ಆ್ಯಪ್ನಗರ

ಅಮೆಜಾನ್‌ನಲ್ಲಿ ಸಿಗಲಿದೆ ಗೋಮೂತ್ರ ಅರ್ಕ, ಸೆಗಣಿ ಸೋಪ್‌, ಮೋದಿ ಕುರ್ತಾ

ಗೋಮೂತ್ರ ಮತ್ತು ಸೆಗಣಿಯ ಉತ್ಪನ್ನಗಳ ಬಗ್ಗೆ ನೀವು ನಂಬಿಕೆ ಹೊಂದಿದ್ದರೆ ಇನ್ನು ಮುಂದೆ ಅದು ಸುಲಭವಾಗಿ ಆನ್‌ಲೈನ್‌ ಮೂಲಕ ನಿಮ್ಮ ಕೈ ಸೇರಲಿದೆ.

TIMESOFINDIA.COM 19 Sep 2018, 10:24 am
ಆಗ್ರಾ: ಗೋಮೂತ್ರ ಮತ್ತು ಸೆಗಣಿಯ ಬಗ್ಗೆ ನೀವು ನಂಬಿಕೆ ಹೊಂದಿದ್ದರೆ ಇನ್ನು ಮುಂದೆ ಅದು ಸುಲಭವಾಗಿ ಆನ್‌ಲೈನ್‌ ಮೂಲಕವೇ ನಿಮ್ಮ ಕೈ ಸೇರಲಿದೆ.
Vijaya Karnataka Web 1


ಆರೆಸ್ಸೆಸ್‌ ನಡೆಸುತ್ತಿರುವ ಪ್ರಯೋಗಾಲಯವು ಇನ್ನು ಮುಂದೆ ಗೋಮೂತ್ರ ಉತ್ಪನ್ನಗಳು, ಸೆಗಣಿ ಸೋಪ್‌, ಮೋದಿ ಮತ್ತು ಯೋಗಿ ಕುರ್ತಾಗಳನ್ನು ಅಮೆಜಾನ್‌ನಲ್ಲಿ ಅಕ್ಟೋಬರ್‌ನಿಂದ ಮಾರಾಟ ಮಾಡಲಿದೆ.
ಮಥುರಾದಲ್ಲಿ ಆರೆಸ್ಸೆಸ್‌ ನಡೆಸುತ್ತಿರುವ ದೀನ ದಯಾಳ್‌ ಧಾಮವು ಆರಂಭದಲ್ಲಿ ಮೂವತ್ತು ಬಗೆಯ ಗೋಮೂತ್ರ ಮತ್ತು ಸೆಗಣಿಯಿಂದ ತಯಾರಿಸಲಾಗಿರುವ ಸೋಪ್‌, ಕಾಸ್ಮೆಟಿಕ್ಸ್‌ ಹಾಗೂ ಕಾಮಧೇನು ಅರ್ಕದಂಥ ಜೀರ್ಣಕಾರಿ ಚಿಕಿತ್ಸೆಕಾರಕಗಳನ್ನು ಮಾರಾಟ ಮಾಡಲಿದೆ. ಟೈಲರಿಂಗ್‌ ಘಟಕವು ಹತ್ತು ವಿನ್ಯಾಸಗಳ ಉಡುಪುಗಳನ್ನು ಮಾರಾಟ ಮಾಡಲಿದೆ. ಈ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಆರೆಸ್ಸೆಸ್‌ ವಕ್ತಾರ ಅರುಣ್‌ ಕುಮಾರ್‌ ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಈ ಮಾರಾಟ ಯಶಸ್ವಿಯಾದರೆ ಉತ್ಪನ್ನ ಹೆಚ್ಚಳ ಜತೆಗೆ ಉದ್ಯೋಗವು ಹೆಚ್ಚುತ್ತದೆ. ಕೇಂದ್ರವು ತಿಂಗಳಲ್ಲಿ ಒಂದು ಲಕ್ಷ ರೂ.ಗೂ ಹೆಚ್ಚಿನ ಸೌಂದರ್ಯವರ್ಧಕ ಮತ್ತು ಔಷಧಿ, ಮೂರು ಲಕ್ಷ ರೂ.ಗೂ ಹೆಚ್ಚಿನ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಕೇಂದ್ರದಲ್ಲಿ ತಯಾರಾಗುವ ಅರ್ಕವು ಗೋಮೂತ್ರ ಮತ್ತು ಸೋಂಪನ್ನು ಒಳಗೊಂಡಿದೆ. ಕರಿಮೆಣಸು ನೆಲ್ಲಿ, ತುಳಸಿ ಒಳಗೊಂಡ ಟಾನಿಕ್‌, ನಾನಾ ನೋವು ನಿವಾರಕ ಗಿಡಮೂಲಿಕೆಯುಕ್ತ ತೈಲಗಳು, ಚ್ಯವನಪ್ರಾಶ್‌, ಫೇಸ್‌ಪ್ಯಾಕ್‌, ಶ್ಯಾಂಪೂ, ಟೂತ್‌ಪೇಸ್ಟ್‌ ಕೂಡ ತಯಾರಾಗುತ್ತವೆ.

ಗೋ ಉತ್ಪನ್ನಗಳನ್ನು ಕೇಂದ್ರದ ಗೋಶಾಲೆಯಲ್ಲಿರುವ ಗೋವುಗಳಿಂದಲೇ ಸಂಗ್ರಹಿಸಲಾಗುತ್ತದೆ ಎಂದು ಕೇಂದ್ರದ ಉದ್ಯೋಗಿ ರಾಮ್‌ ಗೋಪಾಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ