ಆ್ಯಪ್ನಗರ

ವಿಜಯ್‌ ಮಲ್ಯ ಪ್ಲಾನ್‌ಗೆ ಭಾರತ ಚೆಕ್‌ಮೇಟ್‌..! ಆಶ್ರಯ ನೀಡದಂತೆ ಇಂಗ್ಲೆಂಡ್‌ಗೆ ಮನವಿ

ಭಾರದತ ವಿವಿಧ ಬ್ಯಾಂಕ್‌ಗಳಿಗೆ ನೀಡಬೇಕಾದ 9,000 ಕೋಟಿ ರೂ. ಹಣವನ್ನು ಮರುಪಾವತಿಸದೇ ದೇಶ ಬಿಟ್ಟು ಪರಾರಿಯಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ವಿಜಯ್‌ ಮಲ್ಯರನ್ನು ಭಾರತಕ್ಕೆ ಶೀಘ್ರ ಕರೆದುಕೊಂಡು ಬರಲು ಭಾರತ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆ ಮಲ್ಯ ಸಲ್ಲಿಸಿದ ರಾಜಾಶ್ರಯ ಅರ್ಜಿಯನ್ನು ಪುರಸ್ಕರಿಸದಂತೆ ಇಂಗ್ಲೆಂಡ್‌ಗೆ ಭಾರತ ಮನವಿ ಮಾಡಿದೆ.

Agencies 11 Jun 2020, 11:42 pm
ಹೊಸದಿಲ್ಲಿ: ಭಾರತದಿಂದ ಪರಾರಿಯಾಗಿ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್‌ ಮಲ್ಯರ ರಾಜಾಶ್ರಯ ಅರ್ಜಿಯನ್ನು ಪುರಸ್ಕರಿಸದಂತೆ ಭಾರತ ಇಂಗ್ಲೆಂಡ್‌ಗೆ ಮನವಿ ಮಾಡಿದೆ. ಇದರಿಂದ ಶೀಘ್ರದಲ್ಲಿ ಮಲ್ಯ ಭಾರತಕ್ಕೆ ಹಸ್ತಾಂತರಗೊಳ್ಳುವ ಸಾಧ್ಯತೆ ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ಪಡೆದ 9000 ಕೋಟಿ ರೂ.ಗೂ ಹೆಚ್ಚಿನ ಸಾಲ ಮರುಪಾವತಿಸದೇ ಮಲ್ಯ ದೇಶದಿಂದ ಪರಾರಿಯಾಗಿದ್ದರು.
Vijaya Karnataka Web Vijay Mallya
ವಿಜಯ್‌ ಮಲ್ಯ (ಫೈಲ್‌ ಫೋಟೋ)


ಮಲ್ಯ ಹಸ್ತಾಂತರ ಪ್ರಕ್ರಿಯೆ ಶೀಘ್ರ ಮುಗಿಸಲು ಇಂಗ್ಲೆಂಡ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಜೊತೆಗೆ ಮಲ್ಯ ರಾಜಾಶ್ರಯದ ಅರ್ಜಿಯನ್ನು ಪುರಸ್ಕರಿಸದಂತೆ ಇಂಗ್ಲೆಂಡ್‌ಗೆ ಮನವಿ ಮಾಡಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್‌ ಶ್ರೀವಾತ್ಸವ್‌ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬ್ರಿಟನ್‌ ಇನ್ನೊಂದು ಕಾನೂನು ಪ್ರಕ್ರಿಯೆ ಇದೆ. ಅದು ಬಗೆಹರಿಯದೇ ಮಲ್ಯ ಹಸ್ತಾಂತರ ಸಾಧ್ಯವಿಲ್ಲ ಎಂದಿತ್ತು. ಕಳೆದ ತಿಂಗಳು ಹಸ್ತಾಂತರಕ್ಕೆ ತಡೆ ನೀಡುವಂತೆ ಲಂಡನ್‌ ಹೈಕೋರ್ಟ್‌ ಆದೇಶದ ವಿರುದ್ಧ ಇಂಗ್ಲೆಂಡ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇಂಗ್ಲೆಂಡ್‌ ಹೈಕೋರ್ಟ್‌ ಮಲ್ಯ ಅರ್ಜಿ ತಿರಸ್ಕರಿಸಿ ಹಸ್ತಾಂತರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿತ್ತು.

ಮತ್ತೊಂದು ಕಾನೂನು ತೊಡಕು; ವಿಜಯ್‌ ಮಲ್ಯ ಹಸ್ತಾಂತರ ಇನ್ನಷ್ಟು ವಿಳಂಬ

ಆದರೆ, ಕಾನೂನು ಸಮಸ್ಯೆಯೊಂದು ಮಲ್ಯ ಹಸ್ತಾಂತರಕ್ಕೆ ಅಡ್ಡಬಂದಿತ್ತು. ಆ ಕಾನೂನು ಸಮಸ್ಯೆಯನ್ನು ಪರಿಹರಿಸದೇ ಯುಕೆ ಕಾನೂನು ಪ್ರಕಾರ ಮಲ್ಯ ಹಸ್ತಾಂತರ ಸಾಧ್ಯವಾಗುವುದಿಲ್ಲ. ಈ ಪ್ರಕ್ರಿಯೆ ಎಷ್ಟು ದಿನ ಆಗುತ್ತೆ ಎಂಬುದನ್ನು ನಾವು ಅಂದಾಜು ಮಾಡುವುದಕ್ಕೆ ಆಗುವುದಿಲ್ಲ. ಎಷ್ಟು ಬೇಗ ಆಗುತ್ತೋ ಅಷ್ಟು ವೇಗವಾಗಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದು ಬ್ರಿಟಿಷ್‌ ಹೈ ಕಮಿಷನ್‌ ವಕ್ತಾರ ಕೆಲ ದಿನಗಳ ಹಿಂದೆ ಹೇಳಿದ್ದರು.

ವಿಜಯ್‌ ಮಲ್ಯ ಹಸ್ತಾಂತರ ಪ್ರಕ್ರಿಯೆ; ಯಾವ ಕ್ಷಣದಲ್ಲಿ ಬೇಕಾದರೂ ಮುಂಬೈಗೆ ಮದ್ಯದ ದೊರೆ

ಇಂಗ್ಲೆಂಡ್‌ ಕಾನೂನಿನ ಪ್ರಕಾರ ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ ಹಸ್ತಾಂತರ ಆದೇಶ ನೀಡಿದ 28 ದಿನಗಳೊಳಗೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಆದರೆ, ಹಸ್ತಾಂತರಗೊಂಡ ವ್ಯಕ್ತಿ ರಾಜಾಶ್ರಯದ ಅರ್ಜಿಯನ್ನು ಸಲ್ಲಿಸಿದ್ದರೆ ಆ ಅರ್ಜಿ ಇತ್ಯರ್ಥವಾಗುವವರೆಗೂ ಹಸ್ತಾಂತರ ಸಾಧ್ಯವಾಗುವುದಿಲ್ಲ ಎಂದು ಇಂಗ್ಲೆಂಡ್‌ ಕಾನೂನು ಹೇಳುತ್ತದೆ.

ಮಲ್ಯ ಮುಂದಿದೆ 'ರಾಜಾಶ್ರಯ'ದ ಆಯ್ಕೆ, ಹಸ್ತಾಂತರದಿಂದ ಪಾರಾಗುವ ಸಾಧ್ಯತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ