿತ ಸ್ಥಾವರದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾವು ತೂತುಕುಡಿಯಲ್ಲಿ ಮತ್ತೊಂದು ಭೋಪಾಲ್‌ ದುರಂತ ಸಂಭವಿಸಲು ಬಿಡುವುದಿಲ್ಲ,'' ಎಂದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ