ಆ್ಯಪ್ನಗರ

ಈ ವರ್ಷ 2 ಲಕ್ಷ ಮಂದಿ ಹಜ್‌ ಯಾತ್ರೆ

1.40 ಲಕ್ಷ ಯಾತ್ರಿಗಳು ಹಜ್‌ ಸಮಿತಿ ವತಿಯಿಂದ ಪ್ರಯಾಣ ಕೈಗೊಂಡರೆ, ಉಳಿದ 60,000 ಮಂದಿ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಯಾತ್ರೆ ಪೂರೈಸಲಿದ್ದಾರೆ. ಒಟ್ಟು 725 ಖಾಸಗಿ ಪ್ರವಾಸ ನಿರ್ವಾಹಕರು ಹಜ್‌ ಯಾತ್ರಿಗಳನ್ನು ಸೌದಿ ಅರೇಬಿಯಾಗೆ ತಲುಪಿಸಲಿದ್ದಾರೆ.

PTI 10 Jun 2019, 5:00 am
ಹೊಸದಿಲ್ಲಿ: ಈ ವರ್ಷ ಬರೋಬ್ಬರಿ 2 ಲಕ್ಷ ಮಂದಿ ಹಜ್‌ ಯಾತ್ರೆ ಕೈಗೊಳ್ಳಲಿದ್ದು, ಇದು ಹೊಸ ದಾಖಲೆಯಾಗಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಹೇಳಿದ್ದಾರೆ.
Vijaya Karnataka Web naqvi

ಸರಕಾರದಿಂದ ಯಾವುದೇ ಸಬ್ಸಿಡಿ ಇಲ್ಲದೆಯೇ ಇಷ್ಟು ಸಂಖ್ಯೆಯ ಜನರು ಪವಿತ್ರ ಯಾತ್ರೆ ಕೈಗೊಳ್ಳುತ್ತಿರುವುದು ವಿಶೇಷ. ದೇಶದ 21 ಸ್ಥಳಗಳಿಂದ 500ಕ್ಕೂ ಹೆಚ್ಚು ವಿಮಾನಗಳ ಮೂಲಕ ಇವರು ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಖಾಸಗಿ ಪ್ರವಾಸ ನಿರ್ವಾಹಕರ (ಪಿಟಿಒ) ಪ್ರತಿನಿಧಿಗಳ ಸಭೆಯನ್ನು ಭಾನುವಾರ ಉದ್ದೇಶಿಸಿ ಮಾತನಾಡಿದ ಅವರು, ''1.40 ಲಕ್ಷ ಯಾತ್ರಿಗಳು ಹಜ್‌ ಸಮಿತಿ ವತಿಯಿಂದ ಪ್ರಯಾಣ ಕೈಗೊಂಡರೆ, ಉಳಿದ 60,000 ಮಂದಿ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಯಾತ್ರೆ ಪೂರೈಸಲಿದ್ದಾರೆ. ಒಟ್ಟು 725 ಖಾಸಗಿ ಪ್ರವಾಸ ನಿರ್ವಾಹಕರು ಹಜ್‌ ಯಾತ್ರಿಗಳನ್ನು ಸೌದಿ ಅರೇಬಿಯಾಗೆ ತಲುಪಿಸಲಿದ್ದಾರೆ,'' ಎಂದು ತಿಳಿಸಿದ್ದಾರೆ.
ಹಜ್‌ ಸಮಿತಿ ನಿಗದಿಪಡಿಸುವ ದರದಲ್ಲಿ ಖಾಸಗಿ ಪ್ರವಾಸ ನಿರ್ವಾಹಕರು ಯಾತ್ರಿಗಳನ್ನು ಕರೆದೊಯ್ಯಬೇಕು. ಇಂತಹ ಪ್ರಯಾಣ ಪ್ಯಾಕೇಜ್‌ ವಿವರಗಳನ್ನು 'hಠಿಠಿp://ha್ಜ.್ಞಜ್ಚಿ.ಜ್ಞಿ/pಠಿಟ/' ವೆಬ್‌ಸೈಟ್‌ ಮೂಲಕ ಪಡೆಯಬಹುದು. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ, ಪ.ಬಂಗಾಳ, ಆಂಧ್ರ ಪ್ರದೇಶ, ಬಿಹಾರ ರಾಜ್ಯದ ಎಲ್ಲ ಅರ್ಜಿದಾರರೂ ಯಾತ್ರೆಗೆ ಆಯ್ಕೆಯಾಗಿದ್ದಾರೆ. ಹೆಚ್ಚಿದ ಕೋಟಾದಿಂದಾಗಿ ಇದು ಸಾಧ್ಯವಾಗಿದೆ ಎಂದು ನಕ್ವಿ ತಿಳಿಸಿದ್ದಾರೆ.
ಒಂಟಿ ಮಹಿಳಾ ಯಾತ್ರಿಗಳ ಹೆಚ್ಚಳ
ಪುರುಷರ ಜತೆಯಿಲ್ಲದೆ ಒಂಟಿಯಾಗಿ ಹಜ್‌ ಯಾತ್ರೆ ಕೈಗೊಳ್ಳುವ ಮಹಿಳೆಯರ ಸಂಖ್ಯೆ ಈ ಬಾರಿ 2,340ಕ್ಕೆ ತಲುಪಿದೆ. ಭಾರತದಿಂದ ಹಜ್‌ ಯಾತ್ರೆ ಕೈಗೊಳ್ಳುವ 2 ಲಕ್ಷ ಜನರ ಪೈಕಿ 48% ಮಹಿಳೆಯರು ಎಂದು ಕೇಂದ್ರ ಸಚಿವ ನಕ್ವಿ ಮಾಹಿತಿ ನೀಡಿದ್ದಾರೆ.

.......

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ