ಆ್ಯಪ್ನಗರ

ಕೇರಳದಲ್ಲಿದ್ದಾರೆ 1129 ಕ್ರಿಮಿನಲ್‌ ಪೊಲೀಸರು!

ಆರ್‌ಟಿಐನಲ್ಲಿ ಬಹಿರಂಗವಾದ ಭಯಾನಕ ಸತ್ಯವಿದು

Samayam Malayalam 12 Apr 2018, 6:12 pm
ತಿರುವನಂತಪುರ: ಕೇರಳದಲ್ಲಿರುವ 1129 ಪೊಲೀಸರು ಕ್ರಿಮಿನಲ್‌ಗಳು ಎಂಬ ಭಯಾನಕ ಸತ್ಯವನ್ನು ಆರ್‌ಟಿಐ ಬಹಿರಂಗಗೊಳಿಸಿದೆ.
Vijaya Karnataka Web rti says 1129 criminals in kerala police
ಕೇರಳದಲ್ಲಿದ್ದಾರೆ 1129 ಕ್ರಿಮಿನಲ್‌ ಪೊಲೀಸರು!


ಇವರೆಲ್ಲರು ಅತ್ಯಾಚಾರ, ಭ್ರಷ್ಟಾಚಾರ, ಬೆದರಿಕೆ, ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ಮಾರಣಾಂತಿಕ ಹಲ್ಲೆ ಇತ್ಯಾದಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದಿದೆ.
ಈ ಪೈಕಿ 10 ಡಿವೈಎಸ್‌ಪಿಗಳು, 46 ಸಿಐಗಳು ಮತ್ತು ಎಎಸ್‌ಐ ಮತ್ತು ಎಸ್‌ಐ ಶ್ರೇಣಿಯಲ್ಲಿರುವ 230 ಪೊಲೀಸರು ಸೇರಿದ್ದಾರೆ ಎಂದು ಆರ್‌ಟಿಐ ವರದಿ ನೀಡಿದೆ. ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಹೆಚ್ಚಿನ ಪೊಲೀಸರು ರಾಜಧಾನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದರು ಎಲ್ಲಾ ಪೊಲೀಸ್‌ ಸೌಲಭ್ಯಗಳನ್ನು ಪಡೆಯುತ್ತಿರುವುದು ಅಚ್ಚರಿ ಎಂದೆನಿಸಿದೆ.
ಈ ಸುದ್ದಿಯನ್ನು ಮಲಯಾಳಂನಲ್ಲಿ ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ