ಆ್ಯಪ್ನಗರ

ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಡಿದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್

68ರ ಹರೆಯದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ವಾಯುದಳದ ತೇಜಸ್‌ ಯುದ್ಧವಿಮಾನದಲ್ಲಿ ಬೆಂಗಳೂರಿನಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದೇಶದ ರಕ್ಷಣಾ ಸಚಿವರೊಬ್ಬರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.

Vijaya Karnataka Web 19 Sep 2019, 1:04 pm
ಬೆಂಗಳೂರು: ದೇಶಿಯ ನಿರ್ಮಿತ‌ ಎಚ್ಎಎಲ್'ನ ಲಘು ಯುದ್ಧ ವಿಮಾನ ತೇಜಸ್'ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಹಾರಾಟ ನಡೆಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ರಾಜನಾಥ್ ಸಿಂಗ್ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವರು ಎನಿಸಿದ್ದಾರೆ.
Vijaya Karnataka Web rajnath new
ದೇಶಿಯ ನಿರ್ಮಿತ‌ ಎಚ್ಎಎಲ್'ನ ಲಘು ಯುದ್ಧ ವಿಮಾನ ತೇಜಸ್'ನಲ್ಲಿ ಹಾರಾಟ ನಡೆಸುವ ಮುನ್ನ ಪೈಲಟ್ ಸೂಟ್'ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್.


ವಿಮಾನ ಹಾರಾಟದಿಂದ ನಾನು ರೋಮಾಂಚಿತಗೊಂಡಿದ್ದೇನೆ, ತುಂಬ ಖುಷಿಯಾಗುತ್ತಿದೆ. ಇಂತಹ ಯುದ್ಧವಿಮಾನ ತಯಾರಿಸಿದ ವಿಜ್ಞಾನಿಗಳು ಮತ್ತು ಎಚ್ಎಎಲ್‌ ಕಂಪನಿ ಬಗ್ಗೆ ನನಗೆ ಹೆಮ್ಮೆ ಇದೆ. ಈ ಯುದ್ಧವಿಮಾನಕ್ಕೆ ವಿದೇಶಗಳಲ್ಲೂ ಬೇಡಿಕೆ ಇದೆ ಎಂದು ರಾಜನಾಥ್‌ ಅವರು ವಿಮಾನ ಹಾರಾಟದ ನಂತರ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ