ಆ್ಯಪ್ನಗರ

ಮೀಸಲಾತಿ ಬಗ್ಗೆ ಸೌಹಾರ್ದಯುತ ಚರ್ಚೆ ಅಗತ್ಯ: ಭಾಗವತ್‌

ಮೀಸಲಾತಿ ಕುರಿತಾದ ಚರ್ಚೆಗಳು ತೀವ್ರ ವಾದ-ಪ್ರತಿವಾದದಲ್ಲಿ ಅಂತ್ಯ ಕಾಣುತ್ತಿವೆ. ಬದಲಾಗಿ ಸಮಾಜದ ಎಲ್ಲ ವರ್ಗಗಳ ಜನರು ಸೌಹಾರ್ದಯುತವಾಗಿ ಚರ್ಚಿಸಿದರೆ ಒಳಿತು ಎಂದು ಹೇಳಿದ್ದಾರೆ.

PTI 19 Aug 2019, 5:00 am
ಹೊಸದಿಲ್ಲಿ: ಮೀಸಲಾತಿ ಪರ ಇರುವವರು ಮತ್ತು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web 11_Mohan_Bhagwat_Qamar3.


ಈ ಹಿಂದೆ ನಾನು ಮೀಸಲಾತಿ ಬಗ್ಗೆ ಮಾತನಾಡಿದಾಗ , ಅನಗತ್ಯ ಪ್ರತಿಕ್ರಿಯೆಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಬದಲಾಯಿಸಲಾಯಿತು. ಮೀಸಲಾತಿ ಬೇಡ ಎನ್ನುವವರು ಮೀಸಲಾತಿ ಪಡೆಯುತ್ತಿರುವವರು ಹಾಗೂ ಅದರ ಪರವಾಗಿರುವವರ ಇಂಗಿತವನ್ನು ಅರ್ಥೈಸಿಕೊಂಡು ನಂತರ ಮಾತನಾಡಬೇಕು. ಮೀಸಲಾತಿ ಬೇಕು ಎನ್ನುವವರು ಕೂಡ ವಿರೋಧಿಸುವವರ ಮನದ ಇಂಗಿತವನ್ನು ಮೊದಲು ತಿಳಿಯಬೇಕಿದೆ.

ಮೀಸಲಾತಿ ಕುರಿತಾದ ಚರ್ಚೆಗಳು ತೀವ್ರ ವಾದ-ಪ್ರತಿವಾದದಲ್ಲಿ ಅಂತ್ಯ ಕಾಣುತ್ತಿವೆ. ಬದಲಾಗಿ ಸಮಾಜದ ಎಲ್ಲ ವರ್ಗಗಳ ಜನರು ಸೌಹಾರ್ದಯುತವಾಗಿ ಚರ್ಚಿಸಿದರೆ ಒಳಿತು ಎಂದು ಇಂದಿರಾಗಾಂಧಿ ಮುಕ್ತ ವಿವಿಯಲ್ಲಿ ನಡೆದ ಕಾರ್ಯಕ್ರಮವೊಂದರ ಸಮಾರೋಪ ಸಮಾರಂಭದಲ್ಲಿ ಅವರು ಹೇಳಿದ್ದಾರೆ.

ಆರ್‌ಸ್‌ಎಸ್‌, ಸರಕಾರ, ಬಿಜೆಪಿ ಎಲ್ಲವೂ ಸ್ವತಂತ್ರ: ಆರ್‌ಎಸ್‌ಎಸ್‌ ಪ್ರಧಾನಿ ಮೋದಿ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಭಾಗವತ್‌ ಅವರು, '' ಆರ್‌ಎಸ್‌ಎಸ್‌, ಬಿಜೆಪಿ ಹಾಗೂ ಸರಕಾರ ಇವೆಲ್ಲವೂ ಬೇರೆ ಬೇರೆ. ಎಲ್ಲವೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಒಂದರ ಕ್ರಮಕ್ಕೆ ಮತ್ತೊಂದರ ಮೇಲೆ ಗೂಬೆ ಕೂರಿಸುವುದು ಸರಿ ಅಲ್ಲ. ಬಿಜೆಪಿಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಿದ್ದಾರೆ. ಸರಕಾರದಲ್ಲಿ ಕೂಡ ಆರ್‌ಎಸ್‌ಎಸ್‌ ಕಾರ್ಯಕರ್ತರಿದ್ದಾರೆ. ಕೆಲವೊಮ್ಮೆ ನಮ್ಮ ಸಲಹೆ ಸ್ವೀಕರಿಸುತ್ತಾರೆ. ಹಾಗೆಂದ ಮಾತ್ರಕ್ಕೆ ನಮ್ಮ ಸೂಚನೆಗಳನ್ನು ಪಾಲಿಸಲೇಬೇಕು ಎಂಬುದು ಕಡ್ಡಾಯವಲ್ಲ. ಅವರು ನಿರಾಕರಿಸಲು ಸ್ವತಂತ್ರರು '', ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ