ಆ್ಯಪ್ನಗರ

29 ವರ್ಷಗಳಿಂದ ಜೈಲಿನಲ್ಲಿರುವ ರಾಜೀವ್‌ ಗಾಂಧಿ ಹಂತಕಿ ನಳಿನಿ ಆತ್ಮಹತ್ಯೆಗೆ ಯತ್ನ!

ರಾಜೀವ್‌ ಗಾಂಧಿ ಹತ್ಯೆಯ ಪ್ರಮುಖ ಆರೋಪಿ ನಳಿನಿ ಶ್ರೀಹರನ್ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವರದಿಯಾಗಿದೆ. ನಳಿನಿಯ ವಕೀಲರಾದ ಪುಗಲೆಂಥಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ನಳಿನಿ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅವರ ಆತ್ಮಹತ್ಯೆಗೆ ಕಾರಣವನ್ನ ವಕೀಲರು ತಿಳಿಸಿದ್ದಾರೆ.

TIMESOFINDIA.COM 21 Jul 2020, 1:18 pm
ಚೆನ್ನೈ: ಕಳೆದ 29 ವರ್ಷಗಳಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ನಳಿನಿ ಶ್ರೀಹರನ್ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವರದಿಯಾಗಿದೆ. ನಳಿನಿಯ ವಕೀಲರಾದ ಪುಗಲೆಂಥಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
Vijaya Karnataka Web jpg - 2020-07-21T131409.687


ಸೋಮವಾರ ತಡರಾತ್ರಿ ಹಂತಕಿ ನಳಿನಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವಕೀಲರು ತಿಳಿಸಿದ್ದಾರೆ. ಸದ್ಯ ನಳಿನಿ ಶ್ರೀಹರನ್‌ ವೆಲ್ಲೂರಿನ ಮಹಿಳಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ 29 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಇಂತಹ ಕಠಿಣ ನಿರ್ಧಾರವನ್ನ ನಳಿಸಿ ತೆಗೆದುಕೊಂಡಿದ್ದಾರೆಂದು ವಕೀಲರಾದ ಪುಗಲೆಂಥಿ ತಿಳಿಸಿದ್ದಾರೆ.

ಅದಕ್ಕೆ ಕಾರಣ ತಿಳಿಸಿದ ವಕೀಲರು, ಅಲ್ಲಿರುವ ಮತ್ತೊಂದು ಕೈದಿಯೊಂದಿಗಿನ ಜಗಳ ಎಂದು ಕೂಡ ಅವರು ಆರೋಪಿಸಿದ್ದಾರೆ. ಜೈಲಿನಲ್ಲಿ ಜೀವಾವಧಿ ಶಿಕ್ಷೆಗೊಳಪಟ್ಟಿರುವ ಮತ್ತೊಂದು ಕೈದಿ, ನಳಿನಿಯೊಂದಿಗೆ ಕಾಲ್ಕೆರೆದು ಜಗಳವಾಡಿದ್ದಾರೆ. ಅಲ್ಲದೆ ಆ ಕೈದಿ ಈ ವಿಚಾರವನ್ನ ಜೈಲಿನ ಅಧಿಕಾರಿಗೆ ತಿಳಿಸಿದ್ದರು. ಇದರಿಂದ ಮನನೊಂದು ಈ ರೀತಿ ನಳಿನಿ ಮಾಡಿಕೊಂಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ತಾಯಿ ಲಡಾಖ್‌ನಲ್ಲಿ.. ಮಗು ದಿಲ್ಲಿಯ ಆಸ್ಪತ್ರೆಯಲ್ಲಿ.. 1000 ಕಿಮೀ ದೂರದಿಂದ ದಿನವೂ ಬರ್ತಿದೆ ಅಮ್ಮನ ಎದೆಹಾಲು

ಈವರೆಗೆ ನಳಿನಿ ಇಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಹೀಗಾಗಿ ಈ ಬಗ್ಗೆ ನಮಗೆ ಸರಿಯಾದ ಮಾಹಿತಿ ತಿಳಿಯಬೇಕು ಅಲ್ಲದೆ ಅವರ ಕೊಠಡಿ ಅಥವಾ ಜೈಲು ಬದಲಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ. 1991ರ ಮೇ. 21ರಂದು ತಮಿಳುನಾಡಿನಲ್ಲಿ ಚುನಾವಣೆ ರ್ಯಾಲಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರನ್ನ ಹತ್ಯೆ ಮಾಡಲಾಗಿತ್ತು.

ಎಲ್‌ಟಿಟಿ ಸಂಘಟನೆಯಿಂದ ಪ್ರೇರಿತರಾಗಿ ಈ ಕೃತ್ಯ ನಡೆಸಲಾಗಿತ್ತು. ಈ ಕೃತ್ಯದ ಹಿಂದಿದ್ದ ನಳಿನಿ, ಅವರ ಪತಿ ಮುರುಗನ್‌ ಸೇರಿ ಒಟ್ಟು ಏಳು ಮಂದಿಯನ್ನ ಕೋರ್ಟ್‌ ಅಪರಾಧಿಗಳು ಎಂದು ಘೋಷಿಸಿತ್ತು. ಎಲ್ಲರಿಗೂ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ನಂತರ ಇದನ್ನ ಜೀವಿತಾವಧಿ ಶಿಕ್ಷೆಯಾಗಿ ಮಾರ್ಪಾಟು ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ