ಆ್ಯಪ್ನಗರ

ಮೋದಿ ನಾಯಕತ್ವ ಮೆಚ್ಚಿದ ಮೋಹನ್‌ ಭಾಗವತ್‌

ವಿಶೇಷ ವಿಧಿ ತೆರವುಗೊಳಿಸಿದ್ದು ಬಹುದೊಡ್ಡ ಸಾಧನೆ. ಇದನ್ನು ಜನ ಕೊಂಡಾಡಿದ್ದಾರೆ. ಆ ಮೂಲಕ 'ಮೋದಿ ಇದ್ದರೆ ಎಲ್ಲವೂ ಸಾಧ್ಯ' ಎನ್ನುವ ನಂಬಿಕೆಯನ್ನು ಕೂಡ ಪ್ರಧಾನಿ ಉಳಿಸಿಕೊಂಡಿದ್ದಾರೆ ಎಂದರು.

PTI 16 Aug 2019, 5:00 am
ನಾಗಪುರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ರದ್ದುಗೊಳಿಸಿದ ಕ್ರಮದ ಹಿಂದೆ ಇದ್ದ ದೇಶದ ಜನರ ಒತ್ತಾಸೆ ಮತ್ತು ಅಂತಹ ಒಂದು ನಿರ್ಧಾರ ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವ ಹಾಗೂ ಪ್ರಬಲ ಇಚ್ಛಾಶಕ್ತಿಯನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಶ್ಲಾಘಿಸಿದ್ದಾರೆ.
Vijaya Karnataka Web 11_Mohan_Bhagwat_Qamar3.


ವಿಶೇಷ ವಿಧಿ ತೆರವುಗೊಳಿಸಿದ್ದು ಬಹುದೊಡ್ಡ ಸಾಧನೆ. ಇದನ್ನು ಜನ ಕೊಂಡಾಡಿದ್ದಾರೆ. ಆ ಮೂಲಕ 'ಮೋದಿ ಇದ್ದರೆ ಎಲ್ಲವೂ ಸಾಧ್ಯ' ಎನ್ನುವ ನಂಬಿಕೆಯನ್ನು ಕೂಡ ಪ್ರಧಾನಿ ಉಳಿಸಿಕೊಂಡಿದ್ದಾರೆ ಎಂದರು.

ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಭಾಗವತ್‌, ಇಡೀ ದೇಶದ ಜನ 370ನೇ ವಿಧಿ ತೆರವಿಗೆ ಒಮ್ಮತದ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ಮೋದಿ ಅವರಿಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸುಲಭವಾಯಿತು ಎಂದರು.

ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ,''ದೇಶವು ಮಹಾನೀಯರ ಕನಸುಗಳನ್ನು ನನಸಾಗಿಸುವ ಪ್ರಯತ್ನದಲ್ಲಿದೆ. ಜನ ಸಾಮಾನ್ಯರ ಆಶೆ-ಆಕಾಂಕ್ಷೆಗಳು ಕೈಗೂಡಲಿವೆ. ಜಾಗತಿಕ ಮಟ್ಟದಲ್ಲಿ ಭಾರತ ಹೊಸ ಎತ್ತರಕ್ಕೆ ಏರಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ