ಆ್ಯಪ್ನಗರ

ಬೇಟಿ ಬಚಾವೊಗೆ ಹೊಸ ಅಭಿಯಾನದ ಸಾಥ್‌

''ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ (ಸೆ.17)ದ ಅಂಗವಾಗಿ ನಡೆಯುತ್ತಿರುವ 'ಸೇವಾ ಸಪ್ತಾಹ'ದ ಭಾಗವಾಗಿ ಈ ಆಂದೋಲನ ಆರಂಭಿಸಲಾಗಿದೆ. ಸೆ.14ರಿಂದ ಆರಂಭಗೊಂಡಿರುವ 'ಸೇವಾ ಸಪ್ತಾಹ' ಸೆ.17ವರೆಗೆ ನಡೆಯಲಿದೆ.

PTI 16 Sep 2019, 5:00 am
ಪಟನಾ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ 'ಬೇಟಿ ಬಚಾವೊ, ಬೇಟಿ ಪಢಾವೊ' ಜಾಗೃತಿ ಜನಾಂದೋಲನ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿಬಿಜೆಪಿ 'ಸಬ್ಸೆ ಬಡಾ ಧನ್‌- ಬೇಟಿ, ಜಲ್‌ ಔರ್‌ ವನ್‌' ಎಂಬ ನೂತನ ಅಭಿಯಾನ ರೂಪಿಸಿದೆ. 'ಹೆಣ್ಣು ಮಗು, ನೀರು ಮತ್ತು ವನ- ಈ ಮೂರು ಬಹುದೊಡ್ಡ ಸಂಪತ್ತು' ಎನ್ನುವುದು ನೂತನ ಘೋಷಣೆಯ ಅರ್ಥ. ''ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ (ಸೆ.17)ದ ಅಂಗವಾಗಿ ನಡೆಯುತ್ತಿರುವ 'ಸೇವಾ ಸಪ್ತಾಹ'ದ ಭಾಗವಾಗಿ ಈ ಆಂದೋಲನ ಆರಂಭಿಸಲಾಗಿದೆ. ಸೆ.14ರಿಂದ ಆರಂಭಗೊಂಡಿರುವ 'ಸೇವಾ ಸಪ್ತಾಹ' ಸೆ.17ವರೆಗೆ ನಡೆಯಲಿದೆ. ಈ ಅವಧಿಯಲ್ಲಿತಮ್ಮ ಬಡಾವಣೆಗಳಲ್ಲಿಹೆಣ್ಣುಮಗು ಜನಿಸಿದರೆ ಸಿಹಿ ಹಂಚಿ ಸಂಭ್ರಮಿಸಲು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಸಸಿ ನೆಡುವುದು ಹಾಗೂ ಜಲ ರಕ್ಷಣೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕಾರ್ಯಕರ್ತರು ಆರಂಭಿಸಿದ್ದಾರೆ,'' ಎಂದು ಬಿಜೆಪಿ ತಿಳಿಸಿದೆ.
Vijaya Karnataka Web beti

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ