ಆ್ಯಪ್ನಗರ

ರೇಪ್‌ ಆರೋಪಿ ಬಿಷಪ್‌ ಬಂಧನ

ಕೇರಳದ ಕ್ರೈಸ್ತ ಸನ್ಯಾಸಿನಿಯ ಮೇಲೆ 13 ಬಾರಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್‌ ಧರ್ಮಕ್ಷೇತ್ರದ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ

Vijaya Karnataka 22 Sep 2018, 7:14 am
ಕೊಟ್ಟಾಯಂ: ಕೇರಳದ ಕ್ರೈಸ್ತ ಸನ್ಯಾಸಿನಿಯ ಮೇಲೆ 13 ಬಾರಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್‌ ಧರ್ಮಕ್ಷೇತ್ರದ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇದರೊಂದಿಗೆ ಭಾರತದಲ್ಲೇ ಮೊದಲ ಬಾರಿಗೆ ಕ್ಯಾಥೊಲಿಕ್‌ ಬಿಷಪ್‌ ಒಬ್ಬರು ಕ್ರೈಸ್ತ ಸನ್ಯಾಸಿನಿಯ ಲೈಂಗಿಕ ಶೋಷಣೆ ಆರೋಪದಲ್ಲಿ ಸೆರೆಯಾದಂತಾಗಿದೆ.
Vijaya Karnataka Web franco mulakkal


ಕಳೆದ ಮೂರು ದಿನಗಳಿಂದ ಮುಳಕ್ಕಲ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಸಂಜೆ ಅವರನ್ನು ಬಂಧಿಸಿದೆ. ಬಂಧನಕ್ಕೆ ಮುನ್ನ ಪೊಲೀಸರು ಅತ್ಯಾಚಾರದ ಆರೋಪ ಮಾಡಿದ ಕ್ರೈಸ್ತ ಸನ್ಯಾಸಿನಿಯಿಂದಲೂ ಹೊಸ ಹೇಳಿಕೆಗಳನ್ನು ದಾಖಲಿಸಿಕೊಂಡರು ಮತ್ತು ಕೆಲವು ಸಾಕ್ಷ್ಯಗಳಿಗೆ ಸಂಬಂಧಿಸಿ ಸ್ಪಷ್ಟನೆಗಳನ್ನು ಕೇಳಿದರು. ಬಿಷಪ್‌ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕ್ರೈಸ್ತ ಸನ್ಯಾಸಿನಿಯರು ಮತ್ತು ಇತರ ಸಂಘಟನೆಗಳು ಸಂಭ್ರಮಾಚರಿಸಿದವು.

ಸಿಕ್ಕಿಬಿದ್ದಿದ್ದು ಹೇಗೆ?

ಅತ್ಯಾಚಾರ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದ ಬಿಷಪ್‌ ಮುಳಕ್ಕಲ್‌ ವಿಚಾರಣೆಯ ವೇಳೆ ಸುಳ್ಳು ಮಾಹಿತಿ ನೀಡಿ ಸಿಕ್ಕಿಬಿದ್ದರು. ಇದು ಅಂತಿಮವಾಗಿ ಅವರ ಬಂಧನಕ್ಕೂ ಕಾರಣವಾಯಿತು. ಮೊದಲ ಬಾರಿ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾದ 2015ರ ಮೇ 5ರಂದು ತಾನು ಕುರವಿಲಂಗಾಡ್‌ ಕಾನ್ವೆಂಟ್‌ನಲ್ಲಿ ತಂಗಿರಲೇ ಇಲ್ಲ, ಮುತ್ತಲಕೋಡಂ ಕಾನ್ವೆಂಟ್‌ನಲ್ಲಿದ್ದೆ ಎಂದು ಮುಳಕ್ಕಲ್‌ ಹೇಳಿದ್ದರು. ಆದರೆ, ನೋಂದಣಿ ಪುಸ್ತಕದಲ್ಲಿ ಬಿಷಪ್‌ ಮತ್ತು ಚಾಲಕ ಕುರವಿಲಂಗಾಡ್‌ ಕಾನ್ವೆಂಟ್‌ನಲ್ಲೇ ತಂಗಿದ್ದಾಗಿ ನಮೂದಾಗಿತ್ತು. ಜತೆಗೆ ಕುರವಿಲಂಗಾಡ್‌ ಕಾನ್ವೆಂಟ್‌ನ ಭಗಿನಿ ಅಂದು ಬಿಷಪ್‌ ಕಾನ್ವೆಂಟ್‌ಗೆ ಬರಲೇ ಇಲ್ಲ ಎಂದು ಹೇಳಿದ್ದರು. ಇದರ ಜತೆಗೆ ಮೊಬೈಲ್‌ ಟವರ್‌ ಲೊಕೇಶನ್‌ ಆ ದಿನ ಬಿಷಪ್‌ ಕುರವಿಲಂಗಾಡ್‌ನಲ್ಲೇ ಇದ್ದರು ಎನ್ನುವುದನ್ನು ಸ್ಪಷ್ಟಪಡಿಸಿತ್ತು. ಎಲ್ಲವನ್ನೂ ಮುಂದಿಟ್ಟಾಗ ಬಿಷಪ್‌ ಮೌನಕ್ಕೆ ಶರಣಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ