ಆ್ಯಪ್ನಗರ

ಹೆರಿಗೆ ಭತ್ಯೆಗೆ ಮಿತಿ?

ಹಣಕಾಸು ಸಂಪನ್ಮೂಲ ಕೊರತೆಯಿಂದ ಹೆರಿಗೆ ಭತ್ಯೆಯನ್ನು ಕೇವಲ ಮೊದಲ ಮಗುವಿಗೆ ಮಾತ್ರ ಸೀಮಿತಗೊಳಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಏಜೆನ್ಸೀಸ್ 19 Feb 2017, 7:48 am

ಹೊಸದಿಲ್ಲಿ: ಹಣಕಾಸು ಸಂಪನ್ಮೂಲ ಕೊರತೆಯಿಂದ ಹೆರಿಗೆ ಭತ್ಯೆಯನ್ನು ಕೇವಲ ಮೊದಲ ಮಗುವಿಗೆ ಮಾತ್ರ ಸೀಮಿತಗೊಳಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ನೋಟ್‌ ಬ್ಯಾನ್‌ ಬಳಿಕ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಶಿಶು ಮರಣ ಪ್ರಮಾಣ ತಡೆಯುವ ಉದ್ದೇಶದಿಂದ ಗರ್ಭಿಣಿಯರ ಹಾಗೂ ನವಜಾತ ಶಿಶುವಿನ ಆರೈಕೆಗೆ ವರ್ಷಕ್ಕೆ 6 ಸಾವಿರ ರೂ. ಹಣಕಾಸಿನ ನೆರವು ಪ್ರಕಟಿಸಿದ್ದರು.

Vijaya Karnataka Web restriction to delivery allowances
ಹೆರಿಗೆ ಭತ್ಯೆಗೆ ಮಿತಿ?


ಆದರೆ ಈ ಬಾರಿಯ ಬಜೆಟ್‌ನಲ್ಲಿ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಅನುದಾನ ಬಿಡುಗಡೆಯಾಗದಿರುವ ಹಿನ್ನೆಲೆಯಲ್ಲಿ ಅದನ್ನು ಕೇವಲ ಚೊಚ್ಚಲ ಮಗುವಿಗೆ ಮಾತ್ರ ಸೀಮಿತಗೊಳಿಸುವ ನಿಟ್ಟಿನಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಕ್ಯಾಬಿನೆಟ್‌ ನೋಟ್‌ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ಹೇಳಿವೆ. ಈ ಯೋಜನೆಗೆ 2017-18ನೇ ಸಾಲಿನ ಬಜೆಟ್‌ನಲ್ಲಿ 2,700 ಕೋಟಿ ರೂ. ಮೀಸಲಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ