ಆ್ಯಪ್ನಗರ

ಗುಜರಾತ್‌: 6 ಮತಗಟ್ಟೆಗಳಲ್ಲಿ ಇಂದು ಮರು ಮತದಾನ

ಗುಜರಾತ್‌ ವಿಧಾನಸಭೆಗೆ ಎರಡನೇ ಹಂತದಲ್ಲಿ ಡಿಸೆಂಬರ್‌ 14ರಂದು ನಡೆದಿದ್ದ ಚುನಾವಣೆ ವೇಳೆ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂಬ ಹಿನ್ನೆಲೆಯಲ್ಲಿ ...

Agencies 17 Dec 2017, 5:05 am

ಅಹಮದಾಬಾದ್‌: ಗುಜರಾತ್‌ ವಿಧಾನಸಭೆಗೆ ಎರಡನೇ ಹಂತದಲ್ಲಿ ಡಿಸೆಂಬರ್‌ 14ರಂದು ನಡೆದಿದ್ದ ಚುನಾವಣೆ ವೇಳೆ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂಬ ಹಿನ್ನೆಲೆಯಲ್ಲಿ ನಾಲ್ಕು ವಿಧಾನಸಭೆ ಕ್ಷೇತ್ರದ ಆರು ಮತಗಟ್ಟೆಗಳಲ್ಲಿ ಭಾನುವಾರ ಮರು ಮತದಾನ ನಡೆಸಲು ಚುನಾವಣೆ ಆಯೋಗ ನಿರ್ಧರಿಸಿದೆ. ಆದರೆ ಈ ದೋಷ ಯಾವುದು ಎಂಬುದನ್ನು ಅದು ಸ್ಪಷ್ಟಪಡಿಸಿಲ್ಲ.

ಕಾಂಗ್ರೆಸ್‌ ಬೆಂಬಲದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ ಜಿಗ್ನೇಶ್‌ ಮೇವಾನಿ ಕಣದಲ್ಲಿರುವ ವಡಗಾಮ್‌ನಲ್ಲಿ ಒಂದು, ದಸ್ಕ್‌ರೋಯಿ ಕ್ಷೇತ್ರದಲ್ಲಿ ಒಂದು ಹಾಗೂ ವಿರಮ್‌ಗಾಮ್‌ ಮತ್ತು ಸಾವ್ಲಿಯ ತಲಾ ಎರಡು ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ. ಇದೇ ವೇಳೆ ಇನ್ನೂ ಏಳು ಕ್ಷೇತ್ರಗಳ 10 ಮತಗಟ್ಟೆಗಳಲ್ಲಿ ಚುನಾವಣಾಧಿಕಾರಿಗಳು ಇವಿಎಂಗಳಲ್ಲಿ ಅಸ್ತಿತ್ವದಲ್ಲಿರುವ ಡೇಟಾ ಅಳಿಸಿ ಹಾಕಲು ಮರೆತ ಹಿನ್ನೆಲೆಯಲ್ಲಿ ಅಲ್ಲಿ ಮತ ಚಲಾವಣೆಯನ್ನು ಖಾತ್ರಿ ಪಡಿಸುವ ಚೀಟಿಗಳನ್ನು (ವಿವಿಪ್ಯಾಟ್‌) ಏಣಿಕೆಗೆ ಪರಿಗಣಿಸಲು ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ