ಆ್ಯಪ್ನಗರ

ಅಶೋಕ್ ಗೆಹ್ಲೋಟ್‌ರಿಂದ ವಿಜಯದ ಸಂಕೇತ: ಸಚಿನ್ ಪೈಲಟ್ ನಡೆ ಇನ್ನೂ ನಿಗೂಢ!

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನೆಯಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ 97ಕ್ಕೂ ಅಧಿಕ ಶಾಸಕರು ಭಾಗವಹಿಸಿದ್ದು, ಸಭೆಯ ಬಳಿಕ ಎಲ್ಲಾ ಶಾಸಕರೊಂದಿಗೆ ಗೆಹ್ಲೋಟ್ ವಿಜಯದ ಸಂಕೇತ ತೋರಿಸಿ ಗೆಲುವು ತಮ್ಮದೇ ಎಂದು ಹೇಳಿದ್ದಾರೆ.

Vijaya Karnataka Web 13 Jul 2020, 3:26 pm
ಜೈಪುರ್: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮತ್ತೊಂದು ರೋಚಕ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಬಲಾಬಲ ಪ್ರದರ್ಶಿಸಿದ್ದಾರೆ.
Vijaya Karnataka Web Ashok Gehlot
ಅಶೋಕ್ ಗೆಹ್ಲೋಟ್ ಅವರಿಂದ ವಿಜಯದ ಸಂಕೇತ


ಅಶೋಕ್ ಗೆಹ್ಲೋಟ್ ಕರೆದಿದ್ದ ಸಭೆಯಲ್ಲಿ ಸುಮಾರು 97 ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದು, ಇದರಿಂದ ತಮಗೆ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಗೆಹ್ಲೋಟ್ ವಾದಿಸಿದ್ದಾರೆ.

ಸಭೆಯ ಬಳಿಕ ಎಲ್ಲಾ ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅಶೋಕ್ ಗೆಹ್ಲೋಟ್, ವಿಜಯದ ಸಂಕೇತ ಮಾಡಿ ನಮ್ಮ ಬಳಿ ಅಧಿಕ ಸಂಖ್ಯಾಬಲ ಇದೆ ಎಂಬುದನ್ನು ತೋರಿಸಿದರು.

ಅಶೋಕ್ ಗೆಹ್ಲೋಟ್ ಮನೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ: ಬಂದವರೆಷ್ಟು, ಬರದವರೆಷ್ಟು?

ಇತ್ತ ಬಂಡಾಯವೆದ್ದಿರುವ ಸಚಿನ್ ಪೈಲಟ್ ನಡೆ ಇನ್ನೂ ನಿಗೂಢವಾಗಿದ್ದು, ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.



ಈ ಮಧ್ಯೆ ತಾವು ಬಿಜೆಪಿ ಸೇರುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಸಚಿನ್ ಪೈಲಟ್, ತಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುವ ಸುದ್ದಿ ಕೇವಲ ವದಂತಿ ಎಂದು ಹೇಳಿದ್ದಾರೆ.

ನಿರ್ಲಕ್ಷ್ಯಕ್ಕೊಳಗಾಗಿರುವ ಯುವ ನಾಯಕ ಸಚಿನ್ ಪೈಲಟ್ ಮುಂದಿರುವ ಆಯ್ಕೆಗಳೇನು?

ಒಟ್ಟಿನಲ್ಲಿ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ ಇನ್ನೂ ತಣ್ಣಗಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ಎರಡೂ ಬಣ ಗೆಲುವು ತಮ್ಮದೇ ಎನ್ನುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ