ಆ್ಯಪ್ನಗರ

ಸುಪ್ರೀಂಕೋರ್ಟ್‌ ಅರ್ಜಿ ಹಿಂಪಡೆದ ರಾಜಸ್ಥಾನ ಸ್ಪೀಕರ್: ಸಂತಸದಲ್ಲಿ ಪೈಲಟ್ ಬಣ!

ಸಚಿನ್ ಪೈಲಟ್ ಬಣದ ವಿರುದ್ಧದ ಅನರ್ಹತೆ ನೋಟಿಸ್‌ಗೆ ಸಂಬಂಧಿಸಿದ ತೀರ್ಪು ಪ್ರಕಟಿಸಿದಂತೆ ರಾಜಸ್ಥಾನ ಹೈಕೋರ್ಟ್‌ಗೆ ಆದೇಶ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿಧಾನಸಭೆ ಸ್ಪೀಕರ್ ಸಿಪಿ ಜೋಷಿ ಇದೀಗ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ.

Vijaya Karnataka Web 27 Jul 2020, 12:02 pm
ಜೈಪುರ್: ಸಚಿನ್ ಪೈಲಟ್ ಬಣದ ವಿರುದ್ಧದ ಅನರ್ಹತೆ ನೋಟಿಸ್‌ಗೆ ಸಂಬಂಧಿಸಿದ ತೀರ್ಪು ಪ್ರಕಟಿಸಿದಂತೆ ರಾಜಸ್ಥಾನ ಹೈಕೋರ್ಟ್‌ಗೆ ಆದೇಶ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿಧಾನಸಭೆ ಸ್ಪೀಕರ್ ಸಿಪಿ ಜೋಷಿ ಇದೀಗ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ.
Vijaya Karnataka Web supreme court
ಸಂಗ್ರಹ ಚಿತ್ರ


ಬಂಡಾಯಗಾರ ಸಚಿನ್ ಪೈಲಟ್ ಮತ್ತು ಅವರ 18 ಬೆಂಬಲಿಗ ಶಾಸಕರ ವಿರುದ್ಧ ಸ್ಪೀಕರ್ ಅನರ್ಹತೆ ನೋಟಿಸ್ ಜಾರಿ ಮಾಡಿದ್ದರು. ಇದರ ವಿರುದ್ಧ ಪೈಲಟ್ ಬಣ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ಮಧ್ಯೆ ಅನರ್ಹತೆ ಅರ್ಜಿಯ ತೀರ್ಪನ್ನು ಪ್ರಕಟಿಸದಂತೆ ರಾಜಸ್ಥಾನ ಹೈಕೋರ್ಟ್‌ಗೆ ಆದೇಶ ನೀಡಬೇಕೆಂದು ಕೋರಿ ಸ್ಪೀಕರ್ ಸಿಪಿ ಜೋಷಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ ಅರ್ಜಿ ಹಿಂಪಡೆಯಲು ಒತ್ತಾಯ: ಪೈಲಟ್ ಮಣಿಸುವ ದಾರಿಯಲ್ಲಿ ರಾಜಸ್ಥಾನ ಕಾಂಗ್ರೆಸ್‌ ಇಬ್ಭಾಗ?


ಆದರೆ ಹೈಕೋರ್ಟ್‌ಗೆ ಅಂತಹ ಯಾವುದೇ ಆದೇಶ ನೀಡುವುದಿಲ್ಲ ಎಂದು ಸುಪ್ರೀಕೋರ್ಟ್ ಸ್ಪಷ್ಟಪಡಿಸಿದ್ದಲ್ಲದೇ, ಅರ್ಜಿಯ ವಿಚಾರಣೆಯನ್ನು ಇಂದಿಗೆ(ಸೋಮವಾರ) ಮುಂದೂಡಿತ್ತು.

ಆದರೆ ಈ ಅರ್ಜಿಯನ್ನು ಹಿಂಪಡೆದಿರುವ ಸಿಪಿ ಜೋಷಿ, ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡುವುದಾಗಿ ಹೇಳಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಬೇಕು ಎಂಬ ಕಾಂಗ್ರೆಸ್‌ನ ಒಂದು ಬಣದ ವಾದಕ್ಕೆ ಜಯ ಸಿಕ್ಕಂತಾಗಿದೆ.

ರಾಜಸ್ಥಾನ ಬಿಕ್ಕಟ್ಟು: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ; ಪೈಲಟ್‌ ಕ್ಯಾಂಪ್‌ಗೆ ಬಿಗ್‌ ರಿಲೀಫ್‌

ಒಟ್ಟಿನಲ್ಲಿ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವ ಮೂಲಕ ಒಂದು ವಿವಾದಕ್ಕೆ ತೆರೆ ಎಳೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ