ಆ್ಯಪ್ನಗರ

ಮಾಜಿ ಸೈನಿಕರು ರಾಷ್ಟ್ರಪತಿಗೆ ಪತ್ರ ಬರೆದಿರುವುದು ಸುಳ್ಳು: ರಾಷ್ಟ್ರಪತಿ ಭವನ ಸ್ಪಷ್ಟನೆ

ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಸಶಸ್ತ್ರ ಪಡೆಯ ಎಂಟು ಮಾಜಿ ಮುಖ್ಯಸ್ಥರು ಸೇರಿದಂತೆ ಸುಮಾರು 150 ಮಾಜಿ ಸೈನಿಕರು ಪತ್ರ ಬರೆದಿದ್ದಾರೆ ಎಂಬುದು ಸುಳ್ಳು. ಅಂತಹ ಯಾವುದೇ ಪತ್ರವೂ ಬಂದಿಲ್ಲವೆಂದು ರಾಷ್ಟ್ರಪತಿ ಭವನದ ಮೂಲಗಳು ಮಾಹಿತಿ ನೀಡಿವೆ.

Vijaya Karnataka Web 12 Apr 2019, 12:51 pm
ಹೊಸದಿಲ್ಲಿ: ಭಾರತೀಯ ಸೇನೆ ನಡೆಸುವ ಕಾರ್ಯಾಚರಣೆಯನ್ನು ರಾಜಕಾರಣಿಗಳು ಮತಬೇಟೆಗೆ ಬಳಕೆ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸೈನಿಕರು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸಂಬಂಧ ರಾಷ್ಟ್ರಪತಿ ಭವನದ ಮೂಲಗಳು ಸ್ಪಷ್ಟನೆ ನೀಡಿದ್ದು, ನಮಗೆ ಇಂತಹ ಯಾವುದೇ ಪತ್ರ ಬಂದಿಲ್ಲವೆಂದು ಮಾಹಿತಿ ನೀಡಿವೆ.
Vijaya Karnataka Web ramnath kovind


ಸಶಸ್ತ್ರ ಪಡೆಯ ಎಂಟು ಮಾಜಿ ಮುಖ್ಯಸ್ಥರು ಸೇರಿದಂತೆ ಸುಮಾರು 150 ಮಾಜಿ ಸೈನಿಕರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದರು ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಅಲ್ಲದೆ, ಮಾಜಿ ಸೈನಿಕರೇ ಬರೆದಿದ್ದಾರೆ ಎನ್ನಲಾದ ಪತ್ರವೊಂದರ ಪ್ರತಿ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಸಶಸ್ತ್ರ ಪಡೆಯ ಎಂಟು ಮಾಜಿ ಮುಖ್ಯಸ್ಥರು ಸೇರಿದಂತೆ ಸುಮಾರು 150 ಮಾಜಿ ಸೈನಿಕರು ಪತ್ರ ಬರೆದಿದ್ದಾರೆ ಎಂಬುದು ಸುಳ್ಳು. ಅಂತಹ ಯಾವುದೇ ಪತ್ರವೂ ಬಂದಿಲ್ಲವೆಂದು ರಾಷ್ಟ್ರಪತಿ ಭವನದ ಮೂಲಗಳು ಮಾಹಿತಿ ನೀಡಿವೆ.

ಅಲ್ಲದೆ, ಆ ಪತ್ರದಲ್ಲಿ ಮೊದಲ ಹೆಸರು ಜನರಲ್ ಎಸ್‌.ಎಫ್‌.ರೊಡ್ರಿಗಸ್‌ರವರ ಹೆಸರಿದ್ದು, ಅವರು ಸಹ ತಾವು ಇಂತಹ ಯಾವುದೇ ಪತ್ರಕ್ಕೆ ಸಹಿ ಮಾಡಿಲ್ಲ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.



ಪಕ್ಷದ ಕಾರ್ಯಕರ್ತರು ಸೈನಿಕರ ಸಮವಸ್ತ್ರ ಧರಿಸುತ್ತಿರುವುದು, ಪಕ್ಷದ ಪೋಸ್ಟರ್‌ಗಳಲ್ಲಿ ಸೈನಿಕರ ಚಿತ್ರಗಳನ್ನು ಬಳಕೆ ಮಾಡುತ್ತಿರುವುದು, ಪ್ರಮುಖವಾಗಿ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ಹೆಸರು ಮತ್ತು ಚಿತ್ರ ಬಳಕೆ ಮಾಡುತ್ತಿರುವುದರ ಬಗ್ಗೆ ಕೋವಿಂದ್‌ ಅವರಿಗೆ ಬರೆದ ಪತ್ರದಲ್ಲಿ ಗಮನ ಸೆಳೆದಿದ್ದಾರೆ ಎನ್ನಲಾಗಿತ್ತು.

ಜತೆಗೆ, ಭಾರತೀಯ ಸೈನಿಕರ ಕಾರ್ಯಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದರ ಬಗ್ಗೆ ಚುನಾವಣೆ ಆಯೋಗದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ಪಕ್ಷಗಳು ಭಾರತೀಯ ಸೇನೆಯನ್ನು ಪ್ರಚಾರದ ವೇಳೆ ಬಳಕೆ ಮಾಡುತ್ತಿರುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಪತ್ರದಲ್ಲಿ ಮಾಜಿ ಸೈನಿಕರು ವಿವರಿಸಿದ್ದಾರೆ ಎಂದು ತಿಳಿದುಬಂದಿತ್ತು.

ಈ ಸಂಬಂಧ ಟ್ವೀಟ್‌ ಮಾಡಿದ್ದ ಕಾಂಗ್ರೆಸ್, ''ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಯೋಧರನ್ನು ಮತ ಗಳಿಕೆಗಾಗಿ ಬಳಕೆ ಮಾಡಲು ಪ್ರಯತ್ನಿಸಬಹುದು, ಆದರೆ ಯೋಧರು ಬಿಜೆಪಿ ಪರವಲ್ಲ, ಭಾರತ ಪರವಾಗಿ ನಿಂತಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ. ನರೇಂದ್ರ ಮೋದಿ ಅವರು ಸೈನಿಕರನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ, ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮಾಜಿ ಸೈನಿಕರು ಪತ್ರ ಬರೆದಿದ್ದಾರೆ'' ಎಂದು ಆರೋಪಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ