ಆ್ಯಪ್ನಗರ

ರಾಜಸ್ಥಾನದಲ್ಲೂ ರೈತರ ಸಾಲ ಮನ್ನಾ

ಮಧ್ಯಪ್ರದೇಶ, ಛತ್ತೀಸ್‌ಗಢದ ಬಳಿಕ ರಾಜಸ್ಥಾನದಲ್ಲೂ ನೂತನ ಕಾಂಗ್ರೆಸ್‌ ಸರಕಾರ ರೈತರ ಸಾಲಮನ್ನಾ ತೀರ್ಮಾನ ಪ್ರಕಟಿಸಿದೆ...

Vijaya Karnataka Web 19 Dec 2018, 10:10 pm
ಜೈಪುರ: ಮಧ್ಯಪ್ರದೇಶ, ಛತ್ತೀಸ್‌ಗಢದ ಬಳಿಕ ರಾಜಸ್ಥಾನದಲ್ಲೂ ನೂತನ ಕಾಂಗ್ರೆಸ್‌ ಸರಕಾರ ರೈತರ ಸಾಲಮನ್ನಾ ತೀರ್ಮಾನ ಪ್ರಕಟಿಸಿದೆ.
Vijaya Karnataka Web ಅಶೋಕ್‌ ಗೆಹ್ಲೋಟ್‌
ಅಶೋಕ್‌ ಗೆಹ್ಲೋಟ್‌


ಕೃಷಿ ಸಹಕಾರ ಬ್ಯಾಂಕ್‌ಗಳಿಂದ ರೈತರು ಪಡೆದ ಅಲ್ಪಾವಧಿ ಸಾಲ ಮತ್ತು ಇತರ ಬ್ಯಾಂಕ್‌ಗಳಿಂದ ಪಡೆದ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುವುದು.

ನ.30ರವರೆಗೂ ಸಾಲ ಬಾಕಿ ಉಳಿಸಿಕೊಂಡವರಿಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಬುಧವಾರ ಪ್ರಕಟಿಸಿದ್ದಾರೆ. ಸಾಲ ಮನ್ನಾ ಯೋಜನೆಯಿಂದ ಸರಕಾರದ ಬೊಕ್ಕಸಕ್ಕೆ 18,000 ಕೋಟಿ ರೂ. ಹೊರೆಯಾಗಲಿದೆ.


ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರ ವಹಿಸಿಕೊಂಡ ದಿನವೇ ಸಾಲ ಮನ್ನಾ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ, ಅಸ್ಸಾಂನ ಬಿಜೆಪಿ ಸರಕಾರವೂ 600 ಕೋಟಿ ರೂ. ಸಾಲ ಮನ್ನಾ ಪ್ರಕಟಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ