ಆ್ಯಪ್ನಗರ

ಜೇಟ್ಲಿ ಆರೋಗ್ಯ ಸ್ಥಿತಿ ಇನ್ನೂ ಗಂಭೀರ: ರಾಜನಾಥ್, ಇರಾನಿ ಭೇಟಿ

ಕಳೆದ ಎಂಟು ದಿನಗಳಿಂದ ಇಲ್ಲಿನ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದೆ.

TIMESOFINDIA.COM 19 Aug 2019, 10:20 am
ಹೊಸದಿಲ್ಲಿ: ಏಮ್ಸ್‌ ಆಸ್ಪತ್ರೆಯಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿರುವ ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. 66 ವರ್ಷದ ಜೇಟ್ಲಿ ಅವರ ಆರೋಗ್ಯ ವಿಚಾರಣೆಗಾಗಿ ಗಣ್ಯರ ದಂಡೇ ಹರಿದುಬರುತ್ತಿದ್ದು, ಆಸ್ಪತ್ರೆ ಸುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.
Vijaya Karnataka Web Arun Jetli


ಭಾನುವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸಚಿವರಾದ ಸ್ಮೃತಿ ಇರಾನಿ, ರಾಮ್‌ ವಿಲಾಸ್‌ ಪಾಸ್ವಾನ್‌, ಜಿತೇಂದ್ರ ಸಿಂಗ್‌, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಭೇಟಿ ನೀಡಿದರು.

ಹಿಮಾಚಲದ ರಾಜ್ಯಪಾಲ ಕಲರಾಜ್ ಮಿಶ್ರಾ, ಆರ್‌ಎಸ್ಎಸ್ ನಾಯಕ ಕೃಷ್ಣ ಗೋಪಾಲ್ ಕೂಡ ಮಾಜಿ ಸಚಿವರ ಆರೋಗ್ಯ ಸ್ಥಿತಿ ವಿಚಾರಿಸಿದರು.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಆಗಮಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆ ಸುತ್ತಮುತ್ತ ಭಾರಿ ಬಂದೋಬಸ್ತ್‌ ಮಾಡಲಾಗಿದೆ.

ಆಗಸ್ಟ್ 9 ರಿಂದ ಆಸ್ಪತ್ರೆಯಲ್ಲಿ

66 ವರ್ಷದ ಜೇಟ್ಲಿ ಅವರನ್ನು ಆಗಸ್ಟ್‌ 9ರಂದು ಉಸಿರಾಟದ ತೊಂದರೆ ಮತ್ತು ಸುಸ್ತು ಅನುಭವಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನಾ ವಿಭಾಗದ ವೈದ್ಯರು ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲೂ ಅವರು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು.

ಜೇಟ್ಲಿ ಪಡೆದ ಚಿಕಿತ್ಸೆಗಳು

-ಮಧುಮೇಹದ ಸಮಸ್ಯೆ ಎದುರಿಸುತ್ತಿರುವ ಜೇಟ್ಲಿ ಅವರು 2014ರ ಸೆಪ್ಟೆಂಬರ್‌ನಲ್ಲಿ ತೂಕ ಇಳಿಸುವ ಬ್ಯಾರಿಯಾಟ್ರಿಕ್‌ ಸರ್ಜರಿಗೆ ಒಳಗಾಗಿದ್ದರು.

- 2018ರ ಮೇ 14ರಂದು ಮೂತ್ರಪಿಂಡದ ಕಸಿ ನಡೆದಿತ್ತು.

- 2019ರಲ್ಲೂ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆದಿದ್ದರು.

ಏನಿದು ಇಸಿಎಂಒ ಸಿಸ್ಟಂ?

ಮೂಲಗಳ ಪ್ರಕಾರ ಜೇಟ್ಲಿ ಅವರನ್ನು ಎಕ್ಟ್ರಾ-ಕಾರ್ಪೊರಿಯಲ್‌ ಮೆಂಬ್ರೇನ್‌ ಆಕ್ಸಿಜನೇಷನ್‌ ಎಂಬ ವ್ಯವಸ್ಥೆಯಲ್ಲಿ ಇಡಲಾಗಿದೆ. ಇಸಿಎಂಒ ವ್ಯವಸ್ಥೆ ಎಂದರೆ, ಹೃದಯ ಮತ್ತು ಶ್ವಾಸಕೋಶಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗದೆ ಇದ್ದಾಗ ಹೊರಗಿನಿಂದ ಕೃತಕವಾಗಿ ಸಜ್ಜುಗೊಳಿಸುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ