ಆ್ಯಪ್ನಗರ

ಸರ್ದಾರ್‌ ಪಟೇಲ್‌ ಜನ್ಮದಿನಕ್ಕೆ ಪೊಲೀಸ್‌ ಸ್ಮಾರಕ ಚಿಹ್ನೆ ಬಿಡುಗಡೆ: ಅಮಿತ್‌ ಶಾ

ಕ್ಷಿಪ್ರ ಕಾರ್ಯಪಡೆ - ಆರ್‌ಎಫ್‌ ಆಯೋಜಿಸದ್ದ ಸಮಾರಂಭದ ಗೃಹ ಸಚಿವ ಅಮಿತ್ ಶಾ ಹುತಾತ್ಮ ಯೋಧರ ಕುಟುಂಬದವರಿಗೆ ಶೌರ್ಯ ಪ್ರಶಸ್ತಿ ಸನ್ಮಾನಿಸಿದರು.

Vijaya Karnataka Web 30 Sep 2019, 9:21 pm
ಅಹಮದಾಬಾದ್‌: ಸರ್ದಾರ್ ಪಟೇಲ್ ಜನ್ಮ ವರ್ಷಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಪೊಲೀಸ್ ಸ್ಮಾರಕದ ಚಿಹ್ನೆ ಬಿಡುಗಡೆ ಮಾಡಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
Vijaya Karnataka Web ಅಮಿತ್‌ ಶಾ
ಅಮಿತ್‌ ಶಾ


ಅಹಮದಾಬಾದ್ ವಸ್ತ್ರಲ್‌ನಲ್ಲಿ ಕ್ಷಿಪ್ರ ಕಾರ್ಯಪಡೆ ಆರ್‌ಎಎಫ್ ಆಯೋಜಿಸಿದ್ದ ಸಮಾರಂಭದಲ್ಲಿ ಅಮಿತ್‌ ಶಾ ಮಾತನಾಡಿದರು.

ಜಮ್ಮು ಕಾಶ್ಮೀರಕ್ಕೆ ಸಂವಿಧಾನ ವಿಧಿ 370 ಮತ್ತು 35ಎ ಅಡಿ ನೀಡಲಾಗಿದ್ದು ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಆರ್‌ಪಿಎಫ್ ನ 35 ಸಾವಿರ ಹುತಾತ್ಮರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಮಿತ್ ಶಾ ಹೇಳಿದರು.

ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಈಗ ಶಾಂತಿ ಮತ್ತು ಸಮೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಧರ ತ್ಯಾಗದ ಸ್ಮರಣಾರ್ಥ ಇತ್ತೀಚೆಗೆ ದೆಹಲಿಯಲ್ಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕ ಉದ್ಘಾಟಿಸಿದರು. ಸಿಆರ್‌ಪಿಎಫ್ ಯೋಧರ ತ್ಯಾಗ ಬಲಿದಾನಗಳನ್ನು ನಾವು ಮರೆಯುವಂತಿಲ್ಲ ಎಂದು ಗೃಹ ಸಚಿವರು ತಿಳಿಸಿದರು.

ಜನರ ಮತ್ತು ಸರಕಾರದ ಆಶೋತ್ತರಗಳನ್ನು ಈಡೇರಿಸಲು ಆರ್‌ಎಎಫ್ ಅನ್ನು 1999ರಲ್ಲಿ ಸ್ಥಾಪಿಸಲಾಯಿತು. ಗಲಭೆ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಸ್ಥಾಪಿಸಲಾಗಿತ್ತಾದರೂ ಈಗ ಈ ಸಂಸ್ಥೆ ವಿಪತ್ತು ನಿರ್ವಹಣೆ ಸೇರಿದಂತೆ ಹಲವು ಸಾಮಾಜಕ ವಿಷಯಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ ಎಂದು ಅಮಿತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ