ಆ್ಯಪ್ನಗರ

ಬಿಜೆಪಿ ಅಣತಿಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ - ಕಪಿಲ್‌ ಸಿಬಲ್‌ ಆರೋಪ

ಸಚಿನ್‌ ಪೈಲಟ್‌ ಬಳಿ 20-30 ಶಾಸಕರು ಇದ್ದಾರೆ. ಇಷ್ಟು ಶಾಸಕರನ್ನು ಇಟ್ಟುಕೊಂಡು ನೀವು ಹೇಗೆ ಮುಖ್ಯಮಂತ್ರಿಯಾಗುತ್ತೀರಿ? ಕಾಂಗ್ರೆಸ್‌ ಒಟ್ಟು ಬಲವು ವಿಧಾನಸಭೆಯಲ್ಲಿರುವುದಕ್ಕಿಂತ ಹೆಚ್ಚಾಗಿದೆ ಎಂದು ಕಪಿಲ್‌ ಸಿಬಲ್ ಹೇಳಿದ್ದಾರೆ.

TIMESOFINDIA.COM 24 Jul 2020, 5:24 pm

ಹೊಸದಿಲ್ಲಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿರುವ ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್‌ ಸಿಬಲ್‌, ರಾಜ್ಯಪಾಲರು ಮತ್ತು ಸಚಿನ್‌ ಪೈಲಟ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web Kapil Sibal


ಬಿಜೆಪಿಯ ಆದೇಶದ ಮೇರೆಗೆ ರಾಜಸ್ಥಾನ ರಾಜ್ಯಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಧಾನಸಭೆ ಅಧಿವೇಶವನ್ನು ರಾಜ್ಯಪಾಲರು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರೂ ಆಗಿರುವ ಸಿಬಲ್‌ ಹೇಳಿದ್ದಾರೆ. ಜೊತೆಗೆ ವಿಧಾನಸಭೆ ಕಾರ್ಯ ಕಲಾಪಗಳಲ್ಲಿ ಮಧ್ಯ ಪ್ರವೇಶಿಸಲು ಹೈಕೋರ್ಟ್‌ಗ ಅವಕಾಶವಿಲ್ಲ ಎಂದಿದ್ದಾರೆ.

ಸಚಿನ್ ಪೈಲಟ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದರೆ, "ಅವರಿಗೆ ಇನ್ನೇನು ಬೇಕು? ಅವರು ಕಾಂಗ್ರೆಸ್ಸಿನ ಭಾಗವಾಗಿದ್ದರೆ, - ಅವರೇ ಹೇಳಿದಂತೆ ಅವರು ಭಾಗವೆಂದು ನಾವು ನಂಬುತ್ತೇವೆ - ಹಾಗಾದರೆ ಅವರು ಸಿಎಲ್‌ಪಿ ಸಭೆಗಳಿಗೆ ಏಕೆ ಹಾಜರಾಗಲಿಲ್ಲ? ಅವರು ಬಿಜೆಪಿಗೆ ಸೇರದಿದ್ದರೆ ಅವರು ಹರಿಯಾಣದಲ್ಲಿ ಏಕೆ ಇದ್ದಾರೆ? ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ತುಂಬಾ ಸಾಧಿಸಿದ್ದೀರಿ, ನಿಮಗೆ ಇನ್ನೇನು ಬೇಕು?” ಪ್ರಶ್ನಿಸಿದ್ದಾರೆ.

ರಾಜಸ್ಥಾನ ಬಿಕ್ಕಟ್ಟು: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ; ಪೈಲಟ್‌ ಕ್ಯಾಂಪ್‌ಗೆ ಬಿಗ್‌ ರಿಲೀಫ್‌

"ನೀವು ಮುಖ್ಯಮಂತ್ರಿಯಾಗಲು ಬಯಸುವಿರಾ? ನಿಮ್ಮ ಬಳಿ 20-30 ಶಾಸಕರು ಇದ್ದಾರೆ, ನೀವು ಹೇಗೆ ಮುಖ್ಯಮಂತ್ರಿಯಾಗುತ್ತೀರಿ? ಕಾಂಗ್ರೆಸ್‌ ಒಟ್ಟು ಬಲವು ವಿಧಾನಸಭೆಯಲ್ಲಿರುವುದಕ್ಕಿಂತ ಹೆಚ್ಚಾಗಿದೆ" ಎಂದು ಸಿಬಲ್ ಹೇಳಿದ್ದಾರೆ.

ರಾಜಸ್ಥಾನ ಬಿಕ್ಕಟ್ಟು: ಅಧಿವೇಶನಕ್ಕೆ ಇನ್ನೂ ಸಿಗದ ಅನುಮತಿ; ಶುರುವಾಗಿದೆ ಗವರ್ನರ್‌-ಸಿಎಂ ಜಟಾಪಟಿ..!

ಸಚಿನ್‌ ಪೈಲಟ್‌ ಹಾಗೂ ಅವರ ಬಣದ 18 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡುವಂತೆ ರಾಜಸ್ಥಾನ ಹೈಕೋರ್ಟ್‌ ಶುಕ್ರವಾರ ಆದೇಶ ನೀಡಿತ್ತು. ಇದಾದ ಬಳಿಕ ಸೋಮವಾರದಿಂದ ಅಧಿವೇಶನ ನಡೆಸಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನಿರ್ಧರಿಸಿದ್ದಾರೆ. ಆದರೆ ರಾಜ್ಯಪಾಲರು ಇನ್ನೂ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅನುಮತಿ ನೀಡುವವರೆಗೆ ರಾಜಭವನ ತೊರೆಯಲ್ಲ ಎಂದು ಗೆಹ್ಲೋಟ್‌ ಪಟ್ಟು ಹಿಡಿದು ಕೂತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ