ಆ್ಯಪ್ನಗರ

'ಪಪ್ಪು' ಎಂದಿದ್ದಕ್ಕೆ ಗೇಟ್‌ಪಾಸ್: ಕಾಂಗ್ರೆಸ್ ತ್ಯಜಿಸಿದ ಪ್ರಧಾನ್

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯನ್ನು ವಾಟ್ಸಾಪ್‌ ಬರಹದಲ್ಲಿ ಹೊಗಳುವ ಭರದಲ್ಲಿ 'ಪಪ್ಪು' ಎಂದು ಕರೆದು, ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್‌ ...

Vijaya Karnataka Web 29 Jun 2017, 5:33 pm

ಹೊಸದಿಲ್ಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯನ್ನು ವಾಟ್ಸಾಪ್‌ ಬರಹದಲ್ಲಿ ಹೊಗಳುವ ಭರದಲ್ಲಿ 'ಪಪ್ಪು' ಎಂದು ಕರೆದು, ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್‌ ನಾಯಕ ಬುಧವಾರ ಪಕ್ಷ ದಿಂದ ಹೊರನಡೆಯುತ್ತಲೇ, 'ಪಪ್ಪು'ವಿಗೆ ನಮ್ಮ ಮನಸ್ಥಿತಿ ಅರ್ಥವಾಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಬರೆದಿರುವ ರಾಜಿನಾಮೆ ಪತ್ರದಲ್ಲಿ, ಮೀರತ್‌ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ವಿನಯ್‌ ಪ್ರಧಾನ್‌, ಪಕ್ಷ ದ ಎಲ್ಲ ಸ್ಥಾನಗಳಿಂದ ಕೆಳಗಿಳಿಸುವ ಮೊದಲು ತಮ್ಮ ವಾದವನ್ನು ಆಲಿಸುವ ಸೌಜನ್ಯವನ್ನೂ ಕಾಂಗ್ರೆಸ್‌ ತೋರಿಸಿಲ್ಲ ಎಂದು ಆರೋಪಿಸಿದ್ದಾರೆ.

''ಅದಾನಿ, ಅಂಬಾನಿ ಮಲ್ಯರೊಂದಿಗೆ ಕೈಜೋಡಿಸದೆ, ಸ್ವಹಿತಾಸಕ್ತಿಗಿಂತ ದೇಶದ ಒಳಿತಿಗಾಗಿ ಯೋಚಿಸಿದ್ದ ಪಕ್ಷ ದ ಉಪಾಧ್ಯಕ್ಷರನ್ನು ಹೊಗಳುವ ವಾಟ್ಸಾಪ್‌ ಪೋಸ್ಟ್‌ ನಾನು ಕಳುಹಿಸಿದ್ದೆ.'' ಎಂದು ಹೇಳಿರುವ ವಿನಯ್‌, ನನ್ನ ವಿರುದ್ಧವೇ ಕ್ರಮ ಕೈಗೊಳ್ಳುವ ಮೂಲಕ, ರಾಹುಲ್‌ ಗಾಂಧಿ ಬರಹವೊಂದನ್ನು ಅರ್ಥ ಮಾಡಿಕೊಳ್ಳಲಾರದ ಪಪ್ಪು ತಾವು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ