ಆ್ಯಪ್ನಗರ

ಹೊಸ ಪ್ರತ್ಯೇಕತಾವಾದಿ ಸಂಘಟನೆ ಹುಟ್ಟುಹಾಕಲು ಐಎಸ್‌ಐ ಸಂಚು

ಈಗಾಗಲೇ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಕ್ರಮ ಜರುಗಿಸಲು ಅಣಿಯಾಗಿದೆ. ಈ ಹಿನ್ನೆಲೆಯಲ್ಲಿ ಲಷ್ಕರೆ ತಾಯ್ಬಾ ಸಂಘಟನೆಯ ಉಗ್ರರನ್ನೇ ಸದಸ್ಯರನ್ನಾಗಿಸಿ ಹೊಸ ಪ್ರತ್ಯೇಕತಾವಾದಿ ಸಂಘಟನೆ ರಚಿಸಲು ಐಎಸ್‌ಐ ಮುಂದಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

PTI 13 Jun 2019, 5:00 am
ಹೊಸದಿಲ್ಲಿ : ನರೇಂದ್ರ ಮೋದಿ ನೇತೃತ್ವದ ಸರಕಾರದ ಖಡಕ್‌ ಉಗ್ರ ದಮನ ನೀತಿ ಹಾಗೂ ಜಮ್ಮು -ಕಾಶ್ಮೀರದಲ್ಲಿ ಅಡಗಿರುವ ಉಗ್ರರನ್ನು ಹೊರಗೆಳೆದು ಹತ್ಯೆಗೈಯುವ ತೀವ್ರ ಕಾರ್ಯಾಚರಣೆಯಿಂದ ಕಂಗೆಟ್ಟಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ತನ್ನ ಭಾರತ ವಿರೋಧಿ ಧೋರಣೆಯನ್ನು ಬಲಪಡಿಸಲು ಉಗ್ರರ ಹೊಸ ಸಂಘಟನೆ ರಚಿಸಲು ಸಂಚು ರೂಪಿಸಿದೆ.
Vijaya Karnataka Web isi

ಈಗಾಗಲೇ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಕ್ರಮ ಜರುಗಿಸಲು ಅಣಿಯಾಗಿದೆ. ಈ ಹಿನ್ನೆಲೆಯಲ್ಲಿ ಲಷ್ಕರೆ ತಾಯ್ಬಾ ಸಂಘಟನೆಯ ಉಗ್ರರನ್ನೇ ಸದಸ್ಯರನ್ನಾಗಿಸಿ ಹೊಸ ಪ್ರತ್ಯೇಕತಾವಾದಿ ಸಂಘಟನೆ ರಚಿಸಲು ಐಎಸ್‌ಐ ಮುಂದಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಲಷ್ಕರ್‌ ಸಂಘಟನೆಯ ಮಾಜಿ ಕಮಾಂಡರ್‌ ಇರ್ಷಾದ್‌ ಅಹ್ಮದ್‌ ಮಲಿಕ್‌ ಈ ಹೊಸ ಪ್ರತ್ಯೇಕತಾವಾದಿ ಸಂಘಟನೆಯ ನೇತೃತ್ವ ವಹಿಸಲಿದ್ದಾನೆ. ಈಗಾಗಲೇ ಕಣಿವೆ ರಾಜ್ಯದಲ್ಲಿನ ಸಣ್ಣಪುಟ್ಟ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ಹೊಸ ಸಂಘಟನೆಗೆ ಅಗತ್ಯ ಬೆಂಬಲ ನೀಡುವಂತೆ ಐಎಸ್‌ಐ ಸೂಚಿಸಿದೆ ಎನ್ನಲಾಗಿದೆ.

ಪಾಕ್‌ ರಾಯಭಾರಿಯಿಂದಲೇ ಹಣದ ನೆರವು: ಭಾರತದಲ್ಲಿರುವ ಪಾಕ್‌ ರಾಯಭಾರ ಕಚೇರಿ ಆಯುಕ್ತರ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳು ಕಳುಹಿಸುವ ಹಣವನ್ನು ಪ್ರತ್ಯೇಕತಾವಾದಿ ನಾಯಕರಿಗೆ ತಲುಪಿಸಲಾಗುತ್ತಿದೆ. ಹೊಸ ಸಂಘಟನೆ ರಚನೆಗೂ ಈಗಾಗಲೇ ಸಾಕಷ್ಟು ಹಣ ಹರಿದುಬಂದಿದೆ. ಆ ಪೈಕಿ ಒಂದಷ್ಟು ಪ್ರಮಾಣವನ್ನು ಉಗ್ರರಿಗೆ ಹಂಚಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಕಣಿವೆಯಲ್ಲಿನ ಪ್ರತ್ಯೇಕತಾವಾದಿ ನಾಯಕರ ಹಣದ ಮೂಲಗಳನ್ನು ಕೆದಕುತ್ತಿರುವ ಹಿನ್ನೆಲೆಯಲ್ಲಿ ಪಾಕ್‌ ರಾಯಭಾರ ಕಚೇರಿ ನೆರವಿಗೆ ಧಾವಿಸಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ