ಆ್ಯಪ್ನಗರ

ತನ್ನ ಪರ ತಾನೇ ವಾದಿಸಿ ಗೆದ್ದ ಅತ್ಯಾಚಾರ ಸಂತ್ರಸ್ತೆ

30 ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬಳು ನ್ಯಾಯಾಲಯದಲ್ಲಿ ತನ್ನ ಪರ ತಾನೇ ವಾದಿಸಿ ಗೆದ್ದಿರುವ ಪ್ರಸಂಗ ನೆರೆಯ ಕೇರಳದಲ್ಲಿ ನಡೆದಿದೆ.

TIMESOFINDIA.COM 18 Jul 2018, 10:52 am
ಕೊಚ್ಚಿ: 30 ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬಳು ನ್ಯಾಯಾಲಯದಲ್ಲಿ ತನ್ನ ಪರ ತಾನೇ ವಾದಿಸಿ ಗೆದ್ದಿರುವ ಪ್ರಸಂಗ ನೆರೆಯ ಕೇರಳದಲ್ಲಿ ನಡೆದಿದೆ.
Vijaya Karnataka Web Kerala Highcourt


ಪ್ರಕರಣದ ಹಿನ್ನೆಲೆ

ವೃತ್ತಿಯಲ್ಲಿ ವೈದ್ಯಳಾಗಿರುವ 30 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಲು ಆರೋಪಿ ಬೇರೆಯವರ ನೆರವಿನಿಂದ ಆಕೆಯ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ.

ಸಾರ್ವಜನಿಕ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವೈದ್ಯೆ (ಸಂತ್ರಸ್ತೆ) 34 ವರ್ಷದ ರಾಜೇಶ್ ಬಾಬು ಎಂಬ ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿ, ಬಾಸ್ಟರ್ಡ್ ಎಂದು ಬೈದಿದ್ದಳು ಎಂದು ದೂರು ದಾಖಲಿಸಲಾಗಿತ್ತು. ಆದರೆ ವಾಸ್ತವವಾಗಿ ನಡೆದಿದ್ದೇನೆಂದರೆ ವೈದ್ಯೆ ತನ್ನ ಮನೆಯಿಂದ ಕಾರು ಹೊರ ತರುವಾಗ ಅಡ್ಡಿ ಪಡಿಸಿದ್ದ ರಾಜೇಶ್ ಮತ್ತು ಇತರ ಕೆಲವರು ಕೆಟ್ಟ ಪದ ಪ್ರಯೋಗಿಸಿ ಬೈದಿದ್ದರು. ಈ ಕುರಿತು ವೈದ್ಯೆ ಕೂಡ ಪ್ರಕರಣ ದಾಖಲಿಸಿದ್ದಳು.

ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ತನ್ನ ಪರ ತಾನೇ ವಾದಕ್ಕೆ ನಿಂತ ವೈದ್ಯೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ನ್ಯಾಯಾಧೀಶರಿಗೆ ಮನದಟ್ಟು ಮಾಡಲು ಯಶಸ್ವಿಯಾಗಿದ್ದಾಳೆ.

ಅತ್ಯಾಚಾರ ಪ್ರಕರಣದ ವಿಚಾರಣೆ ಆರಂಭವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಡೆಸಿದ ಕುತಂತ್ರವಿದು. ಅತ್ಯಾಚಾರ ಪ್ರಕರಣದ ವಿಚಾರಣೆಯಲ್ಲಿ ನಾನು ಹಾಜರಾಗುವುದನ್ನು ತಪ್ಪಿಸಲು ಆರೋಪಿ ಈ ರೀತಿಯಲ್ಲಿ ಸುಳ್ಳು ಪ್ರಕರಣವನ್ನು ಸೃಷ್ಟಿಸಿದ್ದಾನೆ. ಪ್ರಕರಣ ಹಿಂಪಡೆಯುವಂತೆ ಈ ಹಿಂದೆ ಕೂಡ ಆತ ನನ್ನ ಬಳಿ ಕೇಳಿಕೊಂಡಿದ್ದ ಎಂದಿದ್ದಾಳೆ ವೈದ್ಯೆ.

ನೀವೇ ವಾದಕ್ಕೆ ನಿಂತಿದ್ದು ಏಕೆ ಎಂದು ವಿಜಯಕರ್ನಾಟಕ ಸಹೋದರ ಪತ್ರಿಕೆ ಟೈಮ್ಸ್ ಆಪ್ ಇಂಡಿಯಾದ ವರದಿಗಾರರು ಕೇಳಲಾಗಿ, ಉತ್ತರಿಸಿದ ಆಕೆ, ಸ್ವತಃ ಅನುಭವಿಸಿದವರಷ್ಟು ಪರಿಣಾಮಕಾರಿಯಾಗಿ ಸತ್ಯವನ್ನು ಬಿಚ್ಚಿಡಲು ಬೇರೆಯವರಿಂದ ಸಾಧ್ಯವಾಗಲಾರದು, ಹೀಗಾಗಿ ಈ ನಿರ್ಧಾರ ಕೈಗೊಂಡೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ