ಆ್ಯಪ್ನಗರ

ಮೋದಿಗೆ ಬೆಂಬಲ ಸೂಚಿಸಿದ ರಜನಿ

ಸೂಪರ್‌ಸ್ಟಾರ್ ರಜನಿಕಾಂತ್‌ ನಾನು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛಭಾರತ್‌ ಹೇ ಸೇವಾ ಅಭಿಯಾನವನ್ನು ಬೆಂಬಲಿಸುತ್ತೇನೆ.

Vijaya Karnataka Web 22 Sep 2017, 11:53 am
ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್‌ ನಾನು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಹೇ ಸೇವಾ ಅಭಿಯಾನವನ್ನು ಬೆಂಬಲಿಸುತ್ತೇನೆ. ಸ್ವಚ್ಛತಾ ಕಾರ್ಯ ದೇವತಾ ಕಾರ್ಯ ಎಂದಿದ್ದಾರೆ.
Vijaya Karnataka Web rajani support modi
ಮೋದಿಗೆ ಬೆಂಬಲ ಸೂಚಿಸಿದ ರಜನಿ


ರಜನಿ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬುದರ ಕುರಿತು ಕೆಲ ತಿಂಗಳಿನಿಂದ ಸುದ್ದಿಗಳು ಹರಿದಾಡುತ್ತಲೇ ಇವೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ರಜನಿ ಕೂಡ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ರಾಜಕೀಯಕ್ಕೆ ಬರುವ ಸೂಚನೆ ನೀಡಿದ್ದರು.

ಇತ್ತೀಚೆಗೆ ನಟ ಕಮಲ್‌ ಹಾಸನ್‌ ರಜನಿ ರಾಜಕೀಯಕ್ಕೆ ಬರುವುದಾದರೆ ನಾನು ರಜನಿಯನ್ನು ಬೆಂಬಲಿಸುತ್ತೇನೆ ಎಂಬ ಮಾತನ್ನು ಹೇಳಿದ್ದರು. ಆದರೆ ಇದುವರೆಗೆ ರಜನಿ ತಮ್ಮ ರಾಜಕೀಯ ಎಂಟ್ರಿ ಕುರಿತು ಯಾವುದೇ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ, ಹಾಗೂ ಯಾವುದೇ ಪಕ್ಷಕ್ಕೆ ತನ್ನ ಬೆಂಬಲವನ್ನೂ ಸೂಚಿಸಿರಲಿಲ್ಲ.

ಇದೀಗ ರಜನಿ ಮೋದಿಯವರನ್ನು ಬೆಂಬಲಿಸಿ ಮಾಡಿರುವ ಟ್ವೀಟ್‌ ತಮಿಳುನಾಡಿನ ರಾಜಕೀಯದಲ್ಲಾಗುತ್ತಿರುವ ತಲ್ಲಣದ ತೀವ್ರತೆಯನ್ನು ಹೆಚ್ಚಿಸಿದೆ. I extend my full support to our hon. Prime Minister @narendramodi ji’s #SwachhataHiSeva mission. Cleanliness is godliness. — Rajinikanth (@superstarrajini) September 22, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ