ಆ್ಯಪ್ನಗರ

ನಾಲ್ಕೇ ತಿಂಗಳಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ..! ಕಾಂಗ್ರೆಸ್ ಕಾಲಹರಣ ಮಾಡಿತು ಎಂದ ಶಾ

ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೋ, ಬೇಡವೋ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಅಮಿತ್ ಶಾ ಪ್ರಶ್ನಿಸಿದಾಗ, ಎಲ್ಲರೂ 'ಹೌದು' ಎಂದು ಒಕ್ಕೊರಲಿನ ಧ್ವನಿಯಲ್ಲಿ ಉತ್ತರ ನೀಡಿದರು.

Vijaya Karnataka 16 Dec 2019, 8:31 pm
ರಾಂಚಿ (ಜಾರ್ಖಂಡ್): ಇನ್ನು ನಾಲ್ಕು ತಿಂಗಳ ಒಳಗೆ ಅಯೋಧ್ಯೆಯಲ್ಲಿ ಮುಗಿಲೆತ್ತರದ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಅಮಿತ್ ಶಾ ಈ ವಿಚಾರ ಪ್ರಕಟಿಸಿದ್ಧಾರೆ.
Vijaya Karnataka Web ನಾಲ್ಕೇ ತಿಂಗಳಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ..! ಕಾಂಗ್ರೆಸ್ ಕಾಲಹರಣ ಮಾಡಿತು ಎಂದ ಶಾ


ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿಗಳು ತಿರಸ್ಕತವಾಗಿರೋದ್ರಿಂದ ಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು. ಕಾಂಗ್ರೆಸ್‌ನ ವಕೀಲರು ಮತ್ತು ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿಇಂದು ವಾದ ಮಾಡಲ್ಲ ಎಂದು ಕಾಲಹರಣ ಮಾಡುತ್ತಲೇ ಬಂದರು. ತ್ವರಿತವಾಗಿ ವಾದ ಪೂರ್ಣಗೊಳಿಸಲು ಅವರಿಗೆ ಏನಾಗಿತ್ತು ಎಂದು ಪ್ರಶ್ನಿಸಿದ ಅಮಿತ್ ಶಾ, ಬಿಜೆಪಿ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿರುವುದಕ್ಕೆ ಅವರಿಗೆಲ್ಲ ಹೊಟ್ಟೆ ಉರಿಯುತ್ತಿದೆ ಎಂದು ಕುಟುಕಿದರು.

ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೋ, ಬೇಡವೋ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಅಮಿತ್ ಶಾ ಪ್ರಶ್ನಿಸಿದಾಗ, ಎಲ್ಲರೂ 'ಹೌದು' ಎಂದು ಒಕ್ಕೊರಲಿನ ಧ್ವನಿಯಲ್ಲಿ ಉತ್ತರ ನೀಡಿದರು.

ಅಯೋಧ್ಯಾ ವಿವಾದ ಈಗ ಅಂತ್ಯ! ಸುಪ್ರೀಂಗೆ ಸಲ್ಲಿಕೆಯಾಗಿದ್ದ ಎಲ್ಲಾ ಮರು ಪರಿಶೀಲನಾ ಅರ್ಜಿಗಳೂ ವಜಾ!

ಅಯೋಧ್ಯೆಯ 2.77 ಎಕರೆ ವಿವಾದಿತ ಭೂ ಪ್ರದೇಶದಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಹಾಗೂ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಜಾಗ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ಪಂಚಸದಸ್ಯರ ಸಂವಿಧಾನ ಪೀಠವು ನವೆಂಬರ್ 9ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಗಳನ್ನೂ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ನರೇಂದ್ರ ಮೋದಿ- ಅಮಿತ್ ಶಾ ಹ್ಯಾಟ್ರಿಕ್ ಸಾಧನೆ..! 6 ತಿಂಗಳಲ್ಲಿ 3 ಅತಿ ದೊಡ್ಡ ಮೈಲುಗಲ್ಲು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ