ಆ್ಯಪ್ನಗರ

ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಅಪರಾಧಿ ಮದುವೆ ಸಮಾರಂಭದಲ್ಲಿ ಪತ್ತೆ

ಅತ್ಯಾಚಾರ ಮಾಡಿ ಪೆರೋಲ್ ಮೇಲೆ ಬಿಡುಗಡೆಯಾಗಿ ಕಳೆದ ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಅಪರಾಧಿ ಮದುವೆ ಮನೆಯಲ್ಲಿ ಪತ್ತೆಯಾಗಿದ್ದಾನೆ. ಮನೋಜ್‌ಕುಮಾರ್ ಪಾಸ್ವಾನ್ ಅಲಿಯಾಸ್ ಗಬ್ಬರ್ ಬಿಹಾರದ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಮುಂಬೈ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.

Mumbai Mirror 28 Jun 2018, 4:06 pm
ಮುಂಬಯಿ: ಅತ್ಯಾಚಾರ ಮಾಡಿ ಪೆರೋಲ್ ಮೇಲೆ ಬಿಡುಗಡೆಯಾಗಿ ಕಳೆದ ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಅಪರಾಧಿ ಮದುವೆ ಮನೆಯಲ್ಲಿ ಪತ್ತೆಯಾಗಿದ್ದಾನೆ. ಮನೋಜ್‌ಕುಮಾರ್ ಪಾಸ್ವಾನ್ ಅಲಿಯಾಸ್ ಗಬ್ಬರ್ ಬಿಹಾರದ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಮುಂಬೈ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.
Vijaya Karnataka Web convict


14 ವರ್ಷದ ಅಪ್ರಾಪ್ತೆಯನ್ನು 2012ರಲ್ಲಿ ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿದ್ದ ಸಂಬಂಧ ನಾಸಿಕ್ ಜೈಲಿಗೆ ಹೋಗಿದ್ದ ಅಪರಾಧಿ ವಿರುದ್ಧ ದಿಂಡೋಶಿ ಸೆಷನ್ಸ್ ಕೋರ್ಟ್ 2014ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ 2016ರಲ್ಲಿ ಬಿಹಾರದ ಶಿಯೋಹರ್ ಜಿಲ್ಲೆಯಲ್ಲಿರುವ ಅನಾರೋಗ್ಯಪೀಡಿತ ತಾಯಿಯನ್ನು ನೋಡಲು 15 ದಿನಗಳ ಪೆರೋಲ್ ಪಡೆದಿದ್ದ ಮನೋಜ್‌ಕುಮಾರ್ ಫೆಬ್ರವರಿ 4,2016ರಲ್ಲಿ ಬಿಡುಗಡೆಯಾಗಿದ್ದ. ಮನೋಜ್ ಕುಮಾರ್ ಪಾಸ್ವಾನ್ ತಂದೆ ಸತ್ಯನಾರಾಯಣ ಪಾಸ್ವಾನ್ ಅಪರಾಧಿ ಪರ ಗ್ಯಾರಂಟಿಯಾಗಿದ್ದರು. ಅಲ್ಲದೆ, ಬಿಹಾರದ ಸ್ಥಳೀಯ ಪೊಲೀಸ್ ಠಾಣೆಗೆ ಪ್ರತಿದಿನ ತೆರಳುತ್ತೇನೆ ಎಂದಿದ್ದ ಆತ 15 ನೇ ದಿನ ಹೇಳಿದಂತೆ ನಾಸಿಕ್ ಜೈಲಿಗೆ ವಾಪಸ್‌ ತೆರಳಲಿಲ್ಲ. ಬಳಿಕ, ಮಾರ್ಚ್ 6,2016ರಿಂದ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಅಪರಾಧಿ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

ಒಂದು ವರ್ಷದ ಬಳಿಕ ಮನೋಜ್‌ ಕುಮಾರ್ ಗ್ರಾಮದ ಬಳಿಯ ಆರೇ ಪೊಲೀಸರು ಈತ ಹೊಸ ಮೊಬೈಲ್ ನಂಬರ್ ತೆಗೆದುಕೊಂಡಿರುವುದು ಬಯಲಾಗಿದೆ.
ಬಳಿಕ, ಸ್ಥಳೀಯ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ ಮಹಾರಾಷ್ಟ್ರ ಪೊಲೀಸರು ಬಿಹಾರಕ್ಕೆ ತಂಡವೊಂದನ್ನು ರವಾನೆ ಮಾಡಿದ್ದರು. ಜೂನ್ 24ರಂದು ಮುಂಬೈ ಪೊಲೀಸರು ಬಂದ ಬಳಿಕ ಬಿಹಾರದ ಗ್ರಾಮವೊಂದರಲ್ಲಿ ಮದುವೆ ಮನೆಯಲ್ಲಿ ಗಬ್ಬರ್ ಪತ್ತೆಯಾಗಿದ್ದು, ಈತನನ್ನು ಬಂಧಿಸಿ ನಾಸಿಕ್ ಜೈಲಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಮನೆಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರದಲ್ಲಿ ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ರಾತ್ರಿ 11 ಗಂಟೆಯ ವೇಳೆಗೆ ಡ್ಯಾನ್ಸ್ ಮಾಡುತ್ತಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಈತನ ದೇಹದ ಆಕೃತಿಯೂ ಸ್ವಲ್ಪ ಬದಲಾಗಿದ್ದು, ಈತನನ್ನು ಗುರುತಿಸಲು ಪೊಲೀಸರಿಗೆ ಕಷ್ಟವಾಗಿತ್ತು. ಆದರೆ, ಸ್ಥಳೀಯ ಪೊಲೀಸರು ನಮಗೆ ನೆರವು ನೀಡಿದರು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ಪೊಲೀಸರು ಈತನನ್ನು ಬಂಧಿಸಿದ ಬಳಿಕವೂ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ, ಬಿಹಾರದ ಪೊಲೀಸರ ನೆರವಿನಿಂದ ಅಪರಾಧಿಯನ್ನು ಬಂಧಿಸಲಾಗಿದೆ. ಸೋಮವಾರ ಈತನನ್ನು ಮುಂಬೈಗೆ ಕರೆತರಲಾಗಿದ್ದು, ಬಳಿಕ ನಾಸಿಕ್ ಜೈಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ