ಆ್ಯಪ್ನಗರ

ಆಟಿಕೆ ಗನ್‌ ಹಿಡಿದು ಬಂದ ಕಳ್ಳ ಬರಿಗೈನಲ್ಲಿ ವಾಪಸ್‌!

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಆಗಂತುಕನೊಬ್ಬ ಆಟಿಕೆ ಗನ್‌ ಹಿಡಿದು ದಾಳಿ ನಡೆಸಲು ಯತ್ನಿಸಿದ್ದು, ಕ್ಯಾಶಿಯರ್‌ ಇಲ್ಲವೆಂದು ತಿಳಿದ ಬಳಿಕ ಬರಿಗೈನಲ್ಲಿ ವಾಪಸಾಗಿದ್ದಾನೆ.

ಟೈಮ್ಸ್ ಆಫ್ ಇಂಡಿಯಾ 15 Jun 2017, 2:47 pm
ಉಲ್ಲಾಸ್‌ನಗರ: ಇಲ್ಲಿನ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಆಗಂತುಕನೊಬ್ಬ ಆಟಿಕೆ ಗನ್‌ ಹಿಡಿದು ದಾಳಿ ನಡೆಸಲು ಯತ್ನಿಸಿದ್ದು, ಕ್ಯಾಶಿಯರ್‌ ಇಲ್ಲವೆಂದು ತಿಳಿದ ಬಳಿಕ ಬರಿಗೈನಲ್ಲಿ ವಾಪಸಾಗಿದ್ದಾನೆ.
Vijaya Karnataka Web robber holds up bank with toy gun flees without cash
ಆಟಿಕೆ ಗನ್‌ ಹಿಡಿದು ಬಂದ ಕಳ್ಳ ಬರಿಗೈನಲ್ಲಿ ವಾಪಸ್‌!


ಸಂಜೆ 6.30ರ ವೇಳೆಗೆ ಹೆಲ್ಮೆಟ್ ಧರಿಸಿದ್ದ ದರೋಡೆಕೋರ ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಬ್ಯಾಂಕ್‌ಗೆ ನುಗ್ಗಿ ಆಟಿಕೆ ಗನ್ ಹಿಡಿದು ಎಲ್ಲರನ್ನೂ ಬೆದರಿಸಿದ್ದಾನೆ. ಬಳಿಕ ಸಿಬ್ಬಂದಿಯನ್ನು ಒಂ ದೇ ಕಡೆ ಬರುವಂತೆ ಸೂಚಿಸಿ ಹಣ ನೀಡುವಂತೆ ಆವಾಜ್‌ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಕ್ಯಾಶಿಯರ್ ಮಧ್ಯಾಹ್ನ ಊಟಕ್ಕೆ ಹೊರಗಡೆ ಹೋಗಿದ್ದು, ಲಾಕರ್ ಕೀ ಅವರ ಬಳಿ ಇದೆ ಎಂದು ಮ್ಯಾನೇಜರ್ ಹೇಳಿದ್ದಾರೆ. ನಿರಾಸೆಗೊಂಡ ಕಳ್ಳ ಎಲ್ಲರನ್ನೂ ಒಂದು ಕೋಣೆಯಲ್ಲಿ ಕೂಡಿ ಹಾಕಿ, ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಈ ಮಧ್ಯೆ ತಾನು ಹಣ ದೋಚಲು ತಂದಿದ್ದ ಬ್ಯಾಗ್‌ ಮತ್ತು ಪ್ಲಾಸ್ಟಿಕ್‌ ಗನ್‌ ಅಲ್ಲೇ ಬಿಟ್ಟಿದ್ದಾನೆ.

ಕೂಡಲೇ ಬ್ಯಾಂಕ್‌ ಮ್ಯಾನೇಜರ್‌ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ಆದರೆ ಆತ ಹೆಲ್ಮೆಟ್‌ ಧರಿಸಿರುವುದರಿಂದ ಸಿಸಿಟಿವಿ ಪೂಟೇಜ್‌ನಲ್ಲೂ ಆತನ ಮುಖ ಚಹರೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಆತ ಬಿಟ್ಟು ಹೋದ ಬ್ಯಾಗ್ ಹಾಗೂ ಪಿಸ್ತೂಲ್‌ ಪರೀಕ್ಷಿಸಲು ಮುಂದಾದ ಪೊಲೀಸರಿಗೆ ಹಾಗೂ ಬ್ಯಾಂಕ್‌ ನೌಕರರಿಗೆ ಶಾಕ್‌ ಕಾದಿತ್ತು. ಏನೆಂದರೆ ಆತ ಹರಿದ ಬ್ಯಾಗ್‌ ಹಾಗೂ ಪ್ಲಾಸ್ಟಿಕ್‌ ಗನ್‌ ಹಿಡಿದೇ ಆವಾಜ್‌ ಹಾಕಿದ್ದನಂತೆ.

ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರೂ ಮೊದಲು ಬ್ಯಾಂಕ್‌ನವರಿಗೆ ಛೀಮಾರಿ ಹಾಕಿದ್ದು, ಒಂದು ಸೆಕ್ಯೂರಿಟಿ ಗಾರ್ಡ್‌ ನೇಮಕ ಮಾಡಿಕೊಳ್ಳುವಂತೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ