ಆ್ಯಪ್ನಗರ

ಮಹಾರಾಷ್ಟ್ರ: ಪ್ಲಾಸ್ಟಿಕ್‌ ನಿಷೇಧದಿಂದ 15 ಸಾವಿರ ಕೋಟಿ ರೂ. ನಷ್ಟ

ಮಹಾರಾಷ್ಟ್ರದಲ್ಲಿ ಮರು ಸಂಸ್ಕರಣೆ ಸಾಧ್ಯವಾಗದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಥರ್ಮೊಕೋಲ್‌ ಬಳಕೆ ಹಾಗೂ ಮಾರಾಟ ನಿಷೇಧದಿಂದ ಪ್ಲಾಸಿಕ್‌ ಉತ್ಪಾದಕ ಕಂಪನಿಗಳು 15 ಸಾವಿರ ಕೋಟಿ ರೂ...

Vijaya Karnataka 26 Jun 2018, 10:54 am
ಮುಂಬಯಿ: ಮಹಾರಾಷ್ಟ್ರದಲ್ಲಿ ಮರು ಸಂಸ್ಕರಣೆ ಸಾಧ್ಯವಾಗದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಥರ್ಮೊಕೋಲ್‌ ಬಳಕೆ ಹಾಗೂ ಮಾರಾಟ ನಿಷೇಧದಿಂದ ಪ್ಲಾಸಿಕ್‌ ಉತ್ಪಾದಕ ಕಂಪನಿಗಳು 15 ಸಾವಿರ ಕೋಟಿ ರೂ. ನಷ್ಟ ಅನುಭವಿಸಲಿವೆ. ಅಲ್ಲದೇ ಸುಮಾರು 3 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ.
Vijaya Karnataka Web Plastic


ಮಹಾರಾಷ್ಟ್ರದಲ್ಲಿ ಕಳೆದ ಶನಿವಾರದಿಂದ ಈ ನಿಷೇಧ ಕಾನೂನು ಜಾರಿಗೆ ಬಂದಿದ್ದು, ಇದರಿಂದ ಪ್ಲಾಸ್ಟಿಕ್‌ ಉದ್ಯಮಕ್ಕೆ ದೊಡ್ಡ ಹೊಡೆತಬಿದ್ದಿದೆ. ರಾಜ್ಯದ ಜಿಡಿಪಿ ಮೇಲೂ ಇದು ಪರಿಣಾಮ ಬೀರಲಿದೆ. 15 ಸಾವಿರ ಕೋಟಿ ರೂ. ನಷ್ಟವಾಗಲಿದ್ದು, 3 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈಗಾಗಲೇ 2500 ಉತ್ಪಾದಕರು ಒಕ್ಕೂಟದ ಸದಸ್ಯತ್ವದಿಂದ ದೂರ ಸರಿದಿದ್ದಾರೆ ಎಂದು ಭಾರತೀಯ ಪ್ಲಾಸ್ಟಿಕ್‌ ಬ್ಯಾಗ್‌ ಉತ್ಪಾದಕರ ಒಕ್ಕೂಟದ ಪ್ರಧಾನ ಕಾರ‍್ಯದರ್ಶಿ ನೀಮಿತ್‌ ಪುನಾಮಿಯಾ ಹೇಳಿದ್ದಾರೆ. ಈ ನಿಷೇಧವು ಏಕಪಕ್ಷೀಯವಾಗಿದೆ ಎಂದೂ ಅವರು ದೂರಿದ್ದಾರೆ. ನಿಷೇಧದ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರವು ಪ್ಲಾಸ್ಟಿಕ್‌ ಕವರ್‌ ಮತ್ತು ಇತರೆ ವಸ್ತುಗಳ ಮಾರಾಟಗಾರರಿಗೆ ದಾಸ್ತಾನು ಖಾಲಿ ಮಾಡಲು ಮೂರು ತಿಂಗಳ ಗಡುವು ವಿಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ