ಆ್ಯಪ್ನಗರ

ಆರೆಸ್ಸೆಸ್‌ ವಿರುದ್ಧ ಬಿಹಾರ ಪೊಲೀಸರ ಗೂಢಚಾರಿಕೆ

ಆರೆಸ್ಸೆಸ್‌ ಪದಾಧಿಕಾರಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಅವರ ಹುದ್ದೆಯ ವಿವರಗಳನ್ನು ಸಂಗ್ರಹಿಸುವಂತೆ ಹೊರಡಿಸಿದ ಪತ್ರದ ಉದ್ದೇಶ ನೋಡಿದರೆ ಪದಾಧಿಕಾರಿಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇರಿಸುವಂತಿದೆ ಎಂದು ಬಿಜೆಪಿ ಆಪಾದಿಸಿದೆ.

PTI 18 Jul 2019, 5:00 am
ಪಟನಾ: ಆರೆಸ್ಸೆಸ್‌ ಮತ್ತು ಅದರ 19 ಅಂಗಸಂಸ್ಥೆಗಳ ಪದಾಧಿಕಾರಿಗಳ ಪೂರ್ಣ ವಿವರ ಸಂಗ್ರಹಿಸಿ ವಾರದೊಳಗೆ ಇಲಾಖೆ ಸಲ್ಲಿಸುವಂತೆ ಬಿಹಾರ ಪೊಲೀಸ್‌ ಇಲಾಖೆಯು ಜಿಲ್ಲಾ ಪೊಲೀಸ್‌ ಕೇಂದ್ರ ಕಚೇರಿಗಳಿಗೆ ಪತ್ರ ಬರೆದಿರುವುದು ಈಗ ಬೆಳಕಿಗೆ ಬಂದಿದ್ದು ವಿವಾದಕ್ಕೆ ಕಾರಣವಾಗಿದೆ. ಇಲಾಖೆಯ ಸ್ಪೆಷಲ್‌ ಬ್ರಾಂಚ್‌ ಮೆ 28ರಂದೇ ಎಲ್ಲಾ ಜಿಲ್ಲಾ ಪೊಲೀಸ್‌ ಕೇಂದ್ರ ಕಚೇರಿಗಳಿಗೆ ಈ ಪತ್ರ ಬರೆದಿತ್ತು. ಆರೆಸ್ಸೆಸ್‌ ಪದಾಧಿಕಾರಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಅವರ ಹುದ್ದೆಯ ವಿವರಗಳನ್ನು ಸಂಗ್ರಹಿಸುವಂತೆ ಹೊರಡಿಸಿದ ಪತ್ರದ ಉದ್ದೇಶ ನೋಡಿದರೆ ಪದಾಧಿಕಾರಿಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇರಿಸುವಂತಿದೆ ಎಂದು ಬಿಜೆಪಿ ಆಪಾದಿಸಿದೆ. ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಇದೆಲ್ಲವೂ ಗೊತ್ತಿದ್ದೂ ಸುಮ್ಮನಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದು ಮಿತ್ರಪಕ್ಷಗಳ ನಡುವೆ ವಿರಸಕ್ಕೆ ಕಾರಣವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಮಧ್ಯೆ ಪೊಲೀಸ್‌ ಇಲಾಖೆಯು, ಆರೆಸ್ಸೆಸ್‌ ಪದಾಧಿಕಾರಿಗಳಿಗೆ ಜೀವ ಭಯ ಇರುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
Vijaya Karnataka Web nitish kumar.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ