ಆ್ಯಪ್ನಗರ

ರಂಜಾನ್ ಮಾಸದಲ್ಲಿ ಮಾಂಸ ಬಿಡಿ: RSS ಮುಖಂಡ

ರಂಜಾನ್‌ ತಿಂಗಳಿನಲ್ಲಿ ಮಾಂಸ ತಿನ್ನಬೇಡಿ ಎಂದು ಆರ್‌ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್‌ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 6 Jun 2017, 3:02 pm
ಹೊಸದಿಲ್ಲಿ: ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ ಆರ್‌ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್‌ ರಂಜಾನ್‌ ತಿಂಗಳಿನಲ್ಲಿ ಮಾಂಸ ತಿನ್ನಬೇಡಿ ಎಂದು ಮುಸ್ಲಿಂರಿಗೆ ಸಲಹೆ ನೀಡಿದ್ದಾರೆ.
Vijaya Karnataka Web rss leader says meat is a disease post iftar party
ರಂಜಾನ್ ಮಾಸದಲ್ಲಿ ಮಾಂಸ ಬಿಡಿ: RSS ಮುಖಂಡ


ಇದೇ ಸಂದರ್ಭದಲ್ಲಿ 'ಮಾಂಸ ಕಾಯಿಲೆ, ಹಾಲು ಔಷಧ' ಎಂಬ ಪ್ರವಾದಿ ಮಾತನ್ನು ಅವರು ಉಲ್ಲೇಖಿಸಿದರು.

ಈ ಹಿಂದೆಯೂ ಕುಮಾರ್‌ ಹಲವಾರು ವಿವಾದಾತ್ಮಕ ಹೇಳಿ ನೀಡಿದ್ದು, ಪಾಶ್ಚತ್ಯಾ ಸಂಸ್ಕೃತಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಲು ಕಾರಣ ಎಂಬ ಹೇಳಿಕೆ ನೀಡಿದ್ದರು.

'ಮೊದಲ ಪ್ರವಾದಿಯಿಂದ ಕೊನೆಯ ಪ್ರವಾದಿವರೆಗೆ ಹಾಗೂ ಅವರ ಪತ್ನಿಯರು ಕೂಡ ಮಾಂಸ ತಿನ್ನುತ್ತಿರಲಿಲ್ಲ. ಮಾಂಸ ಕಾಯಿಲೆ, ಹಾಲು ಔಷಧಿ ಎಂದು ಪ್ರವಾದಿ ಹೇಳಿದ್ದರು. ಅವರ ಪ್ರಕಾರ ಮಾಂಸ ತಿನ್ನುವುದೆಂದರೆ ವಿಷವನ್ನು ತಿಂದಂತೆ, ಇದರಿಂದ ಕಾಯಿಲೆ ಬರುವುದು, ಇದನ್ನು ತಿನ್ನಬಾರದೆಂದಿದ್ದರು,' ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಮುಸ್ಲಿಂ ರಾಷ್ಟ್ರೀಯ ಮಂಚ್‌ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಕುಮಾರ್‌ಗೆ ಆಮಂತ್ರಣ ನೀಡಬಾರದೆಂದು ಜಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ