ಆ್ಯಪ್ನಗರ

ಭಾರತದ ಸ್ವಾವಲಂಬನೆ ಹೆಜ್ಜೆಗಳನ್ನು 70 ವರ್ಷಗಳಿಂದ ಹಿಂಬಾಲಿಸುತ್ತಿದ್ದೇವೆ: ರಷ್ಯಾ ರಾಯಭಾರಿ!

ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆಯಾಗುವತ್ತ ಭಾರತ ಇಡುತ್ತಿರುವ ಹೆಜ್ಜೆಗಳನ್ನು, ರಷ್ಯಾ ಕಳೆದ 70 ವರ್ಷಗಳಿಂದ ಹತ್ತಿರದಿಂದ ಗಮನಿಸುತ್ತಿದೆ ಎಂದು ಭಾರತಕ್ಕೆ ರಷ್ಯಾದ ರಾಯಭಾರಿ ನಿಕೋಲಾಯ್ ಕುದ್ಶೇವ್ ಹೇಳಿದ್ದಾರೆ. ಭಾರತದ ಈ ಪ್ರಯತ್ನಕ್ಕೆ ರಷ್ಯಾ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದೂ ನಿಕೋಲಾಯ್ ಭರವಸೆ ನೀಡಿದ್ದಾರೆ.

Vijaya Karnataka Web 10 Aug 2020, 3:56 pm
ನವದೆಹಲಿ: ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆಯಾಗುವತ್ತ ಭಾರತ ಇಡುತ್ತಿರುವ ಹೆಜ್ಜೆಗಳನ್ನು, ರಷ್ಯಾ ಕಳೆದ 70 ವರ್ಷಗಳಿಂದ ಹತ್ತಿರದಿಂದ ಗಮನಿಸುತ್ತಿದೆ ಎಂದು ಭಾರತಕ್ಕೆ ರಷ್ಯಾದ ರಾಯಭಾರಿ ನಿಕೋಲಾಯ್ ಕುದ್ಶೇವ್ ಹೇಳಿದ್ದಾರೆ.
Vijaya Karnataka Web Nikolay Kudashev
ಭಾರತಕ್ಕೆ ರಷ್ಯಾ ರಾಯಭಾರಿ ನಿಕೋಲಾಯ್ ಕುದ್ಶೇವ್


ಎಲ್ಲ ಕ್ಷೇತ್ರಗಳಲ್ಲೂ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದ್ದು, ರಷ್ಯಾ ಈ ಹೆಜ್ಜೆ ಗುರುತುಗಳನ್ನು ಕಳೆದ 70 ವರ್ಷಗಳಿಂದಲೂ ಹಿಂಬಾಲಿಸುತ್ತಲೇ ಬಂದಿದೆ ಎಂದು ನಿಕೋಲಾಯ್ ಹೇಳಿದ್ದಾರೆ.

ಇಂಡೋ-ಪೆಸಿಫಿಕ್ ಒಪ್ಪಂದದಲ್ಲಿ ರಷ್ಯಾ ಸೆಳೆಯಲು ಭಾರತದ ಮಾಸ್ಟರ್ ಪ್ಲ್ಯಾನ್: ಚಿಂತೆಯಲ್ಲಿ ಡ್ರ್ಯಾಗನ್!

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ರಷ್ಯಾ ಅತ್ಯಂತ ನಂಬಿಗಸ್ಥ ಪಾಲುದಾರ ರಾಷ್ಟ್ರವಾಗಿದ್ದು, ಭಾರತ-ರಷ್ಯಾ ನಡುವಿನ ಈ ಸಹಭಾಗಿತ್ವ ಹೀಗೆಯೇ ಮುಂದುವರೆಯಲಿದೆ ಎಂದು ನಿಕೋಲಾಯ್ ಭರವಸೆ ವ್ಯಕ್ತಪಡಿಸಿದ್ದಾರೆ.


ಭಾರತ ಸ್ವಾವಲಂಬಿಯಾಗುವತ್ತ ರಷ್ಯಾ ನಿರಂತರವಾಗಿ ಸಹಾಯ ಮಾಡುತ್ತಲೇ ಬಂದಿದ್ದು, ಈ ಸಂಬಂಧ ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಯಗಲಿದೆ ಎಂದು ನಿಕೋಲಾಯ್ ಭರವಸೆ ವ್ಯಕ್ತಪಡಿಸಿದ್ದಾರೆ.

ರಷ್ಯಾ: 'ವಿಕ್ಟರಿ ಡೇ ಪರೇಡ್'‌‌ನಲ್ಲಿ ಭಾರತೀಯ ರಕ್ಷಣಾ ಪಡೆಗಳಿಂದ ಆಕರ್ಷಕ ಪಥಸಂಚಲನ!

ಭಾರತ ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಸ್ವಾವಲಂಬನೆಯತ್ತ ದೃಢ ಹೆಜ್ಜೆಗಳನ್ನಿರಿಸುವುದು ಸಂತಸದ ಸಂಗತಿ ಎಂದು ಈ ವೇಳೆ ನಿಕೋಲಾಯ್ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ