ಆ್ಯಪ್ನಗರ

ಮೋದಿ ವರ್ಚಸ್ವಿ ನಾಯಕ, ರಾಹುಲ್‌ ರಾಜೀನಾಮೆ ಬೇಡ: ರಜನಿ

ಇದು ಬಿಜೆಪಿಯ ಗೆಲುವಲ್ಲ, ಮೋದಿಯವರ ಬಲಿಷ್ಠ ನಾಯಕತ್ವಕ್ಕೆ ಸಂದ ಜಯ ಎಂದು ವ್ಯಾಖ್ಯಾನಿಸಿರುವ ಅವರು, ''ಕೇಂದ್ರವಿರಲಿ, ರಾಜ್ಯವಿರಲಿ ಯಾವುದೇ ಪಕ್ಷವೂ ಜನಮಾನಸವನ್ನು ಪ್ರಭಾವಿಸುವ ವರ್ಚಸ್ವಿ ನಾಯಕನ ಬಲದಿಂದಲೇ ಗೆಲುವು ದಾಖಲಿಸುತ್ತದೆ ಎಂಬುದು ನಾನು ಕಂಡುಕೊಂಡಿರುವ ಸತ್ಯ. ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ ಅವರಂತೆ ಮೋದಿ ಕೂಡ ಈಗ ದೇಶವನ್ನು ಆವರಿಸಿಕೊಂಡಿರುವ ಪ್ರಭಾವಿ ನಾಯಕ. ತಮ್ಮ ಚರಿಷ್ಮೆಯ ಮೂಲಕವೇ ಅವರು ಮತದಾರರ ಮನ ಗೆದ್ದಿದ್ದಾರೆ,'' ಎಂದು ಹೇಳಿದ್ದಾರೆ.

PTI 29 May 2019, 5:00 am
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಒಬ್ಬ ವರ್ಚಸ್ವಿ ನಾಯಕ. ಅವರ ಪ್ರಭಾವಳಿಯ ಬಲದಿಂದಲೇ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದೆ ಎಂದು ತಮಿಳು ಸೂಪರ್‌ಸ್ಟಾರ್‌ ಹಾಗೂ 'ರಜನಿ ಮಕ್ಕಳ್‌ ಮಂದ್ರಂ' ರಾಜಕೀಯ ವೇದಿಕೆ ಮುಖ್ಯಸ್ಥ ರಜನಿಕಾಂತ್‌ ಹೇಳಿದ್ದಾರೆ. ಇದೇ ವೇಳೆ ಅವರು ಹೀನಾಯ ಸೋಲಿನಿಂದ ಬೇಸತ್ತು ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
Vijaya Karnataka Web rajinikanth says modi charismatic leader like nehru rajiv gandhi
ಮೋದಿ ವರ್ಚಸ್ವಿ ನಾಯಕ, ರಾಹುಲ್‌ ರಾಜೀನಾಮೆ ಬೇಡ: ರಜನಿ


ಇದು ಬಿಜೆಪಿಯ ಗೆಲುವಲ್ಲ, ಮೋದಿಯವರ ಬಲಿಷ್ಠ ನಾಯಕತ್ವಕ್ಕೆ ಸಂದ ಜಯ ಎಂದು ವ್ಯಾಖ್ಯಾನಿಸಿರುವ ಅವರು, ''ಕೇಂದ್ರವಿರಲಿ, ರಾಜ್ಯವಿರಲಿ ಯಾವುದೇ ಪಕ್ಷವೂ ಜನಮಾನಸವನ್ನು ಪ್ರಭಾವಿಸುವ ವರ್ಚಸ್ವಿ ನಾಯಕನ ಬಲದಿಂದಲೇ ಗೆಲುವು ದಾಖಲಿಸುತ್ತದೆ ಎಂಬುದು ನಾನು ಕಂಡುಕೊಂಡಿರುವ ಸತ್ಯ. ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ ಅವರಂತೆ ಮೋದಿ ಕೂಡ ಈಗ ದೇಶವನ್ನು ಆವರಿಸಿಕೊಂಡಿರುವ ಪ್ರಭಾವಿ ನಾಯಕ. ತಮ್ಮ ಚರಿಷ್ಮೆಯ ಮೂಲಕವೇ ಅವರು ಮತದಾರರ ಮನ ಗೆದ್ದಿದ್ದಾರೆ,'' ಎಂದು ಹೇಳಿದ್ದಾರೆ. ಮೇ 30ರಂದು ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

ರಾಹುಲ್‌ ನಿರ್ಧಾರ ಸಲ್ಲದು: ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡುವ ನಿರ್ಧಾರ ತಳೆಯುವುದು ಸರಿಯಲ್ಲ ಎಂದಿರುವ ರಜನಿ, ''ಕಾಂಗ್ರೆಸ್‌ನಲ್ಲಿರುವ ಹಿರಿಯ ನಾಯಕರು ಕಿರಿಯ ನಾಯಕರಿಗೆ ಸಾಥ್‌ ನೀಡದ ಪರಿಣಾಮ ಆಂತರಿಕ ಸಂಘರ್ಷ ಏರ್ಪಟ್ಟು ಪಕ್ಷ ಸೋಲು ಕಂಡಿದೆ. ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಸರಕಾರದ ಜತೆಗೆ ಪ್ರಬಲ ಪ್ರತಿಪಕ್ಷವೂ ಇರಬೇಕು. ರಾಹುಲ್‌ ಇನ್ನೂ ಯುವಕರಾಗಿದ್ದು, ಕುಗ್ಗದೇ ಹೋರಾಟ ಮುನ್ನೆಡಸಬೇಕು,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ