ಆ್ಯಪ್ನಗರ

ದಿಲ್ಲಿಗೆ ರೈಲು ಹತ್ತಿದ ಸಂಸದ ಸಂಸದ ಗಾಯಕ್ವಾಡ್‌

ಏರ್‌ ಇಂಡಿಯಾ ಸಿಬ್ಬಂದಿಗೆ ಥಳಿಸಿ ವಿವಾದಕ್ಕೀಡಾಗಿರುವ ಸಂಸದ ಗಾಯಕ್ವಾಡ್‌ ಅವರು ಕಳೆದ ವಾರ ದಿಲ್ಲಿಗೆ ಹೋಗಲು ರೈಲು ಹತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 10 Apr 2017, 1:27 pm
ಪುಣೆ: ಏರ್‌ ಇಂಡಿಯಾ ಸಿಬ್ಬಂದಿಗೆ ಥಳಿಸಿ ವಿವಾದಕ್ಕೀಡಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌ ಅವರು ಕಳೆದ ವಾರ ದಿಲ್ಲಿಗೆ ಹೋಗಲು ರಾಜಧಾನಿ ಎಕ್ಸ್‌ಪ್ರೆಸ್ ರೈಲು ಹತ್ತಿದ್ದಾರೆ.
Vijaya Karnataka Web ravindra gaikwad prefers train to flight takes delhi bound rajdhani express
ದಿಲ್ಲಿಗೆ ರೈಲು ಹತ್ತಿದ ಸಂಸದ ಸಂಸದ ಗಾಯಕ್ವಾಡ್‌


ಏರ್‌ ಇಂಡಿಯಾ ಸಿಬ್ಬಂದಿಗೆ ಥಳಿಸಿದ ಬಳಿಕ ವಿಮಾನ ಯಾನ ಸಂಸ್ಥೆಗಳಿಂದ ಟಿಕೆಟ್‌ ನಿಷೇಧಕ್ಕೆ ಒಳಗಾಗಿದ್ದರು. ಬಳಿಕ ನಾಗರಿಕ ವಿಮಾನಯಾನ ಸಚಿವಾಲಯದ ಮಧ್ಯಪ್ರವೇಶದಿಂದ ವಿಮಾನ ಟಿಕೆಟ್‌ ರದ್ದುಗೊಂಡಿತ್ತು
ಮುಂಬಯಿ ಸೆಂಟ್ರಲ್‌ ಸ್ಟೇಷನ್‌ನಿಂದ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ಬೊರಿವಲಿಯಲ್ಲೂ ನಿಲುಗಡೆಯಾಗಿತ್ತು. ಗಾಯಕ್ವಾಡ್‌ ಯಾವ ಸ್ಟೇಷನ್‌ನಲ್ಲಿ ರೈಲು ಹತ್ತಿರುವುದು ಎಂಬುದು ಗೊತ್ತಿಲ್ಲ. ಅವರು ಸಂಸತ್‌ ಅಧಿವೇಶನ ಮುಗಿಯುವವರೆಗೂ ದಿಲ್ಲಿಯಲ್ಲೇ ಉಳಿದುಕೊಳ್ಳಲಿದ್ದಾರೆ. ಅವರ ಜತೆಯಲ್ಲಿ ಇತರ ಐವರು ಪ್ರಯಾಣಿಸಿದ್ದಾರೆ. ಏರ್‌ ಇಂಡಿಯಾ ಪ್ರಕರಣ ಮುಗಿದು ಹೋಗಿದ್ದು, ಈಗ ಚರ್ಚಿಸುವಂಥದ್ದು ಏನಿಲ್ಲ ಎಂದು ಸಂಸದರ ಆಪ್ತ ಜಿತೇಂದ್ರ ಶಿಂಧೆ ಹೇಳಿದ್ದಾರೆ.

ravindra Gaikwad prefers train to flight: Osmanabad MP Ravindra Gaikwad has taken the Mumbai Rajdhani Express to Delhi rather than opting for a flight, sources close to the MP told TOI on Monday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ