ಆ್ಯಪ್ನಗರ

ವಿಶೇಷ ಅಧಿವೇಶನಕ್ಕೆ ರಾಜಸ್ಥಾನ ಬಿಜೆಪಿ ತಯಾರಿ: ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜೇ ಭಾಗಿ!

ರಾಜಸ್ಥಾನ ವಿಧನಸಭೆ ವಿಶೇಷ ಅಧಿವೇಶನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಭರದ ಸಿದ್ಧತೆ ನಡೆಸಿದ್ದು, ಎರಡೂ ಪಕ್ಷಗಳೂ ಇಂದು ತಮ್ಮ ಶಾಸಕಾಂಗ ಪಕ್ಷದ ಸಭೆ ಕರೆದಿವೆ. ಅದರಂತೆ ಬಿಜೆಪಿ ಜೈಪುರ್‌ದ ಪಕ್ಷದ ಪ್ರಧಾನ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಈಗಾಗಲೇ ಆರಂಭಿಸಿದೆ.

Vijaya Karnataka Web 13 Aug 2020, 12:59 pm
ಜೈಪುರ್: ನಾಳೆ(ಶುಕ್ರವಾರ) ರಾಜಸ್ಥಾನ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಉದ್ಭವವಾಗಿದ್ದ ಬಂಡಾಯ ಶಮನವಾಗುವ ಮೂಲಕ ಸರ್ಕಾರ ಉಳಿಯವುದು ಬಹತೇಕ ಖಚಿತ ವಾಗಿದೆ.
Vijaya Karnataka Web BJP
ರಾಜಸ್ಥಾನ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ


ಈ ಹಿನ್ನೆಲೆಯಲ್ಲಿ ವಿಶೇಷ ವಿಧಾನಸಭೆ ಅಧಿವೇಶನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಭರದ ಸಿದ್ಧತೆ ನಡೆಸಿದ್ದು, ಎರಡೂ ಪಕ್ಷಗಳೂ ಇಂದು ತಮ್ಮ ಶಾಸಕಾಂಗ ಪಕ್ಷದ ಸಭೆ ಕರೆದಿವೆ.

ಪರಸ್ಪರ ಎದುರಾಗಲಿರುವ ಪೈಲಟ್-ಗೆಹ್ಲೋಟ್: ಸಿಎಲ್‌ಪಿ ಸಭೆಯಲ್ಲಿ ಏನಾಗಲಿದೆ?

ಕಾಂಗ್ರೆಸ್ ಜೈಸಲ್ಮೇರ್‌ನಲ್ಲಿರುವ ರೆಸಾರ್ಟ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ಅದರಂತೆ ಬಿಜೆಪಿ ಕೂಡ ಜೈಪುರ್‌ದ ಪಕ್ಷದ ಪ್ರಧಾನ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಈಗಾಗಲೇ ಆರಂಭಿಸಿದೆ.

ನಾಳಿನ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಬಗೆಯ ಕುರಿತು ಬಿಜೆಪಿ ಮುಖಂಡರು ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಟೇಕಾಫ್‌ಗೆ ಪೈಲಟ್‌ ಅನಿವಾರ್ಯ..! 'ಕೈ' ಹೈಕಮಾಂಡ್‌ನಿಂದ ಜಾಣ ನಡೆ

ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸೇರಿದಂತೆ ಹಲವು ಹಿರಿಯ ನಾಯಕರು ಹಾಜರಿದ್ದು, ಕಾಂಗ್ರೆಸ್ ಬಂಡಾಯ ಹಾಗೂ ಆ ನಂತರದ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ