ಆ್ಯಪ್ನಗರ

ಉದ್ಘಾಟನಾ ದಿನದಂದೇ ಕೊಚ್ಚಿ ಹೋದ 389 ಕೋಟಿ ವೆಚ್ಚದ ಅಣೆಕಟ್ಟು

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಉದ್ಟಾಟಿಸ ಬೇಕಿದ್ದ 389 ಕೋಟಿ ವೆಚ್ಚದ ಅಣೆಕಟ್ಟು ಅಂತಿಮ ಕ್ಷಣದಲ್ಲಿ ಕುಸಿದ ಘಟನೆ ಭಾಗಲ್ಪುರ ಕಹಲ್ಗಾಂವ್‌ನಲ್ಲಿ ನಡೆದಿದೆ.

Agencies 20 Sep 2017, 4:55 pm
ಬಿಹಾರ: ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಉದ್ಟಾಟಿಸ ಬೇಕಿದ್ದ 389 ಕೋಟಿ ವೆಚ್ಚದ ಅಣೆಕಟ್ಟು ಅಂತಿಮ ಕ್ಷಣದಲ್ಲಿ ಕುಸಿದ ಘಟನೆ ಭಾಗಲ್ಪುರ ಕಹಲ್ಗಾಂವ್‌ನಲ್ಲಿ ನಡೆದಿದೆ.
Vijaya Karnataka Web rs 389 cr bihar dam collapses ahead of inauguration
ಉದ್ಘಾಟನಾ ದಿನದಂದೇ ಕೊಚ್ಚಿ ಹೋದ 389 ಕೋಟಿ ವೆಚ್ಚದ ಅಣೆಕಟ್ಟು


ಗಟೇಶ್ವರ್ ಪಂತ್ ಯೋಜನೆಯಡಿ ನೀರಾವರಿ ವ್ಯವಸ್ಥೆಯ ಸುಧಾರಣೆಗಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಬುಧವಾರ ಮುಂಜಾನೆ ಅಣೆಕಟ್ಟಿನ ಭಾಗವೊಂದು ಕುಸಿದು ಬಿದ್ದಿದೆ. ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಸತಿ ಪ್ರದೇಶಗಳಿಗೆ ನೀರು ನುಗ್ಗಿವೆ ಎಂದು ಇಂಡಿಯಾ ಟೈಮ್ಸ್‌ ವರದಿ ಮಾಡಿದೆ.

"ಕಳೆದ ರಾತ್ರಿ ಡ್ಯಾಂನೊಳಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದು ಹೀಗಾಗಿ ಅಣೆಕಟ್ಟಿನ ಭಾಗವೊಂದು ಕುಸಿದಿದೆ. ಈ ಘಟನೆಯಿಂದ ನೂತನವಾಗಿ ನಿರ್ಮಿಸಲಾದ ಯೋಜನೆಯ ಭಾಗಕ್ಕೆ ಹಾನಿಯಾಗಿಲ್ಲ" ಜಲಸಂಪನ್ಮೂಲ ಸಚಿವ ಲಲ್ಲನ್ ಸಿಂಗ್ ಹೇಳಿದ್ದಾರೆ.

"ಉದ್ಘಾಟನೆಗೂ ಮುನ್ನವೇ 389 ಕೋಟಿ ವೆಚ್ಚದ ಡ್ಯಾಮ್ ಕುಸಿದಿದೆ. ನಿತೀಶ್‌ ಕುಮಾರ್‌ ಅವರ ಭ್ರಷ್ಟಾಚಾರಕ್ಕೆ ಡ್ಯಾಮ್ ಕುಸಿತವೇ ಸಾಕ್ಷಿ' ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ